ಚಳ್ಳ ದೇವಸ್ಥಾನದ ಜೀರ್ಣೊದ್ಧಾರಕ್ಕೆ ಏ.20 ರಂದು ಚಿಂತನಾ ಸಭೆ

ದೇವಚಳ್ಳ ಗ್ರಾಮದ ಚಳ್ಳದಲ್ಲಿ ಜೀರ್ಣೋದ್ಧಾರಗೊಳ್ಳದೇ ಅವನತಿ ಹೊಂದಿದ್ದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿಬಂದಿದ್ದು ಏ.24 ರಂದು ಭಕ್ತಾಭಿಮಾನಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ದೇವಚಳ್ಳ, ನೆಲ್ಲೂರುಕೆಮ್ರಾಜೆ, ಅಮರ ಮುಡ್ನೂರು ಗ್ರಾಮದ ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರಶ್ನೆ ಚಿಂತನೆ ನಡೆದ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಆಗಬೇಕೆಂದು ಕಂಡುಬಂದಿತ್ತು. ಹಳ್ಳದಲ್ಲಿ ದೇವಸ್ಥಾನ ಇತ್ತೆಂಬ ಜಾಗದಲ್ಲಿ ಕೆರೆ ಹಾಗೂ...

ಗುತ್ತಿಗಾರು ಪ್ರೌಢಶಾಲೆಯ ನಾಲ್ವರು ಮಕ್ಕಳಿಗೆ ಕೋವಿಡ್ : ಪರೀಕ್ಷೆ ರದ್ದುಗೊಳಿಸಿ ರಜೆ ಘೋಷಣೆ

ಗುತ್ತಿಗಾರು ಸರಕಾರಿ ಪ್ರೌಢಶಾಲೆಯ 1೦ನೇ ತರಗತಿ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಹೋಗಿದ್ದ ವೇಳೆ ನಾಲ್ಕು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಹಾಗಾಗಿ ಇಂದು ನಡೆಯಬೇಕಾಗಿದ್ದ ಪ್ರೌಢಶಾಲಾ ಇಂಟರ್‌ನಲ್ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ರಜೆ ನೀಡಿದ ಘಟನೆ ವರದಿಯಾಗಿದೆ.ನಡುಗಲ್ಲು, ಕಂದ್ರಪ್ಪಾಡಿ, ಮೆಟ್ಟಿನಡ್ಕ ಹಾಗೂ ಚತ್ರಪ್ಪಾಡಿಯ ನಾಲ್ವರು ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇತರ ವಿದ್ಯಾರ್ಥಿಗಳನ್ನು ಕೂಡಾ ತಪಾಸಣೆಗೊಳಪಡಿಸಲು...
Ad Widget

ಭರದಿಂದ ನಡೆಯುತ್ತಿರುವ ಪೈಚಾರು- ಸೋಣಂಗೇರಿ ರಸ್ತೆ : ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಪೈಚಾರು ಸೋಣಂಗೇರಿ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದ್ದು ಸೋಣಂಗೇರಿ ಸಮೀಪ ರಸ್ತೆ ಬದಿಯ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮರ ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮರದ ಬೇರುಗಳು ಕಾಣಿಸುತ್ತಿದ್ದು ಬೀಳುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸಿ ಅಪಾಯ ಸಂಭವಿಸುವ ಮೊದಲೇ ತೆರವುಗೊಳಿಸುವುದು ಒಳಿತು.

ಬೊಳ್ಳಾಜೆ : ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಭಜನಾ‌ ಮಂಡಳಿ ಕೊರತ್ತೋಡಿ ಇದರ ವತಿಯಿಂದ ನಡೆಯುವ ಮಕ್ಕಳ ಕುಣಿತ ಭಜನಾ ತರಬೇತಿಯು ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು(ಎ.18)ರಂದು ಉದ್ಘಾಟನೆಗೊಂಡಿತು.ಸುಳ್ಯ ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮುಂಡೋಕಜೆ...

ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಚಾವಡಿ ನೇಮ ಮತ್ತು ಜಾತ್ರೋತ್ಸವ

ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಚಾವಡಿ ನೇಮ ಮತ್ತು ಜಾತ್ರೋತ್ಸವ ಎ.17 ಹಾಗೂ 18ರಂದು ಜರುಗಿತು. ಎ.17ರಂದು ರಾತ್ರಿ ವಾಲಸಿರಿ ನಡೆಯಿತು. ಎ.18ರಂದು ಬೆಳಿಗ್ಗೆ ನಾಯರ್ ದೈವದ ನೇಮೋತ್ಸವ ನೆರವೇರಿತು. ಜಾತ್ರೋತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು.

