ರೋಟರಾಕ್ಟ್ ಜಿಲ್ಲಾ ನಿರ್ದೇಶಕರಾಗಿ ಪಿ.ವಿ.ಸುಬ್ರಮಣಿ

ಪ್ರತಿಷ್ಠಿತ ರೋಟರಾಕ್ಟ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಜಿಲ್ಲಾ ನಿರ್ದೇಶಕರಾಗಿ ಕಲ್ಲುಗುಂಡಿಯ ಸುಬ್ರಮಣಿ ಪಿ.ವಿ. 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ದಿವ್ಯಾಂಗ ಚೇತನರ ಅಭಿವೃದ್ಧಿ ಮತ್ತು ಅವಕಾಶ ಕಲ್ಪಿಸಲು ಗುರುತಿಸಲಾದ ಹುದ್ದೆಗೆ ಇವರನ್ನು ನೇಮಕಗೊಳಿಸಲಾಗಿದೆ.

ಗ್ರಾಮಸ್ಥರು ಅಳವಡಿಸಿದ 9 ಬ್ಯಾನರ್ ನದಿಗೆ ಕಿತ್ತೆಸೆದ ಕಿಡಿಗೇಡಿಗಳು – ದೈವದ ಮೊರೆ ಹೋಗಲು ನಿರ್ಧಾರ

ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಆಡಳಿತ ಗಮನಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯ 26 ಕಡೆಗಳಲ್ಲಿ ಹಾಕಿದ್ದ ಬ್ಯಾನರ್ ಹಾಕಿದ್ದರು. ಮುಖ್ಯಮಂತ್ರಿಗಳು ಬರುವ ಹಿಂದಿನ ರಾತ್ರಿ 9 ಕಡೆ ಹಾಕಿದ್ದ ಬ್ಯಾನರ್ ಕಳವು ಗೈಯಲ್ಪಟ್ಟಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬ್ಯಾನರ್ ಕಳುವುಗೈದ ಕಿಡಿಗೇಡಿಗಳ ವಿರುದ್ಧ ದೈವದ ಮೊರೆ ಹೋಗುತ್ತೇವೆ...
Ad Widget

ಬಿಳಿನೆಲೆ: ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ

ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆಯಲ್ಲಿ ಜು.13 ಬುಧವಾರದಂದು ವೇದವ್ಯಾಸ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಸಹಶಿಕ್ಷಕರಾದ ಶ್ರೀ ಗುರುಪ್ರಸಾದ್ ಭಟ್ ಗುರು ಪೂರ್ಣಿಮೆಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಗುರುಗಳಾದ ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಶ್ರೀ ವಿನೋದ್ ಕುಮಾರ್ ಇವರು ಧನ್ಯವಾದಗೈದರು. ಸಹ ಶಿಕ್ಷಕರಾದ ಶ್ರೀ ಉಮೇಶ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಿಂತಿಕಲ್ಲು : ಅಕ್ಷಯ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ಶುಭಾರಂಭ

ನಿಂತಿಕಲ್ಲಿನ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ಭುವನೇಶ್ ಕಡೀರ ಅವರ ಮಾಲಕತ್ವದಲ್ಲಿ ಜು.11 ರಂದು ಅಕ್ಷಯ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ಶುಭಾರಂಭಗೊಂಡಿತು. ಮಾಲಕರ ಮಾತೃಶ್ರೀ ಶ್ರೀಮತಿ ಶೇಷಮ್ಮ ಮೋನಪ್ಪ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ನ ಮಾಲಕರಾದ ಹಾಗೂ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಪ್ಪ...

ವಿಪರೀತ ಮಳೆ – ಕೃಷಿಕರು ಕಂಗಾಲು – ಹಲವೆಡೆ ತೋಟಗಳಿಗೆ ಬಾಧಿಸಿದ ಕೊಳೆರೋಗ

ಸುಳ್ಯ : ತಾಲೂಕಿನ ರೈತರು ಹೆಚ್ಚಾಗಿ ಅಡಿಕೆ ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದು ಈ ಬಾರಿ ಸುರಿದ ಕುಂಭದ್ರೋಣ ಮಳೆಗೆ ಅಡಿಕೆ ರಬ್ಬರ್ ಕೃಷಿಕರನ್ನು ಕಂಗಾಲಾಗಿಸಿದೆ. ಕೃಷಿ ಕೂಲಿ ಕಾರ್ಮಿಕರು ಕೂಡ ತೊಂದರೆಗೆ ಸಿಲುಕಿದ್ದಾರೆ. ವಿಪರೀತ ಮಳೆಯ ಪರಿಣಾಮದಿಂದ ತಾಲೂಕಿನ ವಿವಿಧೆಡೆ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ, ಕಲ್ಮಕಾರು, ಅಜ್ಜಾವರ, ಮರ್ಕಂಜ ಹಾಗೂ...

