- Friday
- July 10th, 2026
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಂಗ್ರಹದ ಅಭಿಯಾನಕ್ಕೆ ಜ.16 ರಂದು ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಲಾಯಿತು.ಬಳಿಕ ಈ ಭಾಗದ ಹಿಂದೂ ಬಾಂಧವರ ಮನೆ ಮನೆಗೆ ತೆರಳಿ ಕೂಪನ್ ನೀಡಿ ನಿಧಿ ಸಂಗ್ರಹಕ್ಕೆ ತೆರಳಲಾಯಿತು . ಈ ಸಂದರ್ಭದಲ್ಲಿ ಶ್ರೀ ಶಾರದಾಂಬಾ ಭಜನ ಮಂದಿರದ ಅದ್ಯಕ್ಷ ಸೀತಾರಾಮ...
ಗುತ್ತಿಗಾರು ಲಾಸ್ಯ ಕಲಾ ಶಾಲೆಯ ವಿದ್ಯಾರ್ಥಿಗಳ ಭಜನಾ ತಂಡ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಥಮ ಭಜನಾ ಕಾರ್ಯಕ್ರಮ ನಡೆಸುವುದರ ಮುಖಾಂತರ ಜ. 15 ರಂದು ಉದ್ಘಾಟನೆಗೊಂಡಿತು.
ಶ್ರೀ ರಘುನಾಥ ರೈ ಕಳಂಜ ಮತ್ತು ಊರ ಹತ್ತು ಸಮಸ್ತರಿಂದ ನಡೆಸಲ್ಪಡುವ 30ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಜ.15 ರಂದು ಕಳಂಜದ ವಿಷ್ಣುನಗರದಲ್ಲಿ ನಡೆಯಿತು. ಯಕ್ಷಗಾನ ಬಯಲಾಟವನ್ನು ಕಲಾಸಕ್ತರು, ಯಕ್ಷಾಭಿಮಾನಿಗಳು, ಊರವರು ವೀಕ್ಷಿಸಿ ಯಕ್ಷಗಾನದ ಸವಿಯುಂಡರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಯಾವುದೋ ಒಂದು ಮೂಲೆಯಲ್ಲಿ ಅತ್ಯಂತ ನಿಷ್ಠೆಯಿಂದ ಸಂಘದ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ, ಹೊಟ್ಟೆ ಪಾಡಿಗಾಗಿ ಮನೆ ನಿರ್ವಹಣೆಗೆ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿನಗೂಲಿ ಕಾರ್ಮಿಕನಾಗಿ ದುಡಿದು ಇಂದು ತನ್ನ ನಿಸ್ವಾರ್ಥ ಸೇವೆಯಿಂದ ಆರು ಬಾರಿ ಸುಳ್ಯ ಕ್ಷೇತ್ರದ ಶಾಸಕನಾಗಿ , ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ...
https://youtu.be/7AvJ43aHK94 ಸುಳ್ಯಕ್ಕೆ ಆಗಮಿಸಿದ ಸಚಿವ ಅಂಗಾರರಿಗೆ ಮುಖಂಡರು ಹಾಗೂ ಕಾರ್ಯಕರ್ತರ ಭವ್ಯ ಸ್ವಾಗತ ದೊರೆಯಿತು. ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಸಾಗಿ ಬಂದ ಸಚಿವರಿಗೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪಕ್ಷಭೇದ ಮರೆತು ಅಭಿನಂದಿಸಿದರು. ಸಚಿವ ಅಂಗಾರರು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಮರ್ಪಿಸಿದರು.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸ್ವಕ್ಷೇತ್ರಕ್ಕೆ ಮೊದಲ ಭೇಟಿ ಮಾಡುತ್ತಿರುವ ಸಚಿವ ಅಂಗಾರರಿಗೆ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ನೀಡಲಾಯಿತು. ಜಾಲ್ಸೂರು ನಿಂದ ಸುಳ್ಯದವರೆಗೆ ವಾಹನ ಜಾಥಾ ಹಾಗೂ ಜ್ಯೋತಿ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಭವ್ಯವಾದ ಮೆರವಣಿಗೆ ಮುಖಾಂತರ ನೂತನ ಸಚಿವರಿಗೆ ಅದ್ದೂರಿ ಸ್ವಾಗತ ನಡೆಯಲಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಸ್ ಅಂಗಾರ ಇಂದು ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಸುಳ್ಯ ಮಂಡಲ ಸಿದ್ದತೆ ಮಾಡಿಕೊಂಡಿದೆ. ಜ.15 ರಂದು ಆಗಮಿಸುವ ಸಚಿವರು ಪೂ.ಗಂ 10.30 ಕ್ಕೆ-ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರಿಗೆ ಬರಲಿದ್ದಾರೆ. ಪೂ.ಗಂ 11.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದಮ.ಗಂ 12.00 ಕ್ಕೆ ಮಂಗಳೂರು ಕದ್ರಿ ಶ್ರೀ...
ಕಲ್ಮಡ್ಕ ಗ್ರಾಮದ ಕಾಚಿಲ ನಿವಾಸಿ ಮರಾಟಿ ಸಮುದಾಯದ ಹಿರಿಯರಾಗಿರುವ ನಾರ್ಣು ನಾಯ್ಕ ಕಾಚಿಲ ವಯೋಸಹಜ ಕಾಯಿಲೆಯಿಂದ ಜ.14 ರ ಸಂಜೆ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶ್ರೀಮತಿ ದೇವಕಿ ಕಾಚಿಲ, ಮಕ್ಕಳಾದ ಚನಿಯಪ್ಪ ನಾಯ್ಕ ಕಾಚಿಲ, ಸೋಮಣ್ಣನಾಯ್ಕ ಕಾಚಿಲ, ಸಾವಿತ್ರಿ ಬಳ್ಳಕ್ಕ, ಗೀತ ಕೇಪು, ಸುಶೀಲ ಕೇಪು, ಶೋಭವತಿ ಪೆರ್ಣಾಜೆ, ಗೋಪಾಲ...
Loading posts...
All posts loaded
No more posts
