ಹರಿಹರ ಪಲ್ಲತ್ತಡ್ಕ:-ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಗ್ರಾ.ಪಂ.ಗೆ ಮನವಿ ಸಲ್ಲಿಕೆ

ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಾರಂಭಗೊಂಡು ಸರ್ಕಾರದ ಪರವಾನಗಿ ಹೊಂದಿದ್ದ ಶರಾಬು ಅಂಗಡಿ ನಾಗರಿಕರ ಹೋರಾಟದ ಫಲವಾಗಿ 1994 ಜುಲೈ ತಿಂಗಳಿನಿಂದ ತೆರವುಗೊಂಡಿರುತ್ತದೆ. ಅಲ್ಲಿಂದ ಇದುವರೆಗೆ ಗ್ರಾಮದ ನಾಗರಿಕರು ನೆಮ್ಮದಿ ಹಾಗೂ ಶಾಂತಿಯುತ ಮತ್ತು ಅಭಿವೃದ್ಧಿಶೀಲ ಜೀವನವನ್ನು ನಡೆಸುತ್ತಿದ್ದಾರೆ....

ಜೇಸಿಐ ಸುಳ್ಯ ಸಿಟಿಯ ವತಿಯಿಂದ ಮಹಿಳಾ ದಿನಾಚರಣೆ

ಜೇಸಿಐ ಸುಳ್ಯ ಸಿಟಿಯ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾ.08 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಇಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಶ್ರೀಮತಿ ಶೀತಲ್ ಶಾಲಾ ಮುಖ್ಯೋಪಾಧ್ಯಾಯರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪದ್ಮಿನಿ ದೈಹಿಕ ಶಿಕ್ಷಕಿ ಹಾಗೂ ಅಬ್ದುಲ್ ಸಮಾದ್ ಪ್ರಾಂಶುಪಾಲರು ಮತ್ತು ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷ ಜೇಸಿ ಚಂದ್ರಶೇಖರ ಕನಕಮಜಲು, ಸ್ಥಾಪಕರಾದ ಜೇಸಿ...
Ad Widget

ಜನಾರ್ದನ ಮೊಟ್ಟೆಮನೆ ಆತ್ಮಹತ್ಯೆ

ಗುತ್ತಿಗಾರು ಗ್ರಾಮದ ಮೊಟ್ಟೆಮನೆ ಜನಾರ್ದನ ಗೌಡ ಮಾ.10. ರಂದು ಬೆಳಿಗ್ಗೆ ಮನೆಯ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರು ಪತ್ನಿ,ಮಗು ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಎಡಮಂಗಲ : ಸ್ನೇಹ ಸಂಜೀವಿನಿ ಚೆಕ್ ವಿತರಣೆ

ಸ್ನೇಹ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಎಡಮಂಗಲ ಇದರ ಚೆಕ್ ವಿತರಣಾ ಕಾರ್ಯಕ್ರಮ ಮಾ.9ರಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾ.ಪಂ ಅಧಿಕಾರಿ ಮಹೇಶ್ ಸಂಘದ ಸದಸ್ಯರಿಗೆ ಚಕ್ ವಿತರಿಸಿದರು. ಸಂಘದ ಎಂ.ಬಿ.ಕೆ. ಆಶಾದೀಪ ಎಡಮಂಗಲ, ಎಲ್.ಸಿ.ಆರ್.ಪಿ.ಪುಷ್ಪಾವತಿ ಮರ್ದೂರು,ಬೇಬಿ ಕೇರ್ಪಡ ಹಾಗೂ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.

ಕಳಂಜ ಗ್ರಾಮ ಪಂಚಾಯತ್ ಪ್ರಕಟಣೆ : ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಲಭ್ಯ

ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ನೀಡಲಾಗಿದೆ. ಮುಂದುವರೆದು ಈಗ ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ 60 ವರ್ಷ ದಾಟಿದ ವಯಸ್ಕರಿಗೆ ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ವಾರದ ಪ್ರತಿ...

