ಸುಳ್ಯದಲ್ಲಿ ಇಂದು 44 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ 44 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮಡಪ್ಪಾಡಿಯಲ್ಲಿ 3, ನೆಲ್ಲೂರು ಕೆಮ್ರಾಜೆಯಲ್ಲಿ 2, ಆಲೆಟ್ಟಿಯಲ್ಲಿ 3, ಬೆಳ್ಳಾರೆಯಲ್ಲಿ 1, ಸುಳ್ಯದಲ್ಲಿ 6, ಕಳಂಜದಲ್ಲಿ 2, ಉಬರಡ್ಕ ಮಿತ್ತೂರಿನಲ್ಲಿ 3, ಗುತ್ತಿಗಾರಿನಲ್ಲಿ 1, ದೇವಚಳ್ಳದಲ್ಲಿ 4, ಎಡಮಂಗಲದಲ್ಲಿ 2, ಅಮರಮುಡ್ನೂರಿನಲ್ಲಿ 1, ಕೊಡಿಯಾಲದಲ್ಲಿ 5, ಮುರುಳ್ಯದಲ್ಲಿ 2, ಮರ್ಕಂಜದಲ್ಲಿ 1, ನಾಲ್ಕೂರಿನಲ್ಲಿ 2, ಜಾಲ್ಸೂರಿನಲ್ಲಿ 1,...

ಮೆಸ್ಕಾಂ ನೌಕರರನ್ನು ಕೊರೊನಾ ವಾರಿಯರ್ ಗಳೆಂದು ಪರಿಗಣಿಸಿ ಲಸಿಕೆ ನೀಡಲು ಆದೇಶ : ಸುಳ್ಯದಲ್ಲಿ ಮೇ. 24 ರಂದು ಲಸಿಕೆ ವಿತರಣೆ

ರಾಜ್ಯದ ಕವಿಪ್ರನಿನಿ ಮತ್ತು ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳ ಅಧಿಕಾರಿ ಮತ್ತು ನೌಕರರನ್ನು ಕೊರೊನಾ ವಾರಿಯರ್‌ ಗಳೆಂದು ಪರಿಗಣಿಸಿ ಲಸಿಕೆ ಹಾಗೂ ಇತರ ಸೌಲಭ್ಯ ನೀಡಲು ಸರ್ಕಾರ ಆದೇಶಿಸಿದೆ. ಇಂದನ ಇಲಾಖೆಯು ಅವಶ್ಯ ಸೇವೆಯಾಗಿರುವುದರಿಂದ ಲಸಿಕೆ ಹಾಗೂ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಕರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಅವಲಂಬಿತರಿಗೆ ರೂ. 50 ಲಕ್ಷದ ಮೊತ್ತವನ್ನು ನೀಡುವಂತೆ ಆದೇಶದಲ್ಲಿ...
Ad Widget

ಸಾಲಕ್ಕೆ ಜಾಮೀನು ಹಾಕುವ ಮುನ್ನ ಆಲೋಚಿಸಿ – ಜಾಮೀನುದಾರರೂ ಸಾಲಕ್ಕೆ ಜವಾಬ್ದಾರರು – ಸುಪ್ರೀಂ ಕೋರ್ಟ್

ಸಾಲ ಪಡೆದು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲಕ್ಕೆ ಜಾಮೀನು ಹಾಕಿದವರಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದರೆ ವೈಯಕ್ತಿಕ ಜಾಮೀನುದಾರರ ವಿರುದ್ಧ ಕ್ರಮ ಜರುಗಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಕಾರ್ಪೋರೇಟ್ ಸಾಲಗಾರರಿಗೆ ಇಲ್ಲವೇ ಕಂಪೆನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು...

ಶುಭವಿವಾಹ : ಚೇತನಾ-ಗಣೇಶ್

ಕಡಬ ತಾಲೂಕು ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಹರೀಶ ಗೌಡರ ಪುತ್ರಿ ಚೇತನಾರವರ ವಿವಾಹವು ಕಡಬ ತಾಲೂಕು ಚಾರ್ವಾಕ ಗ್ರಾಮದ ನಾಣಿಲ ಶ್ರೀ ತಿಮ್ಮಪ್ಪ ಗೌಡರ ಪುತ್ರ ಗಣೇಶ್ ರವರೊಂದಿಗೆ ಮೇ.20ರಂದು ನಾಣಿಲ ವರನ ಮನೆಯಲ್ಲಿ ನಡೆಯಿತು.

