- Sunday
- September 27th, 2026
ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ಕಾಲೋನಿ ಹತ್ತಿರದ ಪ್ರಮೋದ್ ಕಟ್ಟ ಗೋವಿಂದನಗರ ಎಂಬುವವರ ಮನೆಗೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ವರದಿಯಾಗಿದೆ.ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರದ ಪ್ರಮೋದ್ ಕಟ್ಟ ಎಂಬುವವರ ಮನೆಗೆ ಆ.25 ರಂದು ಮದ್ಯಾಹ್ನ ಬಾಜಿ ಜಾತಿಗೆ ಸೇರಿದ ಮರ ಬಿದ್ದು 3 ಸಿಮೆಂಟ್ ಶೀಟ್ ಹಾಗೂ ಒಂದು ಸಿಮೆಂಟ್ ಕಂಬ ತುಂಡಾಗಿದ್ದು...
ಕೊಲ್ಲಮೊಗ್ರು ಗ್ರಾಮಪಂಚಾಯತ್ ನ 2020-21 ನೇ ಸಾಲಿನ ಜಮಾಬಂದಿಯು ಆ.26 ರಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ.ಎನ್ ಜಮಾಬಂದಿ ಅಧಿಕಾರಿಯಾಗಿ ಜಮಾಬಂದಿ ಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸುಳ್ಯ ಕಿರಿಯ...
ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ, ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ , ತುರ್ತು ಸಂದರ್ಭದಲ್ಲಿ ಬೇಕಾಗುವ ಆರೋಗ್ಯ ಪರಿಕರ ಸೇರಿದಂತೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮವು ಆಗಸ್ಟ್ 27 ಶುಕ್ರವಾರದಂದು ಸಂಜೆ 4 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವು ಶಂಸುಲ್...
ನೆಹರೂ ಯುವ ಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಬಳ್ಪ ಇದರ ವತಿಯಿಂದ ಸದ್ಭಾವನಾ ಕಾರ್ಯಕ್ರಮವು ಸಂಪ್ಯಾಡಿ ಬೀದಿಗುಡ್ಡೆ ಭಜನಾಮಂದಿರ ವಠಾರದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ಕುಸುಮ ರೈ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸವಿತಾರ ಮುಡೂರು ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ವಿಜಯಕುಮಾರ್ ಕಾಂಜಿ, ವಿಶ್ವನಾಥ ರೈ, ಪ್ರಖ್ಯಾತ...
ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಬಾಳಿಲ ಸುಭಾಶ್ಚಂದ್ರ ರೈ ತೋಟ ಮಾಲಕತ್ವದ ರಸಗೊಬ್ಬರ ಮತ್ತು ಕ್ರಿಮಿನಾಶಕ ವಿತರಕ ಕೇಂದ್ರ ಶ್ರೀ ದೇವಿ ಎಂಟರ್‌ಪ್ರೈಸಸ್ ಆ.24ರಂದು ಶುಭಾರಂಭಗೊಂಡಿತು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಕಛೇರಿ ಉದ್ಘಾಟಿಸಿ ಮಾತನಾಡಿ, ರೈತರಿಗೆ ಬೇಕಾದ ಎಲ್ಲಾ ರೀತಿಯ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಪೂರೈಸುವ ಗ್ರಾಮೀಣ ಭಾಗದ ಒಂದು ಉತ್ತಮ...
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಭಾರತಿ ಬೆಳ್ಳಾರೆ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಮಂಗಳೂರು ಮತ್ತು ಸುಳ್ಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್...
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕ ಸಮೀಪ ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಗಾಯಗೊಂಡವರನ್ನು ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್ ಎಂದು ಗುರುತಿಸಲಾಗಿದೆ.ಈ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು ಸಂಜೆ ಮರಳಿ ಬರುವ...
ಪಂಜ ಸಂಕಡ್ಕ ನಿವಾಸಿ ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿಯವರ ಪತ್ನಿ ಶ್ರೀಮತಿ ಅನಸೂಯ.ಸಿ.ಕೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.20ರಂದು ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.ಶ್ರೀಮತಿ ಅನಸೂಯ.ಸಿ.ಕೆ ಯವರು ಪಂಜ ವನಿತಾ ಸಮಾಜದ ಕಾರ್ಯದರ್ಶಿಯಾಗಿ, ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.
ಜೇಸಿಐ ಬೆಳ್ಳಾರೆ, ಯುವ ಜೇಸಿಐ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ - ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರ 'ಕ್ಷಯ ಮುಕ್ತ ಭಾರತ' ಇದರ ವಿಶೇಷ ರಂಗ ತರಬೇತಿಯ ಉದ್ಘಾಟನೆ ಬೆಳ್ಳಾರೆ ಜೇಸಿ ಭವನದಲ್ಲಿ ಆ.23ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ...
Loading posts...
All posts loaded
No more posts