ಬೂಡು ಅಂಗನವಾಡಿಯಲ್ಲಿ ಮಹಿಳಾ ದಿನಾಚರಣೆ – ಸನ್ಮಾನ

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಾ. 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಅಂಗನವಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸುಮತಿ ಹಾಗೂ ಇನ್ನರ್ ವಿಲ್ ಕ್ಲಬ್ ಮತ್ತು ಸಮಾಜ ಸೇವೆ ಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಲತಾ ಕೇರ್ಪಳ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಬೂಡು ಅಂಗನವಾಡಿ ಕೇಂದ್ರ...

ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ಅಗತ್ಯ – ಚಂದ್ರಶೇಖರ ಬಿಳಿನೆಲೆ

ಮಕ್ಕಳು ಇಂದಿನ ದಿನಗಳಲ್ಲಿ ಕೇಳಿ ಕಲಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುವುದನ್ನು ರೂಡಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪೂರಕ ವಾತಾವರಣದ ಅಗತ್ಯ ಇದೆ ಎಂದು ವಲಯ ತರಬೇತಿದಾರರು, ಕೆವಿಜಿ ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸುಳ್ಯದ...

ಸ್ವಸ್ತಿಕ್ ಹೋಮ್ ಪ್ರೊಡಕ್ಟ್ ಉದ್ಘಾಟನೆ – ಸೇಮಿಗೆ ಬುಕ್ಕಿಂಗ್ ಆರಂಭ

ಸ್ವಸ್ತಿಕ್ ಹೋಮ್ ಪ್ರೊಡಕ್ಟ್ ಸುಳ್ಯದಲ್ಲಿ ಉದ್ಘಾಟನೆಗೊಂಡಿದ್ದು, ಬುಕ್ಕಿಂಗ್ ಆರಂಭಗೊಂಡಿದೆ. ಇಲ್ಲಿ ಉತ್ತಮ ಗುಣಮಟ್ಟದ ಸೇಮಿಗೆ ತಯಾರಿಸಿ ಕೊಡಲಾಗುವುದು, ಹೋಟೆಲ್ ಗಳಿಗೆ, ಸಭೆ ಸಮಾರಂಭಗಳಿಗೆ ಕ್ಲಪ್ತ ಸಮಯಕ್ಕೆ ಸ್ಪರ್ಧಾತ್ಮಕ ದರದಲ್ಲಿ ಸೇಮಿಗೆ ಒದಗಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ. ಬುಕ್ಕಿಂಗ್ ಗಾಗಿ 9480935409, 7019578744, 6362030910 ಸಂಪರ್ಕಿಸಬಹುದು.

ದಲಿತ ಮಹಿಳೆಗೆ ದೌರ್ಜನ್ಯ ಪ್ರಕರಣ – ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ನಾಳೆ ಬೆಳ್ಳಾರೆಯಲ್ಲಿ ಬೃಹತ್ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ

ಎಡಮಂಗಲದಲ್ಲಿ ನಡೆದ ದಲಿತ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸದಿರುವ ಪೊಲೀಸ್ ಇಲಾಖೆಯ ವಿರುದ್ಧ ಅಂಬೇಡ್ಕರ್ ರಕ್ಷಣಾ ವೇದಿಕೆ (ರಿ.) ಕರ್ನಾಟಕ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಮಾ. 9ರಂದು (ನಾಳೆ) ಬೆಳ್ಳಾರೆಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಗೆ ಮುತ್ತಿಗೆ ನಡೆಯಲಿದೆ...

ವಿಕ ಜೋಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪೂರ್ಣಿಮಾ ಕೃಷ್ಣರಾಜ್ ಕೇರ್ಪಳ ದಂಪತಿಗಳಿಗೆ ಸನ್ಮಾನ

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಜಯ ಕರ್ನಾಟಕ ಪತ್ರಿಕೆಯ ಆಯೋಜಿಸಿದ ವಿಕ ಜೋಡಿ ತಾರೆ ಕರ್ನಾಟಕದ ಬೆಸ್ಟ್ ಜೋಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಪೂರ್ಣಿಮಾ ಕೃಷ್ಣರಾಜ್ ದಂಪತಿಗಳನ್ನು ಮಾರ್ಚ್ 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯ ರಿಯಾಜ್...
Loading posts...

All posts loaded

No more posts

error: Content is protected !!