ಸಚಿವ ಅಂಗಾರರಿಂದ ಶ್ವೇತಾ ವೇಣುಗೋಪಾಲರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಚ್ರಪ್ಪಾಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಪಿಗ್ಮಿ ಸಂಗ್ರಾಹಕ ರಾಜಗೋಪಾಲ್ ಬಲ್ಲಾಳ್ ಪಂಬೆತ್ತಾಡಿ ವಿಧಿವಶ

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಸಂಗ್ರಹಕ ರಾಜಗೋಪಾಲ್ ಬಲ್ಲಾಳ್ (37ವ) ಸೆ.5 ರಂದು ನಿಧನರಾಗಿದ್ದಾರೆ. ಅವರಿಗೆ ಮೂರು ತಿಂಗಳ ಹಿಂದೆ ಜ್ವರ ಕಂಡು ಬಂದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಿಸದೆ ಸೆ.5 ರಂದು ನಿಧನರಾದರು. ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ ಪೂರ್ವಾಧ್ಯಕ್ಷರಾಗಿ , ಪಂಬೆತ್ತಾಡಿ ಎಸ್ ಡಿ...
Ad Widget

ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ವ್ಯವಸ್ಥೆಯಿಂದ ನೂತನ ಶಿಕ್ಷಣ ಪದ್ದತಿಯೆಡೆಗೆ ಹೆಜ್ಜೆ – ಮುಂದಿನ ಪೀಳಿಗೆಗೆ ಇದು ಅವಶ್ಯಕ ವಿನಯ್ ಕುಮಾರ್ ಕಂದಡ್ಕ

ಬ್ರಿಟೀಷ್ ಮಾನಸಿಕತೆಯ ಶಿಕ್ಷಣ ಈ ಮೊದಲಿತ್ತು. ಆದರೆ ಈ ಬಾರಿಯಿಂದ ನೂತನ ಶಿಕ್ಷಣ ಪದ್ದತಿ ಜಾರಿಯಾಗುತ್ತಿದೆ. ಹೊಸ ಶಿಕ್ಷಣ ಪದ್ದತಿಯಿಂದ ನಮ್ಮದೇ ಇತಿಹಾಸ, ವಾಸ್ತವ ಸಂಗತಿಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಎಂದು ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಹೇಳಿದರು. ಬೆಳ್ಳಾರೆ ಪಬ್ಲಿಕ್ ಸ್ಲೂಲ್ ನಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು...

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ – ಸುನಂದಾ ಜಿ ಯವರಿಗೆ ಸಚಿವ ಅಂಗಾರರಿಂದ ಪ್ರಶಸ್ತಿ ಪ್ರಧಾನ

ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೇರಾಲು ಶಾಲಾ ಶಿಕ್ಷಕಿ ಸುನಂದ ಜಿ ಯವರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಕಮಿಲ-ಬಳ್ಪ ರಸ್ತೆ ಅವ್ಯವಸ್ಥೆ : ತಕ್ಷಣ ದುರಸ್ತಿಗೆ ಒತ್ತಾಯ

ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯು ತೀರಾ ಅವ್ಯವಸ್ಥೆಯಿಂದ ಕೂಡಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ.ಯಾವುದೇ ವಾಹನಗಳು ಓಡಾಟ ಮಾಡದ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣವೇ ಸಂಬಂಧಿತ ಇಲಾಖೆ ತಾತ್ಕಾಲಿಕ ದುರಸ್ತಿ ಮಾಡಬೇಕು ಎಂದು ಗ್ರಾಮ ಭಾರತ ಟೀಂ ಅಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ ಹಾಗೂ ಸಂಚಾಲಕ ಸುಧಾಕರ ಮಲ್ಕಜೆ ಒತ್ತಾಯಿಸಿದ್ದಾರೆ. ಕಮಿಲ-ಬಳ್ಪ ರಸ್ತೆಯು ಅನೇಕ ವರ್ಷಗಳಿಂದ ತೀರಾ...

