ಐವರ್ನಾಡು : ಸಾಂಸ್ಕೃತಿಕ ಕಲಾ ವೇದಿಕೆ ರಚನೆ – ಅಧ್ಯಕ್ಷ ರಾಮಚಂದ್ರ ಗೌಡ ಪಲ್ಲತ್ತಡ್ಕ, ಕಾರ್ಯದರ್ಶಿ ರಾಧಾಕೃಷ್ಣ ಚಾಕೋಟೆ

ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಪ್ರಥಮ ಸಭೆಯು ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಎ.2ರಂದು ಜರಗಿತು.ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಚಂದ್ರಾಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವರ್ಷದ ಲೆಕ್ಕಪತ್ರವನ್ನು ಚಂದ್ರಾ ಕೋಲ್ಚಾರು ಮಂಡಿಸಿದರು. ಬಳಿಕ ಮುಂದಿನ ವರ್ಷದ ಯೋಜನೆಗಳು ಹಾಗೂ ಸದಸ್ಯರುಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ...

ಕೃತಿ ಅರಂಬೂರು- ಜಿನಿತ್ ಮೂಕಮಲೆ ನಿಶ್ಚಿತಾರ್ಥ

ಸುಳ್ಯ ಕಸಬಾ ಗ್ರಾಮದ ಅರಂಬೂರು ಅಮರ ಸುಳ್ಯ ಸುದ್ದಿ ಸಿಬ್ಬಂದಿ ಪದ್ಮನಾಭ ಗೌಡರ ಸುಪುತ್ರಿ ಕೃತಿ ಯ ವಿವಾಹ ನಿಶ್ಚಿತಾರ್ಥವು ಆಲೆಟ್ಟಿ ಗ್ರಾಮದ ಮೂಕಮಲೆ (ಗಬ್ಬಲ್ಕಜೆ) ರಾಮಕೃಷ್ಣ ಗೌಡರ ಪುತ್ರ ಜಿನಿತ್ ರೊಂದಿಗೆ ವಧುವಿನ ಮನೆಯಲ್ಲಿ ಏ.4 ರಂದು ನಡೆಯಿತು.
Ad Widget

ಎ.5 ಮತ್ತು ಎ.8 : ಬಾಳಿಲ, ಮುಪ್ಪೇರ್ಯ ಗ್ರಾಮಸ್ಥರಿಗೆ ಕೊರೊನಾ ಲಸಿಕೆ

ದ.ಕ.ಜಿಲ್ಲಾ ಪಂಚಾಯತ್, ಬಾಳಿಲ ಗ್ರಾ.ಪಂ. ಸುಳ್ಯ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಇದರ ಸಹಯೋಗದಲ್ಲಿ ಬಾಳಿಲ ಮತ್ತು ಮುಪ್ಪೇರ್ಯ ಗ್ರಾಮದ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಎ.5 ಮತ್ತು ಎ.8 ರಂದು ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ನಡೆಯಲಿದ್ದು ಮುಪ್ಪೇರ್ಯ...

ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶ್ರಮದಾನ

ಕಾಯರ್ತೋಡಿಯಲ್ಲಿರುವ ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದಲ್ಲಿ ಎ.11, 12 ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರಮದಾನ ಕಾರ್ಯಕ್ರಮ ಏ.4 ರಂದು ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕೇಸರರಾದ ಡಿ.ಎಸ್.ಕುಶಾಲಪ್ಪ, ಡಿ.ಎಸ್.ಗಿರೀಶ್ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಸರಗೋಡು : ಸುಳ್ಯ ಬಿಜೆಪಿ ವತಿಯಿಂದ ಮತಯಾಚನೆ

ಕಾಸರಗೋಡು ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿ ಕೆ. ಶ್ರೀಕಾಂತ್ ಅವರ ಪರವಾಗಿ ಕಾರಡ್ಕ ಗ್ರಾಮ ಪಂಚಾಯತ್ ವಠಾರದ ಅಂಬಿಕಾ ನಗರದಲ್ಲಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ, ಮತ ಯಾಚಿಸಲಾಯಿತು. ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬೂಡು ರಾಧಾಕೃಷ್ಣ ರೈ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಜಗದೀಶ್ ಸರಳಿಕುಂಜ, ಬಿಜೆಪಿ...

