ಜ್ಞಾನದೀಪ ಎಲಿಮಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಮಾತೃ ಪಿತೃ ಗುರುವಂದನ ಮತ್ತು ವಿದಾಯ ಕೂಟ ಕಾರ್ಯಕ್ರಮ

2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಭಾರತೀಯ ಸಂಸ್ಕೃತಿಯ ಆಚಾರ ವಿಚಾರದಂತೆ ಮಾತಾ ಪಿತೃ ಗುರುವಂದನಾ ಕಾರ್ಯಕ್ರಮದ ಮೂಲಕ ವಿಶೇಷ ರೀತಿಯಲ್ಲಿ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳ ತಂದೆ ತಾಯಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಹೆತ್ತವರ ಪಾದಪೂಜೆ ನಡೆಸಿ, ಗಂಧ ತಿಲಕವನ್ನು ಹಚ್ಚಿ, ಆರತಿ ಬೆಳಗಿ ಪುಷ್ಪಾರ್ಚನೆಯೊಂದಿಗೆ ಹೆತ್ತವರ...

ನಮ್ಮವರಿಗಾಗಿ ಒಂದಿಷ್ಟು ಸಮಯ ಮೀಸಲಿಡೋಣ…

ಯಾವತ್ತೋ ಒಂದು ದಿನ ಮರೆಯಾಗುವ ಮನುಷ್ಯನ ಬದುಕಿಗೆ ಮರುಹುಟ್ಟು ಎಂಬುವುದೇ ಇಲ್ಲವೇ…!?ಒಂದಲ್ಲ ಒಂದು ದಿನ ಕೊನೆಯಾಗುವ ಅವರ ಕನಸಿಗೆ ಕಂಬನಿಯೇ ಕೊನೆಯ ಉತ್ತರವೇ…!?ಅವರು ನಮ್ಮಿಂದ ದೂರವಾದ ನಂತರ ನಾವು ನಮ್ಮ ದುರಾದೃಷ್ಟವನ್ನು ದೂರುವುದೇ…!?ಅವರು ನಮ್ಮ ಜೊತೆಗಿದ್ದಾಗಲೇ ನಾವು ಅವರೊಂದಿಗೆ ಸಂತೋಷದಿಂದ ಸಮಯವನ್ನು ಕಳೆಯಬಹುದಿತ್ತಲ್ಲವೇ, ಬೆಟ್ಟದಷ್ಟು ಪ್ರೀತಿಯನ್ನು ಅವರಿಗೆ ನೀಡಬಹುದಿತ್ತಲ್ಲವೇ…!? ಜೊತೆಗಿದ್ದಾಗಲೇ ನಮ್ಮವರಿಗೆ ಒಂದಿಷ್ಟು ಪ್ರೀತಿಯನ್ನು ನೀಡಲಾಗದ...
Ad Widget

ಗುತ್ತಿಗಾರು : ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ – ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ – ಉಪಾಧ್ಯಕ್ಷರಾಗಿ ಕೃಷ್ಣಯ್ಯ ಮೂಲೆತೋಟ ಆಯ್ಕೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಯ್ಯ ಮೂಲೆತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಶ್ವ ಕಿಡ್ನಿ ದಿನ – ಮಾರ್ಚ್ 12

ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ವಿಶ್ವ ಕಿಡ್ನಿ ದಿನ ಎಂದು ಆಚರಿಸಲಾಗುತ್ತಿದೆ. ಜಾಗತಿಕವಾಗಿ, ವಿಶ್ವದಾದ್ಯಂತ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಅರಿವು ಜಾಗತಿ ಮೂಡಿಸಿ, ಜನರಲ್ಲಿ ಕಿಡ್ನಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 2016ರಲ್ಲಿ 66 ದೇಶಗಳು ಈ ಆಚರಣೆಯನ್ನು ಜಾರಿಗೆ ತಂದರು....

ಪಂಜ: ಶ್ರೀ ಶಾಸ್ತಾವೇಶ್ವರ ದೇವರಿಗೆ ಪ್ರಭಾವಳಿ ಸಮರ್ಪಣೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶಾಸ್ತಾವೇಶ್ವರ ದೇವರಿಗೆ ಪ್ರಭಾವಳಿಯನ್ನು ಗಂಗಾಧರ ಗೌಡ ಗುಂಡಡ್ಕ ಹಾಗು ಶ್ರೀಮತಿ ಸೀತ ಇವರ ಪುತ್ರ ಚೇತನ್ ಗುಂಡಡ್ಕ, ಶ್ರೀಮತಿ ರಶ್ಮಿ ಮತ್ತು ದಿಯಾನ್ ಗುಂಡಡ್ಕ ಇವರು ಸೇವಾ ರೂಪದಲ್ಲಿ ಸಮರ್ಪಿಸಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಉಪಸ್ಥಿತರಿದ್ದರು.

