- Saturday
- September 26th, 2026
ಲಾಕ್ ಡೌನ್ ಮಧ್ಯೆಯೂ ಸುಳ್ಯದಲ್ಲಿ ಕೊರೊನಾ ಪಾಸಿಟಿವ್ ಮತ್ತೆ ಏರಿಕೆ ಕಂಡಿದೆ. ಇಂದು 56 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ ಮಾತ್ರ ಸೋಂಕಿತರ ಸಂಖ್ಯೆ 17ಕ್ಕೆ ಇಳಿದಿತ್ತು. ಸುಳ್ಯದಲ್ಲಿ ಇದುವರೆಗೆ ಒಟ್ಟು 514 ಸೋಂಕಿತರಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಕೋವಿಡ್-19 ತುರ್ತು ಕಾರ್ಯಪಡೆ ವತಿಯಿಂದ ಮೇ.12 ರಂದು ಕೊಲ್ಲಮೊಗ್ರ ಗ್ರಾಮದ ಗೋಳಿಗುಂಡಿ ಸಮೀಪದ ಎರಡು ಮನೆಗಳಲ್ಲಿ ಮನೆಯ ಎಲ್ಲಾ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದ್ದು, ಇವರಿಗೆ ಅಕ್ಕಿ ಸಾಮಾಗ್ರಿಗಳ ಕಿಟ್ ಅನ್ನು ಕೋವಿಡ್-19 ತುರ್ತು ಕಾರ್ಯಪಡೆಯ ಸದಸ್ಯರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕೊಪ್ಪಡ್ಕ, ಗ್ರಾಮ...
ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿ ಬ್ಲಾಕ್ ಆಗಿ ರಸ್ತೆಯಲ್ಲಿ ನೀರು ಹರಿದು ತೊಂದರೆಯಾಗುತ್ತಿದ್ದು ಇಂದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜಿ ಕೆ ಹಮೀದ್ ಉಪಸ್ಥಿತರಿದ್ದರು.
ಅವಳಿ ಮಕ್ಕಳಿಗೆ ಜನ್ಮ ನೀಡಿದ ಸುಳ್ಯದ ಪಂಬೆತ್ತಾಡಿ ಗ್ರಾಮದ ಬಾಣಂತಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಪಂಬೆತ್ತಾಡಿಯ ಮೂಲೆಮನೆ ವಿಶ್ವನಾಥ್ ಗೌಡ ಪುತ್ರಿ ಪೂಜಿತಾ ಮೃತ ಮಹಿಳೆ. ಇವರನ್ನು ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೊನ್ನೆ ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ನಿನ್ನೆ ಬೆಳಗ್ಗೆ...
ಸಾವಿರ ನದಿಗಳಿಗೆಲ್ಲಾ ಒಂದೇನೆ ಸಾಗರ…ನೋವನು ಮರೆಸುವ ನೀನು ಪ್ರೀತಿಯ ಆಗರ…ಕಷ್ಟಗಳ ನುಂಗಿ ಬದುಕೋ ದೇವರ ರೂಪ ನೀನು…ಮನಸ್ಸು ಎಷ್ಟೇ ನೊಂದರೂ ನಗಿಸಿ ನಗುವ ಗುಣವೂ ನಿನ್ನದು…ನಿಸ್ವಾರ್ಥದ ಪ್ರೀತಿಗೊಂದು ಹೆಸರು ನೀನೇ "ಅಮ್ಮ"… ಕನಸಲ್ಲೂ ನಿನ್ನನ್ನು ಬಿಟ್ಟು ಬದುಕಲಾರೆನಮ್ಮ…ನಿನ್ನ ಜೀವ, ನನ್ನ ಜೀವ ಎರಡೂ ಒಂದೇ ಅಮ್ಮ…..ನಿನ್ನಯ ಪ್ರೀತಿಯು ನನಗೆ ಸ್ಪೂರ್ತಿ ಕೊಡುವುದಮ್ಮ…ನಿನ್ನ ಬಿಟ್ಟು ನಾನು ಎಂದೂ...
ಕೊಲ್ಲಮೊಗ್ರ : ಕೊವೀಡ್ -19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಕೊಲ್ಲಮೊಗ್ರ ಗ್ರಾಮದ ಯುವಕರ ತಂಡವೊಂದು ಕೊರೋನ ರೋಗಿಗಳಿಗೆ ಮತ್ತು ಗ್ರಾಮದ ಜನರಿಗೆ ಹಾಗೂ ಪಕ್ಕದ ಗ್ರಾಮದ ಜನರಿಗೆ ಜೌಷಧಿ ಹಾಗೂ ತುರ್ತು ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲು ಸಜ್ಜಾಗಿದೆ. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ...
ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆ ಮಾತೊಂದಿದೆ. ತನ್ನೂರಿನಲ್ಲಿ ಗುರುತಿಸಲ್ಪಡದೇ ದೂರದ ಚೆನ್ನೈ ಮಹಾನಗರದಲ್ಲಿ ಕುಳಿತು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆಗೈಯುತ್ತಿರುವ ವಯೋಲಿನ್ ವಾದಕ ರಾಜೇಶ್ ಕುಂಭಕೋಡು ಅವರು ಈ ಮಾತಿಗೆ ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು. ವಯೋಲಿನ್ ಕಲಿಯುವ ಏಕೈಕ ಗುರಿಯೊಂದಿಗೆ ಬರಿಗೈಯಲ್ಲಿ ಚೆನ್ನೈ ಗೆ ತೆರಳಿದ ಇವರನ್ನು ಸಂಗೀತ ಮಾತೆ ಕೈ ಹಿಡಿದು...
ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೋಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ಟಿನಡ್ಕ ನಿವಾಸಿ ಅರುಣ್ ಎಂಬಾತ ಕಳೆದೊಂದು ವರ್ಷದಿಂದ 17 ರ...
ಅಕ್ರಮ ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಣೆಗಾಗಿಕೊಲ್ಲಮೊಗ್ರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳು ಕರೆದೊಯ್ದು ಓರ್ವ ಯುವಕನಿಗೆ ತೀವ್ರ ಹಲ್ಲೆ ನಡೆಸಿದ್ದರೆಂಬ ಆರೋಪ ಕೇಳಿಬಂದಿದ್ದು, ಆ ಯುವಕ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಹಲ್ಲೆ ಆರೋಪವನ್ನು ಅರಣ್ಯಾಧಿಕಾರಿಗಳು ನಿರಾಕರಿಸಿದ್ದಾರೆ.ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಕೊಲ್ಲಮೊಗ್ರು ಗ್ರಾಮದ ಮೋಹನ ಕೊಳಗೆ ಎಂಬವರನ್ನು ಏ.27 ರಂದು ಅರಣ್ಯಾಧಿಕಾರಿಗಳು ಕೊಲ್ಲಮೊಗ್ರದಿಂದ...
Loading posts...
All posts loaded
No more posts