ಪಂಜ : ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರಮಸೇವೆ – ಮನೆ ಹಾಗೂ ರಸ್ತೆಗೆ ಬಿದ್ದಿದ್ದ ಮರ ತೆರವು

ಪಂಜ ಪರಿಸರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಮತ್ತು ಭಯಾನಕ ಗಾಳಿಗೆ ರಸ್ತೆ ಮತ್ತು ಮನೆಗಳಿಗೆ ಬಿದ್ದ ಮರಗಳನ್ನು ವಿಪತ್ತು ನಿರ್ವಹಣಾ ಘಟಕ ಪಂಜ ವಲಯದ ಸದಸ್ಯರು ತೆರವು ಗೊಳಿಸಿದರು. ಪಂಜ ಪಂಚಲಿಂಗೇಶ್ವರ ದೇವಾಲಯದ ಹಿಂಭಾಗದಲ್ಲಿ ಬಿದ್ದ ಮರಗಳನ್ನು ತೆರವು ಗೊಳಿಸಿ ನಂತರ ಡಬ್ಬಲ್ ಕಟ್ಟೆಯ ರಸ್ತೆಯುದ್ದಕ್ಕೂ ಬಿದ್ದ ಬೃಹದಾಕಾರದ ಮರಗಳು ಕಡಿದು ಪಂಜದ ಕೂತ್ಕುಂಜ ಗ್ರಾಮದ...

ಸೋಂಕು ತಡೆಯ ನಿಯಮ ಪಾಲನೆ ಬಗ್ಗೆ ಜಾಗೃತಿ ವಹಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ – ಎಂ. ವೆಂಕಪ್ಪ ಗೌಡ

ಕೊರೋನಾ ಸೋಂಕಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ನಿರ್ಲಕ್ಷ ವಹಿಸಿವೆ. ಕೊರೊನಾಗೆ ಸಂಬಂಧಪಟ್ಟ ನಿಯಮಗಳು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದು ಕ್ರಿಯೆಯಲ್ಲಿ ಇಲ್ಲ ಎಂದು ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ನಗರ ಹಾಗೂ ಹಳ್ಳಿಗಳಲ್ಲಿ ಕೆಲವೆಡೆ ಇನ್ನೂ ಕೊರೊನಾದ ಗಂಭೀರತೆ ಅರ್ಥವಾಗಿಲ್ಲ. ಕಠಿಣ ಕ್ರಮ...

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೊನೆ ಮುಹೂರ್ತ

ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.22 ಹಾಗೂ 23 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವದ ಅಂಗವಾಗಿ ಎ.16 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ ಇವರ ನೇತೃತ್ವದಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ,...

ಸುಳ್ಯ: ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಕತ್ತು ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ರಕ್ತ ಸ್ರಾವವಾಗಿ ಸಾವಿಗೀಡಾದ ಘಟನೆ ಎ.16 ರ ರಾತ್ರಿ 9.15 ರ ಸುಮಾರಿಗೆ ನಡೆದಿದೆ. ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಟಾಯ್ಲೆಟ್ ಹಿಂಬದಿ ಬಿದ್ದಿರುವುದನ್ನು ಕಂಡ ಟಿ.ಸಿ.ಯವರು ಪೋಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ಬಂದು ಮೃತದೇಹದ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಅಲ್ಲಿದ್ದಆಧಾರ್...

ಅರಂತೋಡು : ಅಂಬೇಡ್ಕರ್ 130ನೇ ಜನ್ಮ ಜಯಂತಿ ಆಚರಣೆ

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ ವಿಶ್ವ ಜ್ಞಾನಯೋಗಿ,ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಮೇಶ್.ಎಸ್ ವಹಿಸಿದ್ದರು ಕಾರ್ಯಕ್ರಮದ ಔಚಿತ್ಯದ ಕುರಿತು ಪ್ರಾಧ್ಯಾಪಕ ಕಿಶೋರ್ ಕುಮಾರ್ ಕಿರ್ಲಾಯ ಮಾತನಾಡಿದರು ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಎಂ.ಕೆ.ಸೀತಾರಾಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿ...
Loading posts...

All posts loaded

No more posts

error: Content is protected !!