- Friday
- May 8th, 2026
ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕಾವೇರಿ ಕೋಂ ಭರತ್ ಹಾಲೆಮಜಲು ನಾಲ್ಕೂರು ಇವರ ಪುತ್ರಿ ಕು. ಭುವಿತ ಪಿ ಬಿ ಇವರು 576 ಅಂಕ ಗಳಿಸಿರುತ್ತಾರೆ. ಎಲಿಮಲೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಇವರಿಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಆಸಕ್ತಿ ಇದ್ದು, ಪಿಸಿಎಂಸಿ ಯಲ್ಲಿ ಪದವಿ ಮಾಡಬೇಕು ಎಂಬ ಆಸೆ ಇದೆ.
ಪ್ರದೀಪ್ ಟಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ. ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬಾಳಿಲ ತೋಟ ಮನೆ...
ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್) ಬೆಳ್ಳಾರೆಯ ವಿದ್ಯಾರ್ಥಿಯಾದ ಸಾತ್ವಿಕ್.ಹೆಚ್.ಎಸ್ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ. ಅಮರಸುದ್ದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಾತ್ವಿಕ್.ಹೆಚ್.ಎಸ್ ಭವಿಷ್ಯದಲ್ಲಿ ಗಣಿತ ಸಂಶೋಧಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳಂಜ ಗ್ರಾಮದ ಕಜೆಮೂಲೆ ಡಾ.ಶಶಿಧರ್.ಹೆಚ್.ಎಸ್ ಹಾಗೂ ಡಾ.ಅನುಪಮಾ ಶಶಿಧರ್ ದಂಪತಿಗಳ ಸುಪುತ್ರರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಶೇಣಿ, ಚೊಕ್ಕಾಡಿ ಭಗವಾನ್...
ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ದಾಖಲಿಸಿದೆ. ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 24 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಮತ್ತು 9 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಭವಿತ್ ಜಿ. ಬಾಳುಗೋಡು 625ರಲ್ಲಿ 623 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಸಾತ್ವಿಕ್ ಹೆಚ್.ಎಸ್. ಈ ಬಾರಿಯ ಎಸ್ .ಎಸ್.ಎಲ್.ಸಿ. ಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಹೊರ ಬಿದ್ದಿದೆ. 85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರು 81.30 % ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳ ಪೈಕಿ, ಈ ಬಾರಿ 7 ಲಕ್ಷದ 30 ಸಾವಿರದ 881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 145 ವಿದ್ಯಾರ್ಥಿಗಳು...
ವಸ್ತ್ರ ವ್ಯಾಪಾರದಲ್ಲಿ ಹೆಸರುಗಳಿಸಿರುವ ಸುಳ್ಯದ ಕುಮ್ ಕುಮ್ ಪ್ಯಾಶನ್ ನಲ್ಲಿ Zeel ಕಂಪೆನಿಯ ರೈನ್ ಕೋಟ್ ಗಳ ಅಮೋಘ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ. ಮಳೆಗಾಲ ಆರಂಭದೊಂದಿಗೆ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿದ್ದು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ Zeel ಕಂಪನಿಯ ರೈನ್ ಕೋಟ್ ಗಳ ಅಪೂರ್ವ ಸಂಗ್ರಹ ಮಾಡಲಾಗಿದ್ದು ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತದೆ...
ಸುಳ್ಯ - ಕೊಡಿಯಾಲಬೈಲ್ ರಸ್ತೆಯು ಕಂಬಳದ ಗದ್ದೆಯಂತಾಗಿದ್ದು, ಸಂಚಾರ ದುಸ್ತರವಾಗಿದೆ. ಸೇತುವೆಯ ಮೇಲೆ ಮಳೆನೀರು ನಿಂತು ಹೊಳೆಯಂತಾಗಿದೆ. ಕೆಲ ವರ್ಷಗಳಿಂದ ಈ ರಸ್ತೆ ಸಂಪೂರ್ಣ ದುರಸ್ತಿ ಕಾಣದೇ ಕಂಬಳದ ಗದ್ದೆಯಂತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಬೋರ್ಡ್ ಹಾಕಿ "ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರಕಾರಿ ಪ್ರಥಮ ದರ್ಜೆ...
ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿಡಬ್ಲ್ಯೂ ಡಿ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗಮನಹರಿಸದೇ ನಿರ್ಲಕ್ಷ್ಯ ವಹಿಸುತ್ತಿದೆ. ಮರ ಕಡಿಯಲು ಅನುಮತಿ ನೀಡದ ಕಾರಣ ರಸ್ತೆ ಬದಿಯಲ್ಲಿರುವ ಮರಗಳು ಬೀಳುವ ಸ್ಥಿತಿಯಲ್ಲಿದ್ದು ಸಾರ್ವಜನಿಕರು ಭಯದ ಸ್ಥಿತಿಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರ ಕಡಿಯಲು ಸಚಿವರು ಅಧಿಕಾರಿಗಳಿಗೆ ಮರ ಕಡಿಸಲು...
ಸುಳ್ಯ ಪೈಚಾರ್ ಬೊಳುಬೈಲ್ ಬಳಿ ಇರುವ ಪೀಸ್ ಸ್ಕೂಲ್ ವತಿಯಿಂದ ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಕಲಿಕೆ ಬದಲಾವಣೆಯತ್ತ ಎಂಬ ವಿಷಯದಲ್ಲಿ ಶೈಕ್ಷಣಿಕ ತಜ್ಞರು ಹಾಗೂ ಮಾನಸಿಕ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಮೆ. 18 ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಮೊಟಿವೆಟ್ಲಾಝ್ ತರಭೇತಿ ಸಂಸ್ಥೆಯ ಆಡಳಿತ ನಿರ್ದೇಶಕಿ ನಶ್ರೀನ್ ಅಹ್ಮದ್ ಬಾವ ಗುಣಮಟ್ಟ ಹಾಗೂ ಪ್ರಾಯೋಗಿಕ ಶಿಕ್ಷಣ,ಜೀವನ...
Loading posts...
All posts loaded
No more posts