ಬೆಳ್ಳಾರೆ : ಆರೋಗ್ಯ ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಲಭ್ಯ

ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್, 60 ವರ್ಷ ದಾಟಿದ ವಯಸ್ಕರು ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ನೀಡಲಾಗಿದೆ. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು ವಾರದ...

ಬೆಳ್ಳಾರೆ : ರೊಟರಿ ಕ್ಲಬ್ ನಿಂದ ನಿವೃತ್ತ ಕ್ಯಾಪ್ಟನ್ ಸುದಾನಂದರಿಗೆ ಸನ್ಮಾನ

ಬೆಳ್ಳಾರೆ ಟೌನ್ ರೊಟರಿ ಕ್ಲಬ್ ವತಿಯಿಂದ ನಿವೃತ್ತ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಯವರಿಗೆ ಸನ್ಮಾನ ಕಾರ್ಯಕ್ರಮ ಏ.1 ರಂದು ನಡೆಯಿತು.

ಶಿವರಾಮ ಗೌಡ ಅಮೈ(ವಳಲಂಬೆ)

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಅಮೈ ಶಿವರಾಮ ಗೌಡರು ಅಲ್ಪಕಾಲದ ಅಸೌಖ್ಯದಿಂದ ಎ.1 ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಮಕ್ಕಳಾದ ಪ್ರೇಮಾ ಪ್ರಕಾಶ್ ಆಲಂಕಳ್ಯ, ಜಗದೀಶ ಅಮೈ, ಮೋಹನ ಅಮೈ, ಸಹೋದರರು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಪೆರುವಾಜೆ : ನೂತನ ಬಸ್ಸು ತಂಗುದಾಣ ಉದ್ಘಾಟನೆ

ಪೆರುವಾಜೆ ಗ್ರಾಮ ಪಂಚಾಯತ್ ನ ಎದುರುಗಡೆ ರೋಟರಿ ಕ್ಲಬ್ ಬೆಳ್ಳಾರೆ ಹಾಗೂ ಭಾವೈಕ್ಯ ಯುವಕ ಮಂಡಲ (ರಿ.) ಪೆರುವಾಜೆಯ ಸಹಭಾಗಿತ್ವದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ದಿ.ಪ್ರೇಮನಾಥ ರೈ ರವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಬಸ್ಸು ತಂಗುದಾಣವನ್ನು ಎ.01ರಂದು ಉದ್ಘಾಟಿಸಲಾಯಿತು.ಉದ್ಘಾಟನೆಯನ್ನು ರೋಟರಿಯ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ,...

ನೀನಾಸಂ ರಂಗ ಶಿಬಿರಕ್ಕೆ ಮಮತಾ ಕಲ್ಮಕಾರು ಆಯ್ಕೆ

   ನೀನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಆಶ್ರಯದಲ್ಲಿ ಎಪ್ರಿnoಲ್ 11 ರಿಂದ  ನಡೆಯುವ ಒಂದು ತಿಂಗಳ ರಾಜ್ಯಮಟ್ಟದ ರಂಗ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಲು ಸುಳ್ಯ ತಾಲೂಕು ಕಲ್ಮಕಾರು ಇಲ್ಲಿನ ಹಳ್ಳಿ ಪ್ರತಿಭೆ ಮಮತಾ ಕೆ.ಆಯ್ಕೆಯಾಗಿದ್ದಾರೆ.    ಕರ್ನಾಟಕ ಅರೆಭಾಷೆ ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ ನಡೆದ,ಜೀವನ್ ರಾಂ ಸುಳ್ಯ ನಿರ್ದೇಶನದ ಸಾಹೇಬ್ರು ಬಂದವೇ ಅರೆಭಾಷೆ ನಾಟಕದ...
Loading posts...

All posts loaded

No more posts

error: Content is protected !!