ಸುಬ್ರಹ್ಮಣ್ಯ : ಮಾ.14 ರಂದು ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಲಿರುವ “ನಂದಿ ರಥಯಾತ್ರೆ” – ಪೂರ್ವಭಾವಿ ಸಭೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್(ರಿ.) ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಹೊರಟ “ನಂದಿ ರಥಯಾತ್ರೆ” ಯು ಮಾ.14 ಶುಕ್ರವಾರದಂದು ಸಂಜೆ 4:30 ಕ್ಕೆ ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಲಿದ್ದು, ಸಂಜೆ 4:45 ರಿಂದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಇವರಿಂದ ಕಾಶಿಕಟ್ಟೆ...

ಕೊಲ್ಲಮೊಗ್ರು : ಸ್ಥಳೀಯರಿಂದ ಶ್ರಮದಾನ

ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ರಸ್ತೆ ಬದಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಸಂಚರಿಸಲು ಕಷ್ಟಕರವಾಗುತ್ತಿದ್ದು, ಮಾ.09 ರಂದು ಸ್ಥಳೀಯರು ಶ್ರಮದಾನದ ಮೂಲಕ ರಸ್ತೆ ಬದಿಯ ಕಾಡು ಹೆರೆದು ಸ್ವಚ್ಛಗೊಳಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)
Ad Widget

ಕುಕ್ಕೆಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಪ್ ಅವರಿಂದ ಸರ್ಪಸಂಸ್ಕಾರ ಸೇವೆ

ಸುಬ್ರಹ್ಮಣ್ಯ : ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾ.11 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಎರಡು ದಿನಗಳ ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಂಡಿರುವರು.ದಕ್ಷಿಣ ಭಾರತದ ಸುಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅನೇಕ ಬಾಲಿವುಡ್, ಹಾಲಿವುಡ್ ನಟ ನಟಿಯರು ಆಗಮಿಸುತ್ತಿದ್ದು, ಸಂತಾನ ಭಾಗ್ಯವಿಲ್ಲದವರು, ಚರ್ಮರೋಗ ವ್ಯಾಧಿ, ಆರೋಗ್ಯ ವೃದ್ಧಿಗಾಗಿ ಸೇವೆಯನ್ನು ಸಲ್ಲಿಸುವಂಥದ್ದು ಸರ್ವೇಸಾಮಾನ್ಯವಾಗಿದೆ.ಅದೇ ರೀತಿ ಕತ್ರಿನಾ ಕೈಫ್...

ಬೆಳ್ಳಾರೆ : ಮಹಿಳಾ ಸಬಲೀಕರಣದತ್ತ ನಮ್ಮ ಚಿತ್ತ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ, ನಿರಂತರ ಕ್ರಿಯಾಶೀಲ ಚಟುವಟಿಕೆಗಳಿಂದ ನೆಮ್ಮದಿ ಜೀವನ – ರಾಜಣ್ಣ, ಸ್ವ ಉದ್ಯೋಗದಿಂದ ಸ್ವಾವಲಂಬಿ ಬದುಕು – ಜಯಶ್ರೀ ಕೊಯಿಂಗೋಡಿ

ಗ್ರಾಮ ಪಂಚಾಯತು ಬೆಳ್ಳಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಧನಲಕ್ಷ್ಮೀ ಸ್ತ್ರೀಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ, ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ.) ಬೆಳ್ಳಾರೆ ಸೆಸ್ಕೋ ಸೋಲಾರ್ ಲೈಟ್ಸ್ ಪ್ರೈ.ಲಿ. ಬೆಂಗಳೂರು ಮತ್ತು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿಅಂತರಾಷ್ಟ್ರೀಯ...

ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಳ ತಾಲೂಕು ಇದರ ವತಿಯಿಂದ ಬಡ್ಡಡ್ಕದ ಕೂರ್ನಡ್ಕ ಎಂಬಲ್ಲಿ ಶ್ರೀಮತಿ ತೇಜಕುಮಾರಿಯವರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು. ಸುಳ್ಯ ತಾಲೂಕಿನ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕನಾಥ್ ಅಮಚೂರು ನವರು ನಾಮಫಲಕವನ್ನು ಅನಾವರಣಗೊಳಿಸಿ ಗ್ರಾಮೀಣ ಮಟ್ಟದಲ್ಲಿ ಕೊರತೆಗಳು ಕಂಡುಬಂದಲ್ಲಿ ಮೊದಲಾಗಿ ಆ ಸಮಸ್ಯೆಯನ್ನು ಗುರುತಿಸಿ...

