ರೈತರ ಹೋರಾಟ ರೈತರ ಹಕ್ಕಿಗಾಗಿಯೇ ಹೊರತು ರಾಜಕೀಯ ಪಕ್ಷಕ್ಕಾಗಿ ಅಲ್ಲ. ರೈತರ ಬಗ್ಗೆ ಮಾತನಾಡುವ ನೈತಿಕತೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರಿಗೆ ಇಲ್ಲ – ಲೋಲಜಾಕ್ಷ ಭೂತಕಲ್ಲು

ದೇಶದಾದ್ಯಂತ ರೈತರ ಪ್ರತಿಭಟನೆ ರೈತರ ಹಕ್ಕಿಗಾಗಿ ನಡೆಯುತ್ತಿದ್ದು, ಆಡಳಿತ ಪಕ್ಷದಲ್ಲಿ ಇರುವ ರೈತ ಸಂಘಟನೆಯವರು ರೈತ ಮೋರ್ಚಾದ ಹೆಸರಿನಲ್ಲಿ ಪ್ರಾಮಾಣಿಕ ರೈತರನ್ನು ಕಡೆಗಣಿಸುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರು ರೈತರ ಬಗ್ಗೆ ಮಾತನಾಡುವ ನೈತಿಕತೆ ಇವರಲ್ಲಿ ಇಲ್ಲ ಎಂದು ಹಸಿರು ಸೇನೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ...

ಜಿಲ್ಲಾ ಸಹಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೆ.ಟಿ.ವಿಶ್ವನಾಥರಿಗೆ ಸನ್ಮಾನ

ದ.ಕ.ಜಿಲ್ಲಾ ಸಹಕಾರಿ ನೌಕರರ ಸಹಕಾರ ಸಂಘದ 89ನೇ ವಾರ್ಷಿಕ ಮಹಾಸಭೆ ಮಂಗಳೂರಿನ ಸಂಘದ ಪ್ರಧಾನ ಕಚೇರಿಯ ಉನ್ನತಿ ಸಭಾಭವನದಲ್ಲಿ ಇಂದು ನಡೆಯಿತು.ಈ ಸಂದರ್ಭದಲ್ಲಿ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿಯಿಂದ ಸಮಾಜರತ್ನ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ಸಂಘದ ನಿರ್ದೇಶಕ, ವೆಂಕಟರಮಣ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥರನ್ನು ಸನ್ಮಾನಿಸಲಾಯಿತು.   ಡಿ.ಸಿ‌.ಸಿ‌‌.ಬ್ಯಾಂಕ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ ಸನ್ಮಾನಿಸಿದರು. ಮಹಾಪ್ರಬಂಧಕ...
Ad Widget

ಕಳಂಜ ಬಾಳಿಲ ಸಹಕಾರಿ ಸಂಘದ ಮಹಾಸಭೆ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2019 - 20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.12 ರಂದು ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ನಿರ್ದೇಶಕರಾದ ಕೆ.ಅಜಿತ್ ರಾವ್, ಬಿ.ಸುಭಾಶ್ಚಂದ್ರ ರೈ,...

ಡಿ.13 : ಮಡಪ್ಪಾಡಿ ಸೊಸೈಟಿ ಮಹಾಸಭೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಂಘದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.13 ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 10.30 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಲಿದೆ. ಸಂಘದ ಎಲ್ಲಾ ಸದಸ್ಯರು ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಅಧ್ಯಕ್ಷರು...

ಗಾಂಧಿನಗರ : ಎಂ.ಕೆ. ಕನ್ಸಲ್ಟೆಂಟ್ಸ್ ಕಚೇರಿ ಶುಭಾರಂಭ

ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ರವರ ಮಾಲಕತ್ವದ ಎಂಕೆ ಕನ್ಸಲ್ಟೆಂಟ್ ಕಚೇರಿ ಗಾಂಧಿನಗರ ಗ್ಲೋಬಲ್ ಟವರ್ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸೈಯದ್ ಜೈನುಲ್ ಅಬಿದಿನ್ ತಂಙಳ್ ಜಯನಗರ ದುವಾ ನೆರವೇರಿಸಿದರು. ನೂತನ ಸಂಸ್ಥೆಯನ್ನು ಸುಳ್ಯ ನ ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ , ಹಾಗೂ ಗಾಂಧಿನಗರ ಕೇಂದ್ರ ಜುಮಾ...

