ಕೊಲ್ಲಮೊಗ್ರ : ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾ.ಪಂ.ಅಧ್ಯಕ್ಷರ ನಡುವೆ ಮಾತಿನ ಚಕಮಕಿ – ಕೋವಿಡ್ ನಿರ್ವಹಣಾ ತಂಡದಿಂದ ಕೆಲಸ ಸ್ಥಗಿತಗೊಳಿಸಲು ನಿರ್ಧಾರ – ಅರಣ್ಯ ಸಿಬ್ಬಂದಿ ಸ್ಪಷ್ಟನೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಅರಣ್ಯ ಸಿಬ್ಬಂದಿಗಳ ಮಧ್ಯೆ ಕಳೆದ ರಾತ್ರಿ (ಮೇ.4) ಮಾತಿನ ಚಕಮಕಿ ನಡೆದು, ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಿರುವ ಗ್ರಾ.ಪಂ. ಕೋವಿಡ್ ನಿರ್ವಹಣಾ ತಂಡ ತನ್ನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಘಟನೆ ವರದಿಯಾಗಿದೆ.
ಮೇ. 4 ರಂದು ರಾತ್ರಿ ಕೊಲ್ಲಮೊಗ್ರದಲ್ಲಿ ಹೋಮ್ ಐಸೊಲೇಶನ್ ನಲ್ಲಿದ್ದವರಿಗೆ ಆಹಾರ ಸಾಮಾಗ್ರಿ ವಿತರಿಸುತ್ತಿದ್ದ ನಮ್ಮ ತಂಡವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಶ್ನಿಸಿ, ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ದರಿಂದ ನಾವು ಗ್ರಾ.ಪಂ.ವತಿಯಿಂದ ದೂರು ನೀಡಿ ನಾವು ಕೋವಿಡ್ ಕಾರ್ಯ ಚಟುವಟಿಕೆಗಳನ್ನು ಸ್ಥಗಿತ ಗೊಳಿಸುತ್ತೇವೆ ಎಂದು ಗ್ರಾ.ಪಂ.ಅಧ್ಯಕ್ಷ ಉದಯ ಕೊಪ್ಪಡ್ಕ ತಿಳಿಸಿದ್ದಾರೆ.

. . . . . . . . .

ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಿದಾಗ “ನಾವು ಕರ್ತವ್ಯ ನಿಮಿತ್ತ ಕಲ್ಮಕಾರು ಹೋಗಿ ಬರುತ್ತಿರುವ ವೇಳೆ ನಮ್ಮ ವಾಹನ ಹಿಂದಿನಿಂದ ಬಂದ ಬೈಕ್ ಸವಾರನೊಬ್ಬ ನಮ್ಮನ್ನು ನೋಡಿ ಪುನಃ ಹಿಂದಿರುಗಿಸಿ ಹೋದರು. ಅವರು ಯಾರಾಗಿರಬಹುದೆಂದೂ ಗೊತ್ತಿದೆಯೇ ಕೊಲ್ಲಮೊಗ್ರದಲ್ಲಿದ್ದವರ ಜತೆ ಮಾತನಾಡುತ್ತಿದ್ದಾಗ ಅಲ್ಲಿದ್ದ ಉದಯ ಕೊಪ್ಪಡ್ಕ ರವರು ಏರುಧ್ವನಿಯಿಂದ ಮಾತನಾಡಲು ಆರಂಭಿಸಿದಾಗ ಮಾತಿನ ಚಕಮಕಿ ನಡೆದಿದೆಯೇ ಹೊರತು ನಾವು ಹಲ್ಲೆ ನಡೆಸಲು ಮುಂದಾಗಿಲ್ಲ” ಎಂದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading