- Tuesday
- July 14th, 2026
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ಹಾಗೂ ಬಿಎಮ್ಎಸ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕಿನ ರಬ್ಬರ್ ಟ್ಯಾಪರ್ಸ ಮಜ್ದೂರ್ ಸಂಘದ ಸಮಿತಿ ರಚನೆ ಮಾಡಲಾಯಿತು.ಈ ಕಾರ್ಯಕ್ರಮದ ಸಬಾಧ್ಯಕ್ಷರಾಗಿ ಅಚ್ಚುತ ಪ್ರಭು ಮಾತನಾಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು, ಸೌಲಭ್ಯಗಳನ್ನು...
ಶ್ರೀ ಕ್ಷೇ.ಧ.ಗ್ರಾ. ಯೋ, ಬಿ.ಸಿ.ಟ್ರಸ್ಟ್ ಬಳ್ಪ ಒಕ್ಕೂಟ, ಹಿಂದೂ ಜಾಗರಣ ವೇದಿಕೆ ಬಳ್ಪ, ವರ್ತಕರ ಸಂಘ ಬಳ್ಪ, ಇವುಗಳ ಜಂಟಿ ಆಶ್ರಯದಲ್ಲಿ ಅ.11 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ವೈ.ಟಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕ ಸೀತಾರಾಮ ಬಳ್ಪ, ಒಕ್ಕೂಟದ ಅಧ್ಯಕ್ಷ ಮೋಹನ್ ಬಿ.ಕೆರೆ, ಹಿಂದೂ...
ಭಾರತೀಯ ಜನತಾ ಪಾರ್ಟಿ ಪೆರುವಾಜೆ, (ಪೆರುವಾಜೆ, ಮುಕ್ಕೂರು, ಮುರ್ಕೆತ್ತಿ )ಕುಟುಂಬ ಮಿಲನ ಕಾರ್ಯಕ್ರಮವು ಪೆರುವಾಜೆಯ ಜೆ .ಡಿ. ಆಡಿಟೋರಿಯಂನಲ್ಲಿ ಅ.11 ರಂದು ಜರುಗಿತು. ಶಾಸಕ ಎಸ್.ಅಂಗಾರರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕುಟುಂಬ ಮಿಲನದ ಪ್ರಾಮುಖ್ಯತೆ ಮತ್ತು ಬಿಜೆಪಿ ನಡೆದು ಬಂದ ಹಾದಿಯನ್ನು ತಿಳಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಮತ್ತು ಸುಳ್ಯ ಪ್ರಭಾರಿ ರಾಧಾಕೃಷ್ಣ ರೈ ಬೂಡಿಯಾರು ಮುಖ್ಯ...
ಸುಳ್ಯದ ಶಾಂತಿನಗರದಲ್ಲಿ ಕಳಗಿ ಹತ್ಯೆ ಆರೋಪಿ ಸಂಪತ್ ಹತ್ಯೆಗೆ ಸಂಬಂಧಿಸಿದಂತೆ ಇಂದು (ಅ.11) ಐವರನ್ನು ಬಂಧಿಸಲಾಗಿದೆ. ಸಂಪತ್ ಜೊತೆ ಕೊಲೆ ಆರೋಪಿ ಮನು ಕೊಲೆಯಾದ ಸಂಪತ್ ,ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನು ಪಡೆದು ಹೊರಗೆ ಬಂದಿದ್ದ. ಅ. 8 ರಂದು ಬೆಳಿಗ್ಗೆ ಸಂಪತ್ ಅವರ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ...
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಮರಪಡ್ನೂರು ಚೊಕ್ಕಾಡಿ ಒಕ್ಕೂಟದ ಸದಸ್ಯರಿಂದ ಅ.11 ರಂದು ಅಜ್ಜನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಯಿತು. ಶ್ರಮದಾನ ಕಾರ್ಯದಲ್ಲಿ ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿ ಹಾಗೂ ಎಲ್ಲಾ ತಂಡದ ಸದಸ್ಯರು ಭಾಗವಹಿಸಿದರು.
