ಶುಭವಿವಾಹ: ಅಭಿಜಿತ್ – ಸುಮನ

ಮಂಜೇಶ್ವರದ ಶೇಣಿ ತೋಟದ ಮನೆ ರವೀಂದ್ರನಾಥ ನಾಯಕ್ - ಸಂದ್ಯಾ ಅವರ ಸುಪುತ್ರ ಅಭಿಜಿತ್ ಅವರ ವಿವಾಹವು ಸುಳ್ಯದ ಉದ್ಯಮಿ ಗೋಪಾಲಕೃಷ್ಣ ಕರೋಡಿ ಕವಿತಾ ಕರೋಡಿ ಅವರ ಸುಪುತ್ರಿ ಸುಮನ ಅವರೊಂದಿಗೆ ಡಿ. ೧೨ ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಂದು ಷಷ್ಠಿ ಮಹೋತ್ಸವ ಆರಂಭಗೊಂಡಿದ್ದು ಡಿ.12 ಆದಿತ್ಯವಾರದ ತನಕ ವೈಭವೋಪೇತವಾಗಿ ಜರುಗಿತು. ಡಿ.08ರಂದು ಪಂಚಮಿ ಪ್ರಯುಕ್ತ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು ಶ್ರೀ ಮಂಜುನಾಥೇಶ್ವರ...
Ad Widget

ಶುಭವಿವಾಹ: ರಮೇಶ-ಹರ್ಷಿತಾ

ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ಡಿ.12 ಆದಿತ್ಯವಾರದಂದು ಪೆರುವಾಜೆಯ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವದ ನಿಮಿತ್ತ ಚೆನ್ನಕೇಶವ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

ಸುಳ್ಯ: ಶ್ರಿ ಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮ ಕಲಶೋತ್ಸವವು ಡಿ.21 ರಿಂದ ನಡೆಯಲಿದ್ದು ಆ ಪ್ರಯುಕ್ತ ಡಿ. 11 ರಂದು ದೇವಸ್ಥಾನದ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭ ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಯಂ ವೆಂಕಪ್ಪ ಗೌಡ ,ರಾಧಾಕೃಷ್ಣ ರೈ ಬೂಡು , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ,ಭಗವತಿ ಯುವ ಸೇವಾ ಸಂಘ ಬೂಡು...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಿಚ್ಚ ಸುದೀಪ್ ಭೇಟಿ

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.ನಂತರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ನೆರವೇರಿಸಿದರು. ಬಳಿಕ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ...

ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ ಸದಸ್ಯರ ಬೆಂಬಲ ಅಗತ್ಯವಿಲ್ಲ- ಬಿಜೆಪಿ ಹಾಗೂ ಎಸ್.ಡಿ.ಪಿ.ಐ ಕೋಮುವಾದಿ ಪಕ್ಷ : ಆರ್.ಕೆ.ಮಹಮ್ಮದ್

ಡಿ.10 ರಂದು ನಡೆದ ವಿಧಾನ ಪರಿಷತ್ ಚುನಾವಣೆ ಬಳಿಕ ಸುಳ್ಯ ನಗರ ಪಂಚಾಯತ್ ಕಾರ್ಯಾಲಯದ ಮುಂದೆ ಕಾಂಗ್ರೆಸ್ 4 ಸದಸ್ಯರು ಮತ್ತು ಪಕ್ಷೇತರ 2 ಸದಸ್ಯರು ಮತ್ತು ಉಸ್ತುವಾರಿ ಸದಸ್ಯರೊಂದಿಗೆ ವಿಜಯದ ಸಂಕೇತವನ್ನು ತೋರಿಸಿ ಫೋಟೋ ಪೋಸ್ ಕೊಟ್ಟು ಮಾಧ್ಯಮದಲ್ಲಿ ಸಾರ್ವಜನಿಕರಿಗೆ ತಿಳಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ,...

ಡಿ.24: ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಕೊರಗಜ್ಜನ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.24 ಶುಕ್ರವಾರದಂದು ನಡೆಯಲಿದೆ. ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 9.00ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ದೈವದ ಭಂಡಾರ ತೆಗೆದು ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ...

ನಡುಗಲ್ಲು : ಹಗಲಿನ ವೇಳೆಯಲ್ಲಿ ರಸ್ತೆ ಬದಿ ಕಾಣಿಸಿಕೊಂಡ ಕಾಡಾನೆ

ನಡುಗಲ್ಲು ಸಮೀಪದ ಅಂಜೇರಿಯ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ರಸ್ತೆ ದಾಟಿದ ಘಟನೆ ಡಿ.10 ರ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.ಸುಬ್ರಹ್ಮಣ್ಯ ಗುತ್ತಿಗಾರು ಮುಖ್ಯ ರಸ್ತೆಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳಭಾಗದ ತೋಟಕ್ಕೆ ತೆರಳಿದೆ.ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ...

ಸುಬ್ರಹ್ಮಣ್ಯ : ದೇವರ ನೌಕಾ ವಿಹಾರ, ಅವಭೃತೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.09 ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಈ ಮೂಲಕ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನವಾಯಿತು. ಡಿ.08 ರಂದು ರಾತ್ರಿ ಪಂಚಮಿ ರಥೋತ್ಸವ ನೆರವೇರಿತು.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆಯ ಪ್ರಯುಕ್ತ ಡಿ.8 ರಂದು ಪಂಚಮಿ ರಥೋತ್ಸವ ನೆರವೇರಿತು. ಶ್ರೀ ದೇಗುಲದ ಅರ್ಚಕ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯ ವೈದಿಕ ವಿಧಿ-ವಿಧಾನಗಳನ್ನು...

ದಿ.ಕೃಷ್ಣಪ್ಪ ಅಡ್ಯಡ್ಕರವರ ಮನೆಗೆ ಸಚಿವ ಅಂಗಾರ ಭೇಟಿ

ಇತ್ತೀಚೆಗೆ ನಿಧನರಾದ ಹಿಂದೂ ಜಾಗರಣ ವೇದಿಕೆ ತೊಡಿಕಾನ ಗ್ರಾಮದ ಗೌರವಾಧ್ಯಕ್ಷ ಕೃಷ್ಣಪ್ಪ ಅಡ್ಯಡ್ಕ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ರವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
Loading posts...

All posts loaded

No more posts

error: Content is protected !!