ಐವರ್ನಾಡಿನಲ್ಲಿ ತಮಿಳು ಸಿನಿಮಾ ಶೂಟಿಂಗ್

ಐವರ್ನಾಡಿನಲ್ಲಿ ತಮಿಳು,ತೆಲುಗು ಚಲನಚಿತ್ರಕ್ಕಾಗಿ ಚಿತ್ರೀಕರಣ ನಡೆಯುತ್ತಿದೆ. ಕೆಲದಿನಗಳಿಂದ ಗ್ರಾಮದ ಬೇರೆ,ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಹಲವು ಜನರು ಭಾಗವಹಿಸುತ್ತಿದ್ದಾರೆ.ಇಂದು ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ಎದುರು ಚಿತ್ರೀಕರಣ ನಡೆಯುತ್ತಿದೆ. ತಮಿಳುನಾಡಿನ ಸುಮಾರು 80 ಜನರು ಈ ಚಿತ್ರೀಕರಣ ತಂಡದಲ್ಲಿದ್ದು ಐವರ್ನಾಡಿನ ಯುವಕರು ಕೂಡ ಇವರೊಂದಿಗೆ ಭಾಗವಹಿಸುತ್ತಿದ್ದಾರೆ. ಚಿತ್ರೀಕರಣ ತಂಡದವರು ಸುಳ್ಯದ ಕಮಾಂಡ‌ರ್ ಜೀಪುಗಳನ್ನು ಹಾಗೂ ಇತರ...

ಮಾ.9ರಂದು ಅರಂತೋಡಿ ನಲ್ಲಿ ಎಸ್ ಕೆ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸುನ್ನೂರು ಮತ್ತು ಬೃಹತ್ ಇಫ್ತಾರ್ ಸಂಗಮ

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸ್ ನೂರ್ ಹಾಗೂ ಇಫ್ತಾರ್ ಕೂಟವು ಆದಿತ್ಯವಾರ ಸಂಜೆ 4 ಗಂಟೆಗೆ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ. ಅರಂತೋಡು ಮಸೀದಿ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಯವರು ಮಜ್ಲಿಸ್ ನ್ನೂರು ನೇತೃತ್ವ ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಮಿತಿಗೆ ಆಡಳಿತ ಹಸ್ತಾಂತರ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಆಡಳಿತ ಸಮಿತಿಯ ಆಡಳಿತ ಹಸ್ತಾಂತರ ಪ್ರಕ್ರಿಯೆಯು ಮಾ.6 ರಂದು ನಡೆಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಿತ್ರದೇವ ಅವರಿಗೆ ಲೆಕ್ಕಪತ್ರಗಳನ್ನು ನೀಡುವ ಮೂಲಕ ಗುತ್ತಿಗಾರು ಪಿಡಿಒರವರು ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸನತ್ ಮುಳುಗಾಡು, ಜಯಾನಂದ ಪಟ್ಟೆ, ಪುರುಷೋತ್ತಮ ಬದಿಯಡ್ಕ, ಉಷಾ ಮಲ್ಕಜೆ ಉಪಸ್ಥಿತರಿದರು.

ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಸರಕಾರದಿಂದ ಬಜೆಟ್ ನಲ್ಲಿ ಘೋಷಣೆ, ಸುಳ್ಯದ ಹೋರಾಟ ಸಮಿತಿಯಿಂದ ಅಭಿನಂದನೆ, ಕಾಲೇಜಿಗೆ ಕುಮಾರಿ ಸೌಜನ್ಯ ಹೆಸರಿಡಲು ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಸರಕಾರಿ ಮೆಡಿಕಲ್‌ ಕಾಲೇಜನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವುದನ್ನು ನಾವು ಸ್ವಾಗತಿಸುತ್ತೇವೆ, ಸರಕಾರವನ್ನು ಅಭಿನಂದಿಸುತ್ತೇವೆ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅಶೋಕ್‌ ಎಡಮಲೆ ತಿಳಿಸಿದರು. ಮಾ.7ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು...

ರಸ್ತೆ ಬದಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದನ್ನು ತೆರವುಗೊಳಿಸಲು ಸೂಚನೆ

ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಸಂಪಾಜೆಯಿಂದ ಕುಶಾಲನಗರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಅಲ್ಲಲ್ಲಿ ಅನಧಿಕೃತವಾಗಿ ಹಣ್ಣಿನ ಅಂಗಡಿಗಳನ್ನು ಮತ್ತು ಇತರೆ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.ಗ್ರಾಹಕರು ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿನ ವಾಹನ ನಿಲುಗಡೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಯಿರುವುದರಿಂದ ಮಾರ್ಚ್, 15 ರೊಳಗೆ ಸಂಬಂಧಿಸಿದ ವ್ಯಾಪಾರಿಗಳು...
Loading posts...

All posts loaded

No more posts

error: Content is protected !!