ರಾಜ್ಯದಲ್ಲಿ ಶಿಕ್ಷಕರಿಗೆ ಮಕ್ಕಳಿಗೆ ಕೋವಿಡ್-19 ಹರಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಆದರಿಂದ ಶಿಕ್ಷಕರ ಮತ್ತು ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಅ. 12 ರಿಂದ 30 ವರೆಗೆ ಶಾಲೆ ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ತರಗತಿಗಳನ್ನು ಸ್ಥಗಿತಗೊಳಿಸಿ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ.
ಐವರ್ನಾಡು ಮುಖ್ಯರಸ್ತೆ ಸಮೀಪ ವಿನಯ್ ಕುಮಾರ್ ಉದ್ದಂಪಾಡಿ ಮಾಲಕತ್ವದ ಶ್ರೀ ಮಹಾಮ್ಮಾಯಿ ಅಟೋವರ್ಕ್ಸ್ ಅ.14 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಿಧದ ದ್ವಿಚಕ್ರ ವಾಹನಗಳ ರಿಪೇರಿ ಕೆಲಸಗಳನ್ನು ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶಾಂತಿನಗರ ಪದ್ಮನಾಭ ಎಂಬವರ ಮನೆಯಲ್ಲಿ ಹತ್ಯೆಗೀಡಾದ ಸಂಪತ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಈಗಾಗಲೇ ಪೊಲೀಸರ ಬಲೆಗೆ ಸಿಕ್ಕಿ ರುವುದಾಗಿ ತಿಳಿದುಬಂದಿದೆ. ಅವರ ಮೇಲೆ ಕಾನೂನು ಕ್ರಮಗಳು , ವಿಚಾರಣೆಗಳು ಎಲ್ಲವೂ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ನಡೆಸಲಾಗುತ್ತದೆ. ಕೊಲೆ ನಡೆದ ಮನೆಯಲ್ಲಿ ಬಡ ದಂಪತಿಗಳು ತಮ್ಮ 4 ವರ್ಷದ ಪುಟ್ಟ ಮಗುವಿನೊಂದಿಗೆ...
ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಮಂಡೆಕೋಲು, ಕನಕಮಜಲು ಹಾಗೂ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ...
ವಿದ್ಯಾರ್ಥಿಗಳು ಹೊಸ ದೃಷ್ಟಿ ಕೋನವನ್ನು ಬೆಳೆಸಿಕೊಳ್ಳಬೇಕು.ಈಗ ತಮ್ಮ ಪ್ರತಿಭೆ ತೋರ್ಪಡಿಸಲು ಅಗಾಧ ಅವಕಾಶಗಳು ಸಿಗುತ್ತಿವೆ.ಅದನ್ನು ಉಪಯೋಗಿಸುವ ಚಾಣಾಕ್ಷತನ ವಿದ್ಯಾರ್ಥಿಗಳಿಗಿರಬೇಕು. ಕಂಫೋರ್ಟ್ ಜೋನ್ ನಿಂದ ನೀವೆಲ್ಲರೂ ಹೊರಬರಬೇಕು.ನಿಮ್ಮನ್ನು ಉಳಿದವರೊಂದಿಗೆ ಹೋಲಿಸಿಕೊಳ್ಳಬೇಡಿ. ಚರಿತ್ರೆಯಿಂದ ನಾವು ಪಾಠ ಕಲಿಯಬೇಕು. ನಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕುಎಂದು ಎಂ.ಬಿ.ಪೌಂಡೇಶನ್ ನ ಅಧ್ಯಕ್ಷ ಶ್ರೀ ಎಂ.ಬಿ.ಸದಾಶಿವ ಹೇಳಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ...
Loading posts...
All posts loaded
No more posts
