- Friday
- July 10th, 2026
ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲದ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಜ.14 ರಂದು ಜರುಗಿತು. ಈ ಸಂದರ್ಭದಲ್ಲಿ ಸಮಿತಿಯ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ನಿಸರ್ಗ ಯುವಕ ಮಂಡಲದ 2020-2021ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ ಜ.10 ರಂದು ಐನೆಕಿದು ಶಾಲಾ ವಠಾರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶಶಿಧರ್ ಕತ್ತಿಮಜಲ್ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸದಸ್ಯರಾದ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ, ಐನೆಕಿದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ 14 ವರ್ಷಗಳಿಂದ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಕಾಣಿಯೂರು ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಕುಸುಮಾವತಿ ಮತ್ತು 9 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಬಂಟ್ವಾಳಕ್ಕೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಜ.9 ರಂದು ಮುರುಳ್ಯ ಶಾಂತಿನಗರ...
ಮಂಗಳೂರಿನ ಪ್ರತಿಷ್ಠಿತ ಸ್ವರ್ಣೋದ್ಯಮಿ, ಸತ್ಯ, ಶುದ್ಧ ಮನಸ್ಸಿನ ಸನ್ಮಾನ್ಯ ಶ್ರೀ ರಮೇಶ್ ಕೃಷ್ಣ ಶೇಟ್ ರವರ ಶೈಕ್ಷಣಿಕ, ಧಾರ್ಮಿಕ ಸಮಾಜಸೇವೆಯನ್ನು ಪರಿಗಣಿಸಿ ಅಮೇರಿಕಾದ 'ಐಸ್ಟೀನ್' ವಿಶ್ವವಿದ್ಯಾನಿಲಯವು 2 ವರ್ಷಗಳ ಹಿಂದೆ ಗೌರವ ಡಾಕ್ಟರೇಟ್ ಗೆ ಆಯ್ಕೆಮಾಡಿದ್ದು, ಅವರ ಅನಾರೋಗ್ಯ ಹಾಗೂ ಕೋವಿಡ್ ನಿಬಂಧನೆಯ ಹಿನ್ನೆಲೆಯಿಂದ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಸದ್ಯ ಅವರ ಗೌರವ ಡಾಕ್ಟರೇಟ್ ನ್ನು...
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಬಾಳಿಲ - ಮುಪ್ಪೇರ್ಯ ಬಿಜೆಪಿ ಕಾರ್ಯಕರ್ತರು ಬಾಳಿಲದಲ್ಲಿ ಸಂಭ್ರಮಾಚರಣೆ ನಡೆಸಿದರು. ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಾಸಕ ಅಂಗಾರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಯಲ್ಲಿ ಕುಕ್ಕೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ನೂತನ ಸಚಿವರಿಗೆ ಜಯಕಾರ ಮೊಳಗಿಸಿದರು
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅರಂತೋಡಿನ ಬಿಜೆಪಿ ಕಾರ್ಯಕರ್ತರು ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಂದ್ರ ಮರ್ಕಂಜ, ಪುಷ್ಪಾಧರ ಕೋಡಂಕೇರಿ, ಬಿಜೆಪಿ ಕಾರ್ಯಕರ್ತರದ ರೋಹಿತ್ ಕಲ್ಲುಗದ್ದೆ, ವಿಜಯಕುಮಾರ್ ಶುಂಠಿಯಡ್ಕ, ನವೀನ...
ಸತತ 28 ವರ್ಷಗಳಿಂದ ಶಾಸಕರಾಗಿದ್ದ ಅಂಗಾರರಿಗೆ ಸಚಿವ ಸ್ಥಾನ ಸಿಕ್ಕಿರುವುದು ಕಾರ್ಯಕರ್ತರಿಗೆ ಸಂಭ್ರಮ ತಂದುಕೊಟ್ಟಿದೆ. ಕೊಲ್ಲಮೊಗ್ರ ಪೇಟೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಂಹಿ ಹಂಚಿ ಸಂಭ್ರಮಾಚರಿಸಿದರು. ಈ ವೇಳೆ ತಾ.ಪಂ. ಹಾಗೂ ಗ್ರಾ.ಪಂ ಸದಸ್ಯ ಉದಯ ಕೊಪ್ಪಡ್ಕ, ಬಿ.ಜೆ.ಪಿ ಬೂತ್ ಕಾರ್ಯದರ್ಶಿ ಉದಯ ಶಿವಾಲ ಹಾಗೂ ಮನೋಜ್ ಪೆರ್ನಾಜೆ ಶೇಖರಪ್ಪ ಬೆಂಡೋಡಿ ಮತ್ತು ಕಾರ್ಯಕರ್ತರಿದ್ದರು.
ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು ಸುಳ್ಯ ಶಾಸಕ ಅಂಗಾರರವರು ಸಚಿವವಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಅಪರಾಹ್ನ 4 ಗಂಟೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜ್ಯಪಾಲರು ಪ್ರತಿಜ್ಞಾವಿಧಿ ಭೋದಿಸಿದರು. ದೇವರ ಹೆಸರಿನಲ್ಲಿ ಅಂಗಾರರವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಅರ್ಹವಾಗಿದೆ ಸಚಿವ ಸ್ಥಾನ ಒದಗಿ ಬಂದಿರುವುದು ಸುಳ್ಯದ ಬಿಜೆಪಿ...
Loading posts...
All posts loaded
No more posts
