ಎ.ಬಿ.ವಿ.ಪಿ ವತಿಯಿಂದ ಪ್ರತಿಭಟನೆ – ಹಾಸ್ಟೇಲ್ ಹಾಗೂ ಗ್ರಾಮೀಣ ಬಸ್ ವ್ಯವಸ್ಥೆ ಸರಿಪಡಿಸಲು ಒತ್ತಾಯ

ಮಂಗಳೂರು ವಿಶ್ವ ವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಯೋಗ್ಯವಾದ ಫಲಿತಾಂಶವನ್ನು ಘೋಷಿಸಬೇಕು. ಹಾಗೂ ಶಾಲಾ ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನಹರಿಸಿದ್ದು, ಕೋವಿಡ್ ಕಾರಣಕ್ಕೆ ಬದಲಾದ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೂ...

ಸುಬ್ರಹ್ಮಣ್ಯ : ಎ.ಬಿ.ವಿ.ಪಿ ವತಿಯಿಂದ ಬಿಪಿನ್ ರಾವತ್ ಹಾಗೂ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ಘಟಕದ ವತಿಯಿಂದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣವನ್ನು ಹೊಂದಿದ ಭಾರತೀಯ ಸೇನೆಯ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್ ಹಾಗೂ ಸೇನಾಧಿಕಾರಿಗಳಿಗೆ ಡಿ.12 ರಂದು ವನದುರ್ಗಾ ದೇವಸ್ಥಾನದ ಸಭಾಂಗಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಿಶ್ಮಿತಾ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಇಲೈ ಅರಸ್, ರಾಜ್ಯ...
Ad Widget

ಜಾಣಪ್ಪ ಅಜಿಲರಿಗೆ ಸುಬ್ರಹ್ಮಣ್ಯ ಐನೆಕಿದು ಸೊಸೈಟಿ ವತಿಯಿಂದ ಶ್ರದ್ಧಾಂಜಲಿ

ನ.30 ರಂದು ನಿಧನರಾದ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಾಣಪ್ಪ ಅಜಿಲರಿಗೆ ಡಿ.13 ರಂದು ಸಂಘದ ಕಛೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಉಪಾಧ್ಯಕ್ಷ ಮಾಧವ, ಹಿರಿಯ ಸಹಕಾರಿಗಳಾದ ಕೇಶವ ಭಟ್, ನಿರ್ದೇಶಕರುಗಳಾದ ಸೊಮಸುಂದರ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾದ, ವೆಂಕಟೇಶ್.ಹೆಚ್.ಎಲ್, ಸುಬ್ರಹ್ಮಣ್ಯ ರಾವ್, ದಾಮೋದರ,...

ಅಡ್ಕಾರು ಕುಟುಂಬದ ಧರ್ಮನಡಾವಳಿ ನೇಮೋತ್ಸವ

ಅಡ್ಕಾರು ಕುಟುಂಬದ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ಮುನಿಸ್ವಾಮಿ ಮತ್ತು ಪರಿವಾರ ದೈವಗಳ ಧರ್ಮನಡಾವಳಿ ನೇಮೋತ್ಸವವು ಅಡ್ಕಾರು ತರವಾಡು ಮನೆಯಲ್ಲಿ ಡಿ.11 ಮತ್ತು 12 ರಂದು 2 ದಿನಗಳ ಕಾಲ ನಡೆಯಿತು. ಡಿ.11 ರಂದು ಸಂಜೆ 6:30 ಕ್ಕೆ ದೈವಗಳ ಭಂಡಾರ ತೆಗೆದು ನಂತರ ರಾತ್ರಿ 7:00 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ...

ಡಿ.18: ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಎಂ.ರಾಮಕೃಷ್ಣ ರೈ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಪೂರ್ವಾಹ್ನ ಗಂಟೆ 11.00ಕ್ಕೆ ಸರಿಯಾಗಿ ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗುವಂತೆ ಸಂಘದ ಮುಖ್ಯ...

ಡಿ.19: ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ.) ಅಲೆಕ್ಕಾಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಡಿ.19 ಆದಿತ್ಯವಾರ ಪೂರ್ವಾಹ್ನ ಗಂಟೆ 10.30ಕ್ಕೆ ಸರಿಯಾಗಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ, ಅಲೆಕ್ಕಾಡಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಹೆಚ್ ಹುದೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು...