ಸಾರಿಗೆ ನೌಕರರ ಮುಷ್ಕರ ಆರಂಭ : ಪ್ರಯಾಣಿಕರ ಪರದಾಟ – ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ

ಇಂದಿನಿಂದ ಸಾರಿಗೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ನೌಕರರ ಸಂಘದ ತೀರ್ಮಾನದಂತೆ ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವಂತಾಗಿದೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರು ಆರಂಭಿಸಿದ ಮುಷ್ಕರ ಮುಂದುರಿದ ಕಾರಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್...

ಡಿ.13 : ಬಳ್ಪದಲ್ಲಿ ರಕ್ತದಾನ ಶಿಬಿರ

ಹಿಂದೂ ಜಾಗರಣ ವೇದಿಕೆ ಬಳ್ಪ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಡಿ.13 ರಂದು ಬೆಳಗ್ಗೆ ಗಂಟೆ 9ಕ್ಕೆ ಬಳ್ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸುಳ್ಯದಲ್ಲಿ ಆರೋಗ್ಯಾಧಿಕಾರಿಯಾಗಿದ್ದು ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದ ರವಿಕೃಷ್ಣ ಪುಣಚ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ

ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ರವಿಕೃಷ್ಣ ಪುಣಚ ಅವರು ಅಧಿಕಾರಿಗಳ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.ಇನ್ನು ಆರೋಗ್ಯಾಧಿಕಾರಿ ನನ್ನ ಸಾವಿಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎಂದು ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಸುಳ್ಯ ದಿಂದ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದರು. ನನಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ...

ಅಂಬೇಡ್ಕರ್ ರಕ್ಷಣಾ ವೇದಿಕೆ – ಜಿಲ್ಲಾ ಅಧ್ಯಕ್ಷರಾಗಿ ಪಿ. ಸುಂದರ ಪಾಟಾಜೆ – ತಾಲೂಕು ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ- ಮಹಿಳಾ ಅಧ್ಯಕ್ಷರಾಗಿ ಸುಮಿತ್ರ ಪಾಟಾಜೆ

ಅಂಬೇಡ್ಕರ್ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆ ದ.ಕ ಜಿಲ್ಲಾಧ್ಯಕ್ಷರಾಗಿ ಪಿ. ಸುಂದರ ಪಾಟಾಜೆ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಸುಳ್ಯ ತಾಲೂಕು ಸಮತಿಯ ಮಹಿಳಾ ಅಧ್ಯಕ್ಷರಾಗಿ ಸುಮಿತ್ರ ಪಾಟಾಜೆ ಉಪಾಧ್ಯಕ್ಷರಾಗಿ ಮಂಜುನಾಥ ಶಾಂತಿ ಮೂಲೆ ಐವರ್ನಾಡು, ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿಯಾಗಿ ಚಿದಾನಂದ ಕಟ್ಟಕೊಡಿ, ಸುಳ್ಯ ತಾಲೂಕು ಜತೆ ಕಾರ್ಯದರ್ಶಿ ಸಂದೇಶ...

ಎಸ್.ಸಿ, ಎಸ್.ಟಿ, ಗೆ ಸಂಬಂಧಪಟ್ಟ ಕಟ್ಟಡದ ದುರ್ಬಳಕೆ ಗೊಂಡಿರುವ ಬಗ್ಗೆ ಸೂಕ್ತ ಕ್ರಮಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ

ಸುಳ್ಯ ನಗರ ಪಂಚಾಯತ್ ಗೆ ಸಂಬಂಧಪಟ್ಟ ಗಾಂಧಿನಗರದಲ್ಲಿ ಇರುವ ವಾಣಿಜ್ಯ ಕಟ್ಟಡ ದುರ್ಬಳಕೆ ಗೊಂಡಿರುವುದಾಗಿ ಈ ಕಟ್ಟಡಗಳಲ್ಲಿ ಇತರ ಜಾತಿಯವರು ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಇಂದು ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮತ್ತು ನ.ಪಂ. ಮುಖ್ಯ...
Loading posts...

All posts loaded

No more posts

error: Content is protected !!