- Sunday
- September 27th, 2026
ದೇಶದ ಏಳಿಗೆಗೆ ಜನರ ಸಹಕಾರ ಅಗತ್ಯವಾಗಿದೆ. ಅವಶ್ಯಕವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಗಮನಕ್ಕೆ ತರಬೇಕು. ಆಗ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಅರಿವು ನಮಗಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.ಅಜ್ಜಾವರದ ಮೇದಿನಡ್ಕದಲ್ಲಿ ಆ. 29 ರಂದು ನೂತನ ಅಂಗನವಾಡಿ ಯನ್ನು...
ಗೃಹರಕ್ಷಕ ದಳದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮುಖ್ಯ ಕಮಾಂಡರ್ ಮುರಲಿ ಮೋಹನ ಚೋಂತಾರು, ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಹಾಗೂ ದ.ಕ. ಉಸ್ತುವಾರಿ ಸಚಿವ ಎಸ್.ಅಂಗಾರ ಅವರನ್ನು ಗೃಹರಕ್ಷಕ ದಳದ ವತಿಯಿಂದ ಸಮ್ಮಾನಿಸಲಾಯಿತು. ಸಚಿವ ಅಂಗಾರರು ಸುಳ್ಯ ಹಾಗೂ ಸುಬ್ರಹ್ಮಣ್ಯದ ಗೃಹರಕ್ಷಕ ದಳ ಕಚೇರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು.
ಸುಳ್ಯ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಭೆಯ ಆ 27ರಂದು ತಾಲೂಕು ಪಂಚಾಯತ್ ಮಿನಿ ವಿಧಾನಸೌಧದಲ್ಲಿ ನಡೆಯಿತು. ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ಗ್ರಂಥಾಲಯದ ಡಿಜಿಟಲೀಕರಣ ಮತ್ತು ಬೇಕನ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸುಳ್ಯ ತಾಲೂಕಿನ 10 ಗ್ರಂಥಾಲಯವನ್ನು ತಕ್ಷಣ ಡಿಜಿಟಲೀಕರಣ ಗೊಳಿಸುವಂತೆ ಕಾರ್ಯಪ್ರವರ್ತರಾಗಲು ತಿಳಿಸಿದರು. ತಾಲೂಕಿನ 25...
ಮಾದಕ ದ್ರವ್ಯ ಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಸುಳ್ಯದ ಯುವಜನ ಸಂಯುಕ್ತಮಂಡಳಿಯ ಸಭಾಂಗಣದಲ್ಲಿ ನಡೆದ ನೂತನ ಗೃಹರಕ್ಷಕ ದಳದ ಕಚೇರಿಯ...
ಸುಬ್ರಹ್ಮಣ್ಯದ ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಪ್ರಖ್ಯಾತ ವೈದ್ಯ ಬಿ.ಕೆ.ಭಟ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಸುಬ್ರಹ್ಮಣ್ಯದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ಇವರು ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ , ಪುತ್ರ, ಸೊಸೆ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.
ಗೌಡ ಜನಾಂಗದ ಸಂಸ್ಕೃತಿ, ಆಚಾರ -ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕಿದ್ದರೆ ಯುವ ಜನಾಂಗ ಅದರತ್ತ ಆಕರ್ಷಿತವಾಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ನಡೆಯುವ ಶಿಬಿರಗಳಲ್ಲಿ ಯುವಕ ಯುವತಿಯರು ಪಾಲ್ಗೊಂಡು ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿತುಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದ್ದಾರೆ. ಅವರು ಮಂಡೆಕೋಲು ಗ್ರಾ.ಪಂ...
ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ.) ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಆ.27 ರಂದು ನಡೆಯಿತು. ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಝಿಯಾರತ್ ನಡೆಸಿ ಆ ಬಳಿಕ ಆಂಬ್ಯುಲೆನ್ಸ್ ಲೋಕಾರ್ಪಣೆಗೊಂಡಿತು. ಟ್ರಸ್ಟ್ ನ ಅಧ್ಯಕ್ಷ ಯು ಹೆಚ್ ಅಬೂಬಕ್ಕರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಳಲಿ ಕೇಂದ್ರ...
ಜೇಸಿಐ ಬೆಳ್ಳಾರೆ, ಜೂನಿಯರ್ ಜೆಸಿ ವಿಭಾಗ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ-ಆರೋಗ್ಯ ಇಲಾಖೆ ಸುಳ್ಯ ಇದರ ನೇತೃತ್ವದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ಕಿರುಚಿತ್ರದ 6ನೇ ರಂಗ ತರಬೇತಿ ಶಿಬಿರಕ್ಕೆ ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕರಾದ ವಿಶ್ವ ಕೆ ಹರಿಹರ ಪಲ್ಲತ್ತಡ್ಕ, ಸುಳ್ಯ ಸುದ್ದಿ ಪತ್ರಿಕೆ ವರದಿಗಾರ ಈಶ್ವರ ವಾರಣಾಸಿ, ಬೆಳ್ಳಾರೆ...
ಹರಿಹರ ಪಲ್ಲತ್ತಡ್ಕದ ಎಸ್.ವಿ ಕಾಂಪ್ಲೆಕ್ಸ್ ಖಂಡಿಗದಲ್ಲಿ ವಿನಾಯಕ ಕೇರ್ಪಡ ಮಾಲಕತ್ವದ ವಿನಾಯಕ ಅಲ್ಯೂಮಿನಿಯಂ & ಸ್ಟೀಲ್, ಪ್ಲೈವುಡ್ & ವುಡ್ ವರ್ಕ್ಸ್ ಆ. 26 ಗುರುವಾರದಂದು ಶುಭಾರಂಭಗೊಂಡಿತು. ಎಸ್ ವಿ ಕಾಂಪ್ಲೆಕ್ಸ್ ಮಾಲಕರಾದ ಕೃಷ್ಣಪ್ಪ ಗೌಡ ಖಂಡಿಗ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಲಕರಾದ ವಿನಾಯಕ ಕೇರ್ಪಡ ಅವರು ಅಲ್ಯೂಮಿನಿಯಂ ಕಿಟಕಿ, ವಾರ್ಡ್ ರೂಫ್...
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡುಗೆ ಅನಿಲ ದರ ಸತತವಾಗಿ ಏರಿಕೆ ಮಾಡುವುದನ್ನು ಖಂಡಿಸಿ ಎಸ್.ಡಿ.ಪಿ.ಐ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೋವಿಡ್ ಸಂಕಷ್ಟದ ಸಮಯದಲ್ಲಿ ಅಡುಗೆ...
Loading posts...
All posts loaded
No more posts
