ಅಜ್ಜಾವರ : ಅಧ್ಯಕ್ಷರಾಗಿ ಸತ್ಯವತಿ ದೊಡ್ಡೇರಿ, ಉಪಾಧ್ಯಕ್ಷೆ ಲೀಲಾ ಮನಮೋಹನ್ ಮುಡೂರು

ಅಜ್ಜಾವರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸತ್ಯವತಿ ದೊಡ್ಡೇರಿ, ಉಪಾಧ್ಯಕ್ಷೆಯಾಗಿ ಲೀಲಾ ಮನಮೋಹನ್ ಮುಡೂರು ಆಯ್ಕೆಯಾದರು. ಇಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಮೀಸಲಾತಿ ನಿಗದಿಯಿಂದ ಅಧಿಕಾರ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಸಮಧಾನ ಪಟ್ಟುಕೊಳ್ಳಬೇಕಿದೆ. ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 5, ಪಕ್ಷೇತರರು 3 ಸ್ಥಾನ ಪಡೆದಿದ್ದರು.

ಅಮರಮುಡ್ನೂರು : ಅಧ್ಯಕ್ಷರಾಗಿ ಪದ್ಮಪ್ರಿಯಾ ಮೇಲ್ತೋಟ, ಉಪಾಧ್ಯಕ್ಷರಾಗಿ ಶಶಿಕಲಾ ಕೇನಡ್ಕ

ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪದ್ಮಪ್ರಿಯಾ ಮೇಲ್ತೋಟ, ಉಪಾಧ್ಯಕ್ಷರಾಗಿ ಶಶಿಕಲಾ ಕೇನಡ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 17 ಸ್ಥಾನಗಳ ಪೈಕಿ 11 ಬಿಜೆಪಿ, 4 ಕಾಂಗ್ರೆಸ್, 2 ಪಕ್ಷೇತರ ಸದಸ್ಯರಿದ್ದಾರೆ.
Ad Widget

ಹರಿಹರ ಪಲ್ಲತ್ತಡ್ಕ: ಅಧ್ಯಕ್ಷರಾಗಿ ಜಯಂತ ಬಾಳುಗೋಡು, ಉಪಾಧ್ಯಕ್ಷರಾಗಿ ವಿಜಯ ಅಂಗಣ

ಹರಿಹರ ಪಲ್ಲತ್ತಡ್ಕ ಗ್ರಾಮದ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಯಂತ ಬಾಳುಗೋಡು ಹಾಗೂ ಉಪಾಧ್ಯಕ್ಷರಾಗಿ ವಿಜಯ ಅಂಗಣ ಅವಿರೋಧ ಆಯ್ಕೆಯಾಗಿದ್ದಾರೆ. ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಒಟ್ಟು 6 ಸ್ಥಾನಗಳಲ್ಲಿ 5 ಸ್ಥಾನವನ್ನು ಬಿಜೆಪಿ ಗೆದ್ದರೆ 1 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ✍ವರದಿ:-ಉಲ್ಲಾಸ್ ಕಜ್ಜೋಡಿ

ನೆಲ್ಲೂರು ಕೆಮ್ರಾಜೆ : ಅಧ್ಯಕ್ಷ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷ ಧನಂಜಯಕುಮಾರ್ ಕೋಟೆಮಲೆ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷರಾಗಿ ಧನಂಜಯಕುಮಾರ್ ಕೋಟೆಮಲೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 8 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಬಂಡಾಯ ಸದಸ್ಯರು 2 ಸ್ಥಾನ ಪಡೆದುಕೊಡಿದ್ದರು.

ಜಾಲ್ಸೂರು : ಅಧ್ಯಕ್ಷರಾಗಿ ಕೆ.ಎಂ.ಬಾಬು, ಉಪಾಧ್ಯಕ್ಷರಾಗಿ ಲೀಲಾವತಿ ವಿನೋಬನಗರ

ಜಾಲ್ಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಫೆ.17ರಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಕೆ.ಎಂ.ಬಾಬು ಜಾಲ್ಸೂರು ಮತ್ತು ಉಪಾಧ್ಯಕ್ಷರಾಗಿ ಲೀಲಾವತಿ ವಿನೋಬನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ನಲ್ಲಿ ಒಟ್ಟು 17 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 3, ಪಕ್ಷೇತರ 3 ಸ್ಥಾನ ಪಡೆದುಕೊಂಡಿದೆ.

ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರದೀಪ್ ರೈ ಅಜಿರಂಗಳ ಉಪಾಧ್ಯಕ್ಷರಾಗಿ ಹರ್ಷನ್ ಕೆ ಟಿ

ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರದೀಪ್ ರೈ ಅಜಿರಂಗಳ ಹಾಗೂ ಉಪಾಧ್ಯಕ್ಷರಾಗಿ ಹರ್ಷನ್ ಕೆ .ಟಿ. ಆಯ್ಕೆಯಾಗಿದ್ದಾರೆ. ಪ್ರದೀಪ್ ರೈ ರವರನ್ನು ಶ್ರೀಮತಿ ವಿಜಯ ಹಾಗೂ ಹರ್ಷನ್ ಕೆ ಟಿ ರವರನ್ನು ಶ್ರೀಮತಿ ಚಿತ್ರರವರು ಸೂಚಿಸಿದರು. ಇಲ್ಲಿ 6 ಸ್ಥಾನಗಳ ಪೈಕಿ 4 ಬಿ ಜೆ ಪಿ ಹಾಗು 2 ಕಾಂಗ್ರೇಸ್ ಸ್ಥಾನ ಪಡೆದಿತ್ತು. ಚುನಾವಣಾಧಿಕಾರಿಯಾಗಿ...

ಅರಂತೋಡು : ಅಧ್ಯಕ್ಷರಾಗಿ ಹರಿಣಿ ದೇರಾಜೆ, ಉಪಾಧ್ಯಕ್ಷರಾಗಿ ಶ್ವೇತಾ

ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿ ಹರಿಣಿ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧವಾಗಿ ಆಯ್ಕೆಯಾದರು.ಇಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 2 ಹಾಗೂ ಬಂಡಾಯ 2 ಸ್ಥಾನ ಪಡೆದಿತ್ತು.

ಕನಕಮಜಲು : ಅಧ್ಯಕ್ಷರಾಗಿ ಶ್ರೀಧರ ಕುತ್ಯಾಳ ಉಪಾಧ್ಯಕ್ಷರಾಗಿ ದೇವಕಿ ಕುದ್ಕುಳಿ ಅವಿರೋಧ ಆಯ್ಕೆ

ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀಧರ ಕುತ್ಯಾಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ದೇವಕಿ ಕುದ್ಕುಳಿ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 7 ಸ್ಥಾನಗಳ ಪೈಕಿ ಬಿಜೆಪಿ 5 ಹಾಗೂ ಕಾಂಗ್ರೆಸ್ 2 ಸ್ಥಾನ ಪಡೆದಿತ್ತು.

ಬಾಳಿಲ : ಅಧ್ಯಕ್ಷರಾಗಿ ಸವಿತಾ ಚಾಕೋಟೆಡ್ಕ, ಉಪಾಧ್ಯಕ್ಷರಾಗಿ ತ್ರಿವೇಣಿ ಪಾಜಪಳ್ಳ

ಬಾಳಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಸವಿತಾ ಚಾಕೋಟೆಡ್ಕ, ಉಪಾಧ್ಯಕ್ಷರಾಗಿ ತ್ರಿವೇಣಿ ಪಾಜಪಳ್ಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಲ್ಲಿ 10 ಸ್ಥಾನಗಳ ಪೈಕಿ ಬಿಜೆಪಿ 9 ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದುಕೊಂಡಿತ್ತು.

ಮರ್ಕಂಜ : ಅಧ್ಯಕ್ಷರಾಗಿ ಪವಿತ್ರ ಗುಂಡಿ, ಉಪಾಧ್ಯಕ್ಷರಾಗಿ ಗೋವಿಂದ ಅಳವುಪಾರೆ

ಮರ್ಕಂಜ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಪವಿತ್ರ ಗುಂಡಿ ಹಾಗು ಉಪಾಧ್ಯಕ್ಷರಾಗಿ ಗೋವಿಂದ ಅಳವುಪಾರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ 9 ಸ್ಥಾನಗಳ ಪೈಕಿ ಬಿಜೆಪಿಯ 7, ಕಾಂಗ್ರೆಸ್ ನ 1 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.
Loading posts...

All posts loaded

No more posts

error: Content is protected !!