ಮುತ್ತಕ್ಕ ಕುಕ್ಕೇಟಿ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿ ದಿ. ಸುಬ್ಬಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಮುತ್ತಕ್ಕರವರು ಮೇ.22 ರಂದು ಮುಂಜಾನೆ ನಿಧನರಾದರು.ಮೃತರು ಪುತ್ರರಾದ ಯಶವಂತ ಗೌಡ ಕುಕ್ಕೇಟಿ, ಗಂಗಾಧರ ಗೌಡ ನೆಟ್ಟಣ, ದಯಾನಂದ ಗೌಡ ನಾವೂರು, ಪುರೂಷೋತ್ತಮ ಗೌಡ ಕೊಲ್ಯ, ಶಿವರಾಮ ಗೌಡ ಕುಕ್ಕೇಟಿ, ಪುತ್ರಿಯರಾದ ಶ್ರೀಮತಿ ಶೇಷಮ್ಮ ಉತ್ತಯ್ಯ ಗೌಡ ಬೊಳುಗಲ್ಲು, ಶ್ರೀಮತಿ ಲಲಿತಾ ಚಂದ್ರಶೇಖರ್ ಗೌಡ,...

ಲಾಕ್ ಡೌನ್ ವಿಸ್ತರಣೆ ಉತ್ತಮ ನಿರ್ಧಾರವಾಗಿದೆ : ಸುಪ್ರೀತ್ ಮೊಂಟಡ್ಕ

ಮುಖ್ಯಮಂತ್ರಿ ಯಡಿಯೂರಪ್ಪ ರವರು ಮತ್ತೆ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿರುವುದು ಉತ್ತಮವಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದರೂ ಸಂಪೂರ್ಣ ಹತೋಟಿಗೆ ತರುವಂತದ್ದು ಅನಿವಾರ್ಯವಾಗಿದೆ. ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಅನಿವಾರ್ಯವಾಗಿದೆ. ಸರಕಾರಕ್ಕೆ ಲಾಕ್ ಡೌನ್ ನಿಂದ ನಷ್ಟ ಸಂಭವಿಸಿದ್ದರೂ, ಸರ್ಕಾರ ಜನತೆಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದೆ. ಯಡಿಯೂರಪ್ಪನವರು ಯಾವಾಗಲೂ ರಾಜ್ಯದ...

ಮತ್ತೆ 14 ದಿನ ಲಾಕ್‌ಡೌನ್ : ಜೂನ್ 7 ರವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೋಲೀಸರಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಕೋವಿಡ್ ಸೋಂಕನ್ನು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮತ್ತೆ 14 ದಿನಗಳ ಲಾಕ್‌ಡೌನ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದೇವೆ....

ವಿವಾಹ ನಿಶ್ಚಿತಾರ್ಥ : ಜ್ಞಾನೇಶ್ – ಪೃಥ್ವಿ

ಕೊಲ್ಲಮೊಗ್ರ ಗ್ರಾಮದ ಚಾಂತಾಳ ಶ್ರೀಧರ ಗೌಡರ ಪುತ್ರ ಜ್ಞಾನೇಶ್ ರ ವಿವಾಹ ನಿಶ್ಚಿತಾರ್ಥವು ವೆಳ್ಳರಿಕುಂಡು ತಾಲೂಕು ಪನತ್ತಡಿ ಗ್ರಾಮದ ಕಲ್ಲಪ್ಪಳ್ಳಿ ಆಲುಗುಂಜ ಉಡಿಯಾರ ಐತಪ್ಪ ಗೌಡರ ಪುತ್ರಿ ಪೃಥ್ವಿ ಯೊಂದಿಗೆ ಮೇ.20 ರಂದು ವಧುವಿನ ಮನೆಯಲ್ಲಿ ಜರುಗಿತು.

ಕೊಲ್ಲಮೊಗ್ರ : ಬೈಕ್ ಸವಾರ ಬಿದ್ದು ಗಾಯ – ಅಕ್ರಮ ಮದ್ಯ ಸಾಗಾಟ ಶಂಕೆ

ಲಾಕ್ ಡೌನ್ ವೇಳೆಯಲ್ಲಿ ಕೊಲ್ಲಮೊಗ್ರ ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ರೇಟ್ ಆಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಲೋಕನಾಥ ರೈ ಶಿವಾಲ ಅವರ ಬೈಕ್ ಬಾಕ್ಸ್ ನ ತುಂಬ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಅಬಕಾರಿ ಇಲಾಖೆಗೆ ದೂರು...

ಕೊಲ್ಲಮೊಗ್ರ : ರಸ್ತೆಗೆ ಬಿದ್ದ ಮರ ಸ್ಥಳೀಯರಿಂದ ತೆರವು

ಕೊಲ್ಲಮೊಗ್ರ ಹರಿಹರ ರಸ್ತೆಯ ನಿಲ್ಕೂರು ಬಳಿ ರಸ್ತೆಗೆ ಇಂದು ಮುಂಜಾನೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಸ್ಪಂದಿಸಿದ ಲವಿತ್ ಪಡ್ಪು, ಚಂದ್ರ ನಂಗಾರು, ಶಶಿ ತೋಟದಮಜಲು ಸ್ಥಳಿಯರ ಸಹಕಾರದಿಂದ ತೆರವುಗೊಳಿಸಿದರು.
Loading posts...

All posts loaded

No more posts

error: Content is protected !!