ಬೆಳ್ಳಾರೆ : ಶ್ರೀ ಪ್ರೆಶ್ ಪಿಶ್ ಸ್ಟಾಲ್ ಶುಭಾರಂಭ

ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಶ್ರೀ ಪ್ರೆಶ್ ಪಿಶ್ ಸ್ಟಾಲ್ ಅ.03 ರಂದು ಶುಭಾರಂಭಗೊಂಡಿತು. ಇಲ್ಲಿ ತಾಜಾ ಹಸಿ ಮೀನುಗಳು , ಕಡಲ ಉತ್ಪನ್ನಗಳು ಹಾಗೂ ಒಣ ಮೀನುಗಳು ಲಭ್ಯವಿರಲಿದೆ ಎಂದು ಮಾಲಕರಾದ ಸಚಿನ್ ಬಸ್ತಿಗುಡ್ಡೆ ತಿಳಿಸಿದ್ದಾರೆ.

ಮಂಗಳೂರು : ಗೌಡ ಒಕ್ಕಲಿಗರ ಸಂಘದ ಯುವಘಟಕದ ವತಿಯಿಂದ ಗಾಂಧಿಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಒಕ್ಕಲಿಗರ ಗೌಡರ ಯುವಘಟಕ ಮಂಗಳೂರು ಇವರ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಅವರ 151 ನೆ ಜನ್ಮದಿನಾಚರಣೆ ಅಂಗವಾಗಿ ಕದ್ರಿ ಪದವು ಶಾಲಾ ಹೊರ & ಒಳ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮಾತನಾಡಿ ಗಾಂಧೀಜಿಯವರ ಸರಳತೆ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಮತ್ತು ಅವರ ಪರಿಕಲ್ಪನೆಗೆ...
Ad Widget

ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಕೂತ್ಕುಂಜ ಕಾಲೋನಿಯಲ್ಲಿ ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ

ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಪಂಜದ ಕೂತ್ಕುಂಜ ಕಾಲೋನಿಯಲ್ಲಿ ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬ್ ನ ಅಧ್ಯಕ್ಷರಾದ ಲಯನ್ ಕುಮಾರಸ್ವಾಮಿಯವರು ವಹಿಸಿದ್ದರು. ಮಾಜಿ ಪಂಚಾಯತ್ ಅಧ್ಯಕ್ಷ ಲಯನ್ ಕಾರ್ಯಪ್ಪ ಚಿದ್ಗಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಲಯನ್ ಬಾಲಕೃಷ್ಣ ಕುದ್ವ, ಕೋಶಾಧಿಕಾರಿ ಲಯನ್ ಕರುಣಾಕರ ಎಣ್ಣೆಮಜಲ್,ಐಪಿಪಿ ಲಯನ್ ಸುರೇಶ್...

ಅ.4 ರಂದು ಅರೆಭಾಷೆಗೆ ಅನುವಾದಿತ ಕೃತಿ “ಸುದಾರಣೆ” ಬಿಡುಗಡೆ

ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರ 122ನೇ ಕೃತಿ ಸುಧಾರಣೆಯನ್ನು ಯುವ ಸಾಹಿತಿ ಯೋಗೀಶ್ ಹೊಸೊಳಿಕೆಯವರು ಅರೆಭಾಷೆಗೆ ಅನುವಾದ ಮಾಡಿದ್ದಾರೆ. ನಮ್ಮ ಆಚಾರ-ವಿಚಾರಗಳ ಚಿಂತನೆ ಬರಹವೇ- "ಸುದಾರಣೆ" ಕೃತಿ. ಇದರ ಬಿಡುಗಡೆ ಸಮಾರಂಭವು ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ಅ.೪ರಂದು ಬೆಳಗ್ಗೆ ೧೦ಗಂಟೆಗೆ ನಡೆಯಲಿದ್ದು ಮೂಲಕ ಕೃತಿಕಾರ ಶ್ರೀ ಚೈತನ್ಯ ಸ್ವಾಮೀಜಿಯವರು ಕೃತಿ ಬಿಡುಗಡೆಗೊಳಿಸಿದ್ದಾರೆ ಎಂದು ಯೋಗೀಶ್...

ದೈವ ನರ್ತಕ ಕುಸುಮಾಧರ ಅಡ್ಡನಪಾರೆ ನಿಧನ

ದೇವಚಳ್ಳ ಗ್ರಾಮದ ಅಡ್ಡನಪಾರೆ ದಿ.ಬಟ್ಯ ಅಜಲ ರ ಪುತ್ರ ಕುಸುಮಾಧರ ಅಡ್ಡನಪಾರೆ ಅಲ್ಪಕಾಲದ ಅಸೌಖ್ಯದಿಂದ ಅ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜ್ವರ, ವಾಂತಿ ಭೇದಿ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಉಲ್ಬಣಿಸಿ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗಲಿಲ್ಲವೆಂದು ತಿಳಿದುಬಂದಿದೆ. ಅವರಿಗೆ 32 ವರ್ಷ ವಯಸ್ಸಾಗಿತ್ತು....

ಮಡಪ್ಪಾಡಿ : ಸ್ವಚ್ಛತಾ ಕಾರ್ಯಕ್ರಮ

ಯುವಕ ಮಂಡಲ (ರಿ) ಮಡಪ್ಪಾಡಿ ಗ್ರಾಮ ಪಂಚಾಯತ್ ಮಡಪ್ಪಾಡಿ ಹಾಗೂ ಧರ್ಮಸ್ಥಳ ಗ್ರಾಮೋಭಿವೃದ್ಧಿ ಸಂಘ ಮಡಪ್ಪಾಡಿ, ಮತ್ತು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಡಪ್ಪಾಡಿ ಶಾಲಾ ವಠಾರ ಹಾಗೂ ಯುವಕ ಮಂಡಲ ಸಭಾಭವನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಗ್ರಾಮ...

ಸುಳ್ಯ ರೋಟರಿಗೆ ಅಂತರರಾಷ್ಟ್ರೀಯ ಮನ್ನಣೆ

2019-20 ನೇ ಸಾಲಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ರೋಟರಿ ಜಿಲ್ಲೆ 3181 ರಲ್ಲಿ ಅದ್ವಿತೀಯ ಸಾಧನೆ ಮಾಡಿದ ಸುಳ್ಯ ರೋಟರಿ ಸಂಸ್ಥೆ ಗೆ ಅಂತರಾಷ್ಟ್ರೀಯ ಅಧ್ಯಕ್ಷರು ಕೊಡಮಾಡುವ Presidential Citation Award ತನ್ನದಾಗಿಸಿಕೊಂಡಿದೆ.ಕಳೆದ ಸಾಲಿನಲ್ಲಿ ಮೂವತ್ತಕ್ಕೂ ಅಧಿಕ ಜಿಲ್ಲಾ ಪ್ರಶಸ್ತಿಗಳೊಂದಿಗೆ ಜಿಲ್ಲೆಯಲ್ಲಿ ದ್ವಿತೀಯ ಅತ್ಯುತ್ತಮ ಕ್ಲಬ್ ಅಗಿ ಹೊರಹೊಮ್ಮಲು ಕಾರಣರಾಗಿದ್ದ ಕಳೆದ ಸಾಲಿನ ರೋಟರಿ ಅಧ್ಯಕ್ಷರಾದ...

ಬಳ್ಪ : ದೈವನರ್ತಕ ಗೋಪಾಲ ಅಜಿಲ ನಿಧನ

ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ, ಬಳ್ಳ ಗ್ರಾಮದ ಬೀದಿಗುಡ್ಡೆ ಸಂಪ್ಯಾಡಿ ನಿವಾಸಿ ಗೋಪಾಲ ಅಜಿಲ ಅ. 3 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಕಿಡ್ನಿ ಮತ್ತು ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ತಾಯಿ ಪುಟ್ಟಮ್ಮ , ಸಹೋದರಿಯರಾದ ಶೇಷಮ್ಮ ಗೋಪಿ , ಅಕ್ಕು , ಗುಲಾಬಿ...

ದೇವ ಬಿಜೆಪಿ ವತಿಯಿಂದ ಗಾಂಧಿಜಯಂತಿ ಆಚರಣೆ – ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಭವ್ಯಳಿಗೆ ಸನ್ಮಾನ

151 ನೇ ಗಾಂಧಿಜಯಂತಿ ಆಚರಣೆ ಪ್ರಯುಕ್ತ ಬಿಜೆ ಪಿ ದೇವ ಬೂತ್ ಸಮಿತಿ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ದೇವ ಕಾಲನಿಯ ಸೀತಾರಾಮ ಮತ್ತು ಕಮಲ ದಂಪತಿಗಳ ಪುತ್ರಿ ಭವ್ಯಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವ ಬೂತ್ ನ ಅಧ್ಯಕ್ಷ ಯೋಗಿಶ್ ದೇವ, ಕಾರ್ಯದರ್ಶಿ ಪ್ರದೀಪ್ ಕುತ್ಯಾಳ, ಪಂಚಾಯತ್...

ಸಂಪಾಜೆ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಸಂಪಾಜೆ ವಲಯ ಕಾಂಗ್ರೆಸ್ ಸಭೆಯು ಕಲ್ಲುಗುಂಡಿ ಸೊಸೈಟಿ ಸಭಾಭವನದಲ್ಲಿ ನಡೆಯಿತು ಸಭೆಯಲ್ಲಿ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಹತ್ರಾಸೋ ಬಳಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಹಾಗೂ ಕಾಂಗ್ರೆಸ್ ರಾಷ್ಟ್ರನಾಯಕರಾದ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿಯವರ ಬಗ್ಗೆ ಉತ್ತರಪ್ರದೇಶ ಪೊಲೀಸರು ನಡೆದುಕೊಂಡ ರೀತಿಯನ್ನು ಖಂಡಿಸಿ ನಿರ್ಣಯವನ್ನು ಮಾಡಲಾಯಿತು. ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿ...
Loading posts...

All posts loaded

No more posts

error: Content is protected !!