ಧೂಮಪಾನ ಮುಕ್ತ ಭಾರತ ಜನುಮಿಸಲಿ, ವಿಶ್ವ ಧೂಮಪಾನ ರಹಿತ ದಿನ………. ಮಾರ್ಚ್ 13

ಪ್ರತಿ ವರುಷ ಮಾರ್ಚ್ ತಿಂಗಳ ಎರಡನೇ ಬುಧವಾರದಂದು ವಿಶ್ವ ಧೂಮಪಾನ ರಹಿತ ದಿನ ಎಂದು ಆಚರಿಸಲಾಗುತ್ತದೆ. ಈ ವರುಷಮಾರ್ಚ್ 13 ರಂದು ವಿಶ್ವದಾದ್ಯಂತ ವಿಶ್ವ ಧೂಮಪಾನ ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ತಂಬಾಕಿನ ಎಲ್ಲಾ ರೀತಿಯ ಉತ್ಪನ್ನಗಳಿಂದ 24 ಗಂಟೆಗಳ ಕಾಲ ದೂರವಿದ್ದು, ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಮತ್ತು ದುಷ್ಪರಿಣಾಮಗಳನ್ನು...

ಗುತ್ತಿಗಾರಿನಲ್ಲಿ ಶಿವರಾಮ ದೇವ ಮಾಲಕತ್ವದ ಪ್ರಕೃತಿ ಸ್ಟೇಷನರಿ ಶುಭಾರಂಭ

ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಶಿವರಾಮ ದೇವ ಮಾಲೀಕತ್ವದ ಪ್ರಕೃತಿ ಸ್ಟೇಷನರಿ ಮಾ.7 ರಂದು ಶುಭಾರಂಭಗೊಂಡಿತು. ಹಿರಿಯರಾದ ಮುಳಿಯ ತಿಮ್ಮಪ್ಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿಕಟಪೂರ್ವ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ರಾಘವೇಂದ್ರ ಕಾಂಪ್ಲೆಕ್ಸ್‌ ನ...

ಲ್ಯಾಂಪ್ಸ್ ಸೊಸೈಟಿ ಸುಳ್ಯ ಇದರ ಆಡಳಿತ ಮಂಡಳಿಗೆ ಸರಕಾರದ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕ‌ರ್ ಕಲ್ಮಡ್ಕ ನೇಮಕ

ಸುಳ್ಯ ಲ್ಯಾಂಪ್ಸ್ ಸೊಸೈಟಿ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕ‌ರ್ ಕಲ್ಮಡ್ಕ ನೇಮಕಗೊಂಡಿದ್ದಾರೆ. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1) ರ ಮೇರೆಗೆ ಸುಳ್ಯ ತಾಲ್ಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ ನಿ., (ಲ್ಯಾಂಪ್ಸ್) ಸುಳ್ಯ, ಇದರ ಆಡಳಿತ ಮಂಡಳಿಗೆ ಭವಾನಿಶಂಕರ್ ಕಲ್ಮಡ್ಕ ಇವರನ್ನು ಸರಕಾರದ...

ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮಂಡಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಶ್ರೀನಿಧಿ ಮಹಿಳಾ ಮಂಡಳಾ (ರಿ) ಕಾಯರ್ತೋಡಿ,ಸೂರ್ತಿಲ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.9 ರಂದುಶ್ರೀ ನಿಧಿ ಮಹಿಳಾ ಮಂಡಲದ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಧುಮತಿ ಬೊಳ್ಳೂರು,ಜತೆ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಒಕ್ಕೂಟ ಮತ್ತು ಅಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು...

ಕಂದ್ರಪ್ಪಾಡಿ ಜಾತ್ರೋತ್ಸವದ ಅಂಗವಾಗಿ ಧ್ವಜಾರೋಹಣ

ಇತಿಹಾಸ ಪ್ರಸಿದ್ಧ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಪೂರ್ವ ಪದ್ದತಿಯ ಪ್ರಕಾರವಾಗಿ ಧ್ವಜಾರೋಹಣ ನೇರವೇರಿತು. ಮಾರ್ಚ್ 14 ರಂದು ಮುಂಡೋಡಿ ತರವಾಡು ಮನೆಯಿಂದ, ಶ್ರೀ ರುದ್ರ ಚಾಮುಂಡಿ ದೈವಸ್ಥಾನದಿಂದ,ತಳೂರಿನಿಂದ ಶ್ರೀ ದೈವಗಳ ಭಂಡಾರ ಬಂದು ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ 15 ರಂದು ಬೆಳಿಗ್ಗೆ ಶ್ರೀ ರಾಜ್ಯದೈವ, ಶ್ರೀ ರುದ್ರ...
Loading posts...

All posts loaded

No more posts

error: Content is protected !!