- Monday
- September 28th, 2026
ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೆಪಿಎಸ್ ಬೆಳ್ಳಾರೆ ಇಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಪ್ರಸಾದ್ ಜಿ. ಇವರಿಗೆ ತಾಲೂಕು ಉತ್ತಮ ಸ್ಕೌಟ್ಸ್ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿಂದೂ ಜಾಗರಣ ವೇದಿಕೆ ಮಹಾವಿಷ್ಣು ಘಟಕ ಕಣ್ಕಲ್ ಕೇನ್ಯ ಹಾಗೂ ಸ.ಕಿ.ಪ್ರಾಥಮಿಕ ಶಾಲೆ ನೇಲ್ಯಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಚತಾ ಶ್ರಮದಾನವನ್ನು ಸೆ.5ರಂದು ನಡೆಸಲಾಯಿತು. ಈ ಶ್ರಮದಾನದಲ್ಲಿ ಹಿಂ.ಜಾ.ವೇ.ಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೇಲ್ಯಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
ಕಳೆದ ಕೆಲವು ದಿನಗಳಿಂದ ಚರ್ಚೆಯ ಕೇಂದ್ರಬಿಂದು ಆಗಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದೆ.ಸೆ.05 ರಂದು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ತಜ್ಞರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಅವಕಾಶ ನೀಡಲಾಗಿದ್ದು...
ಕರ್ನಾಟಕ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಇವರನ್ನು ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ವತಿಯಿಂದ ಸೆ.4 ರಂದು ಸುಳ್ಯದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು. ನಂತರ ರಬ್ಬರ್ ಟ್ಯಾಪರ್ಸ್ ಕೃಷಿ ಕಾರ್ಮಿಕರ ಕಷ್ಟ ನಷ್ಟಗಳನ್ನು ಸಚಿವರಿಗೆ ಮನವರಿಕೆ ಮಾಡಲಾಯಿತು.ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ...
ಯುವಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ ಕಳೆದ ಐದು ವರುಷಗಳಿಂದ ನಿರಂತರವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಕೂಡ ಸರಕಾರದ ನಿಯಮದನುಸಾರ ಸೆ.5 ರಂದು 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಿಪ್ರಸಾದ್ ಮರಕ್ಕಡ ನೆರವೇರಿಸಿದರು. ಯಮುನಾ ಓಟೆಕಜೆ ಸಾಂಕೇತಿಕವಾಗಿ...
ಗುತ್ತಿಗಾರು ಗ್ರಾಮದ ವಳಲಂಬೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆಯು ಸೆ.02 ರಂದು ನಡೆಯಿತು.ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರವೀಶ್ ಕುಮಾರ್ ಮೊಟ್ಟೆಮನೆ, ಉಪಾಧ್ಯಕ್ಷರಾಗಿ ಅಭಿಲಾಷಾ.ಎಸ್.ಎಂ ಮೋಟ್ನೂರು ಆಯ್ಕೆಯಾದರು.ಸದಸ್ಯರುಗಳಾಗಿ ಸತ್ಯವತಿ.ವಿ, ಯುವರಾಜ.ಎ, ಮಿಸ್ರಿಯಾ.ವಿ, ಭವಾನಿಶಂಕರ.ಎ.ಎಲ್, ನೂತನ್.ಡಿ, ಗೋಪಾಲಕೃಷ್ಣ.ಎ, ಎನ್.ದೇವಣ್ಣ ಗೌಡ, ಜಯರಾಮ.ಎ, ಹೆಚ್.ಕುಶಾಲಪ್ಪ ಗೌಡ, ದುರ್ಗಾಪರಮೇಶ್ವರಿ, ನಳಿನಾಕ್ಷಿ.ಪಿ.ಎಸ್, ಅನಿತಾ, ರೇಷ್ಮಾ.ಹೆಚ್, ರೋಹಿತ್.ಕೆ, ಸದಾನಂದ.ಎನ್.ಎಸ್, ರೇವತಿ.ಕೆ ಆಯ್ಕೆಯಾದರು.ಪದನಿಮಿತ್ತ ಸದಸ್ಯರುಗಳಾಗಿ ಪ್ರಮೀಳಾ.ಪಿ.ಎಸ್,...
ಬೆಳ್ಳಾರೆ ಗ್ರಾಮದ ರಾಜೇಶ್ ಜಿ ಎಂಬವರು ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿರುವುದಾಗಿ ಅವರ ಪತ್ನಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಾರಿಗಾದರೂ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಬೆಳ್ಳಾರೆ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ. ದೂರವಾಣಿ ಸಂಖ್ಯೆ 95355 56173 , ಬೆಳ್ಳಾರೆ ಠಾಣೆ 08257-271995
ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸುಳ್ಯ ಮೂವರಿಗೆ ಲಭಿಸಿದ್ದು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮರ್ಕಂಜದ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪರಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.
ಮನಸಿನ ನೋವಿಗೆ ಕನ್ನಡಿಯೇತಕೆ, ನೋಡಲು ತಿಳಿಯುವುದು…ಕಾಣುವ ಕನಸಿಗೆ ಮುನ್ನುಡಿಯೇತಕೆ, ಕಣ್ಣಿಗೆ ಕಾಣುವುದು…ನೋವನು ಸಹಿಸಿದ ಮನಸ್ಸಿಗೆ ತಾನೇ ಛಲವು ಹುಟ್ಟುವುದು,ಕಂಡ ಕನಸನು ನನಸು ಮಾಡುವ ಛಲವು ಹುಟ್ಟುವುದು… ಎಲ್ಲವು ತಿಳಿದಿದೆ ಎನ್ನುವ ಸ್ವಾರ್ಥವು ನಿನ್ನನೇ ಕೊಲ್ಲುವುದು…ಶಾಂತವಾಗಿ ಸಾಧಿಸೋ ವ್ಯಕ್ತಿಯೇ ಬದುಕಲಿ ಗೆಲ್ಲುವುದು…ಮನಸಲಿ ನೋವು ಇದ್ದರೆ ಮಾತ್ರ ಛಲವು ಹುಟ್ಟುವುದು,ನಿನಗೆ ಸಾಧಿಸೋ ಛಲವು ಹುಟ್ಟುವುದು… ಸಾಧಿಸ ಹೊರಡುವ ವ್ಯಕ್ತಿಗೆ...
ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೆಳ್ಳಾರೆ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು.ನಿವೃತ್ತ ಶಿಕ್ಷಕರಾದ ಕಲ್ಮಕಾರು ಶಾಲೆಯ...
Loading posts...
All posts loaded
No more posts