ಶುಭವಿವಾಹ: ಕುಸುಮಾಧರ-ಧನಲಕ್ಷ್ಮೀ

ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀಮತಿ ನೀಲಮ್ಮ ಮತ್ತು ಶ್ರೀ ಕರಿಯಪ್ಪ ಗೌಡರ ಪುತ್ರ ಚಿ|ರಾ| ಕುಸುಮಾಧರ ರವರ ವಿವಾಹವು ಅಮರಮುಡ್ನೂರು ಗ್ರಾಮದ ಕುಂಟಿಕಾನ ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಹೊನ್ನಪ್ಪ ಗೌಡರ ಪುತ್ರಿ ಚಿ|ಸೌ| ಧನಲಕ್ಷ್ಮೀ ಯವರೊಂದಿಗೆ ಡಿ.13ರಂದು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಾಸುಕಿ ಸಭಾಭವನದಲ್ಲಿ ನಡೆಯಿತು.

ಸುಳ್ಯದ 8 ಮಂದಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಡಿ.11 ಮತ್ತು 12ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ರಿ.) ಇದರ ವತಿಯಿಂದ 40ನೇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು 8 ಜನ ಕ್ರೀಡಾಪಟುಗಳು ಪ್ರತಿನಿಧಿಸಿದ್ದು ಎಲ್ಲಾ 8 ಮಂದಿ ಕ್ರೀಡಾಪಟುಗಳು ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತುಕಾರಾಮ ಏನೆಕಲ್ಲು 100ಮೀ. ಮತ್ತು 200ಮೀ. ಓಟದಲ್ಲಿ...

ನಿಂತಿಕಲ್ಲಿನಲ್ಲಿ ನವಶಕ್ತಿ ಇಲೆಕ್ಟಿಕಲ್ಸ್ ಶುಭಾರಂಭ

ಚೇತನ್ ಕೀಲಾಡಿಯವರ ಮಾಲಕತ್ವದ ನವಶಕ್ತಿ ಇಲೆಕ್ಟಿಕಲ್ಸ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿಯು ನಿಂತಿಕಲ್ಲಿನ ಸಾನಿಧ್ಯ ವಾಣಿಜ್ಯ ಸಂಕೀರ್ಣದಲ್ಲಿ ಡಿ.13 ರಂದು ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಹುದೇರಿ ಮತ್ತು ನವಜ್ಯೋತಿ ಇಲೆಕ್ಟಿಕಲ್ಸ್ ನ ಮಾಲಕ ಭಾಸ್ಕರ ಬದಿಕಾನ ದೀಪ ಬೆಳಗಿಸಿ ಉದ್ಘಾಟಿಸಿದರು.ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ...

ಡಾ. ಕೆ ಟಿ ವಿಶ್ವನಾಥ್ ರವರಿಗೆ ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಹಾಗು ಕುರಲ್ ತುಳು ಕೂಟ ದುಗ್ಗಲಡ್ಕ ವತಿಯಿಂದ ಅಭಿನಂದನೆ

ಮಿತ್ರ ಯುವಕ ಮಂಡಲ (ರಿ) ಕೊಯಿಕುಳಿ ಹಾಗೂ ಕುರಲ್ ತುಳು ಕೂಟ ದುಗ್ಗಲಡ್ಕದ ಸಂಚಾಲಕರಾದ ಶ್ರೀ ಕೆ ಟಿ ವಿಶ್ವನಾಥ್ ರವರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ವೇದಿಕ್ ಕಲ್ವರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆಯಲ್ಲಿ ಮಿತ್ರ ಯುವಕ ಮಂಡಲದ ಸಾಮಾನ್ಯ ಸಭೆಯಲ್ಲಿ ಅಭಿನಂದಿಸಲಾಯಿತು. ಹಿರಿಯ ಸದಸ್ಯರಾದ ಶ್ರೀ ಕೃಷ್ಣ ಸ್ವಾಮಿ ಕಂಡಡ್ಕ,...
Loading posts...

All posts loaded

No more posts

error: Content is protected !!