ಗುತ್ತಿಗಾರು : ಮನೆ ಮೇಲೆ ಮರ ಬಿದ್ದು ಹಾನಿ

ಗುತ್ತಿಗಾರು ಗ್ರಾಮದ ಚಿಕ್ಮುಳಿ ನಿವಾಸಿ ಕಾಯರ ಸೂರಪ್ಪ ಗೌಡರ ಮನೆ ಮೇಲೆ ಇಂದು ಬೆಳಿಗ್ಗೆ ಮರ ಬಿದ್ದು ಸಂಪೂರ್ಣ ಮನೆ ಹಾನಿಯಾಗಿದೆ.

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ರೆಡ್ ಕ್ರಾಸ್ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ತಾಲೂಕು ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾಲಯ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಸುಳ್ಯ ತಾಲೂಕಿನ ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ...

ಶಮನಗೊಂಡ ಬಿಜೆಪಿ ಭಿನ್ನಮತ : ಮುಂದಿನ ಚುನಾವಣೆಯ ಸಂಘಟನೆಗೆ ಒತ್ತು- ಸುದರ್ಶನ ಮೂಡಬಿದಿರೆ ; ಒಗ್ಗಟ್ಟಿನ ಮಂತ್ರ ಜಪಿಸಿದ ಎಸ್.ಎನ್. ಮನ್ಮಥ

ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ೪ ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಯ...

ವಳಲಂಬೆ : ವಿಶ್ವ ಬ್ರಾಹ್ಮಣ ಫ್ಯಾಬ್ರಿಕೇಶನ್ & ಗ್ಲಾಸ್ ವರ್ಕ್ಸ್ ಶುಭಾರಂಭ

ವಳಲಂಬೆಯಲ್ಲಿ ವಿಶ್ವ ಬ್ರಾಹ್ಮಣ ಫ್ಯಾಬ್ರಿಕೇಶನ್ & ಗ್ಲಾಸ್ ವರ್ಕ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಅಲ್ಯೂಮಿನಿಯಂ ಪಾರ್ಟಿಶನ್, ಇಂಟೀರಿಯರ್ ವರ್ಕ್, ಪ್ಲೈವುಡ್ ಡೋರ್, ಫೈಬರ್ ಡೋರ್ & ಕಿಟಕಿ ಕೆಲಸ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಮಹೇಶ್ ಶರ್ಮ ವಳಲಂಬೆ ತಿಳಿಸಿದ್ದಾರೆ.

ಕಳೆದುಕೊಂಡ ಮೊಬೈಲನ್ನು ವಿದ್ಯಾರ್ಥಿಗೆ ಹಿಂತಿರುಗಿಸಲು ಪ್ರಯತ್ನಿಸಿದ ಬಾಲಕೃಷ್ಣ ತೊಡಿಕಾನ

ಸುಳ್ಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಳೆದುಕೊಂಡ ಬೆಲೆ ಬಾಳುವ ಮೊಬೈಲ್ ಹ್ಯಾಂಡ್ ಸೆಟ್ ನ್ನು ಮಲ್ಲಿಕಾ ಸ್ಟಾಲ್ ನಲ್ಲಿ ಇರುವ ಸಿಸಿ ಕ್ಯಾಮಾರದಲ್ಲಿ ಕಂಡು ಹಿಡಿದು ಕಂಡಕ್ಟರ್ ಕೈಯಿಂದ ಪಡೆದು ಕಳೆದುಕೊಂಡ ವಿದ್ಯಾರ್ಥಿಗೆ ಹಿಂದಿರುಗಿಸಲಾಗಿದೆ. ಮಲ್ಲಿಕಾ ಸ್ಟಾಲ್ ಬಾಲಕೃಷ್ಣ ತೊಡಿಕಾನ ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Loading posts...

All posts loaded

No more posts

error: Content is protected !!