- Sunday
- September 27th, 2026
ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಬದಂತಡ್ಕ ಎಂಬಲ್ಲಿ ಅಳವಡಿಸಿದ್ದ ಸೋಲಾರ್ ಲೈಟ್, ಪೇನಲ್ ಮತ್ತು ಬ್ಯಾಟರಿ ಯನ್ನು ಕಿಡಿಗೇಡಿಗಳು ಕಳೆದ ರಾತ್ರಿ ಕಳ್ಳತನ ಮಾಡಿರುತ್ತಾರೆ.
ಜೇಸಿಐ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ ಸುಳ್ಯ ನೇತೃತ್ವದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ಕಿರು ಚಿತ್ರದ 5ನೇ ದಿನದ ರಂಗ ತರಬೇತಿ ಶಿಬಿರಕ್ಕೆ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್. ಬಿ ಭೇಟಿ ಮಾಡಿ ಜೇಸಿಯ ಕಿರು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ...
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಗೂ ಸಂಪಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದಿವಂಗತ ಮೋಹಿನಿ ವಸಂತ ಗೌಡ ಪೆಲ್ತಡ್ಕರವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಭೆಯು ಆ.27 ರಂದುವ ಗೂನಡ್ಕದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿತು.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ.ಜಯರಾಮ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್...
ಸುಳ್ಯ ಹಳೆಗೇಟು 5 ನೇ ವಾರ್ಡ್ ನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ, ಲಸಿಕಾ ಮೇಳದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ,ಸುಳ್ಯ ಇದರ ವತಿಯಿಂದ ಕೋವಿಡ್ ಲಸಿಕಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬುದ್ಧ ನಾಯ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ,ಸುಜನಾ ...
ಸುಬ್ರಹ್ಮಣ್ಯದ ಕುಮಾರಧಾರ ಬಳಿ ಕೊಲ್ಲಮೊಗ್ರದ ಕಾರ್ತಿಕ್ ಪೈಕ ಮಾಲಕತ್ವದ ಕಾರ್ತಿಕೇಯ ಅಟೋ ವರ್ಕ್ಸ್ ಇಂದು ಶುಭಾರಂಭಗೊಂಡಿತು. ಪರಮೇಶ್ವರ ಗೌಡ ಪೈಕ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ, ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಕಾಂಪ್ಲೆಕ್ಸ್ ಮಾಲಕ ಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದು ಶುಭಹಾರೈಸಿದರು. ಎಲ್ಲಾ...
ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ , ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ , ತುರ್ತು ಸಂದರ್ಭದಲ್ಲಿ ಬೇಕಾಗುವ ಆರೋಗ್ಯ ಪರಿಕರ ಸೇರಿದಂತೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮ ಇಂದು ನಡೆಯಲಿದ್ದು, ಮಳೆಯ ಕಾರಣದಿಂದ ಬೆಳ್ಳಾರೆಯ ಕಲ್ಪವೃಕ್ಷ ಆರ್ಕೇಡ್ ಬಳಿ ನಡೆಯಬೇಕಿದ್ದ...
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡಿನ ಕೋರ್ಟ್ ಬಳಿಯಿಂದ ಕುರುಂಜಿ ಗುಡ್ಡೆಗೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಯು 20 ಲಕ್ಷ ರೂ ವೆಚ್ಚದಲ್ಲಿ ಆರಂಭಗೊಂಡಿದ್ದು ಕಾಮಗಾರಿಯ ಗುದ್ದಲಿಪೂಜೆ ಈ ದಿನ ನಡೆಯಿತು. 10ನೇ ವಾರ್ಡಿನ ಸದಸ್ಯ ಹಾಗೂ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಸುಳ್ಯದ...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡು ಹತ್ತು ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಅಕಾಡೆಮಿಯ ವತಿಯಿಂದ ದಶ ವರ್ಷ ಸಂಭ್ರಮದ ಉದ್ಘಾಟನಾ ಸಮಾರಂಭವು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಆ.27ರಂದು ನಡೆಯಿತು.ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರರು ದೀಪ ಬೆಳಗಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯೂ ಎಸಿ ಘಟಕ ಮತ್ತು ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕ ಇದರ ಸಹಯೋಗದೊಂದಿಗೆ ಆ. 25 ರಂದು ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು ಎಂಬ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದ ಎನ್ ಎಸ್ ಇವರು ವಹಿಸಿ, ಸೇನೆ ಉದ್ಯೋಗವನ್ನು...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ದ ಐಕ್ಯೂಎಸಿ ಘಟಕದ ವತಿಯಿಂದ Orientation on criterion wise qualitative and quantitative aspects ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 24. 8. 2021 ರಂದು ಹಮ್ಮಿಕೊಳ್ಳಲಾಯಿತು. ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಡಾ. ನೀತು ಸೂರಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿಯನ್ನು ನೀಡಿದರು. ಮಹಾವಿದ್ಯಾಲಯದ ಐಕ್ಯೂಎಸಿ...
Loading posts...
All posts loaded
No more posts