ಕಾರ್ಯಕರ್ತನ ನೋವಿಗೆ ಸ್ಪಂದಿಸಿದ ಕೆಪಿಸಿಸಿ ಸಂಯೋಜಕ ನಂದಕುಮಾರ್

ತಾಲೂಕಿನ ಹರಿಹರ ಪಲ್ಲತಡ್ಕ ಗ್ರಾಮದ ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತನ ನೂತನ ಮನೆಯು ವಿಪರೀತವಾದ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೊಳಪಟ್ಟು ಗುಡ್ಡ ಕುಸಿದು ಹಾನಿಗೀಡಾಗಿದ್ದ ವಿಚಾರವನ್ನು ತಿಳಿದ ಕೆಪಿಸಿಸಿ ಸಂಯೋಜಕರಾದ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನಂದಕುಮಾರ್ ರವರು ತಕ್ಷಣ ಸ್ಥಳಕ್ಕಾಗಮಿಸಿ ಸ್ಥಳೀಯ ಸಮಾಜಸೇವಾ ಸಂಘಟನೆಯಲ್ಲಿ ಒಂದಾದ ಲಯನ್ಸ್ ಕ್ಲಬ್ ರವರ ಜೊತೆಗೆ ಕೈಜೋಡಿಸಿ ಸಹಾಯಹಸ್ತ...

ಐವರ್ನಾಡಿನಲ್ಲಿ ಧರ್ಮಶ್ರೀ ಕಾಂಪ್ಲೆಕ್ಸ್ ಉದ್ಘಾಟನೆ

ಐವರ್ನಾಡು ಗ್ರಾಮದ ಪಾಲೆಪ್ಪಾಡಿಯಲ್ಲಿ ಮುಕುಂದ ಪಾಲೆಪ್ಪಾಡಿ ಮಾಲಕತ್ವದ ಧರ್ಮಶ್ರೀ ಕಾಂಪ್ಲೆಕ್ಸ್ ಜು.12 ರಂದು ಉದ್ಘಾಟನೆಗೊಂಡಿತು. ಗಿರೀಶ್ ಅಸ್ರಣ್ಣ ನವರ ನೇತೃತ್ವದಲ್ಲಿ ಗಣಹೋಮದೊಂದಿಗೆ ಧಾರ್ಮಿಕ ವಿಧಿವಿಧಾನ ನೆರವೇರಿತು. ಈ ಸಂದರ್ಭದಲ್ಲಿ ಮನೆಯವರು, ಕುಟುಂಬಸ್ಥರು, ಬಂಧು ಮಿತ್ರರು, ಊರವರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ : ಎಬಿವಿಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಘಟಕದ ವತಿಯಿಂದ ೭೫ ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ ವಲ್ಲೀಶ ಸಭಾವನದಲ್ಲಿ ಆಚರಿಸಲಾಯಿತು. ಪುತ್ತೂರು ಜಿಲ್ಲಾ ಸಂಚಾಲಕ್ ಜಯಂತ ಹಾಗೂ ಸುಬ್ರಮಣ್ಯ ನಗರ ಕಾರ್ಯದರ್ಶಿಯಾದ ಸೃಜನ್ ರೈ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಗುತ್ತಿಗಾರು :- ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಕೆ.ಪಿ.ಸಿ.ಸಿ ಸದಸ್ಯ ನಂದಕುಮಾರ್ ಅವರಿಂದ ದೇಣಿಗೆ ಹಸ್ತಾಂತರ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಜು.12 ರಂದು ಮಡಿಕೇರಿ ನಗರ ಸಭಾ ಮಾಜಿ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಸದಸ್ಯರಾದ ನಂದಕುಮಾರ್ ಅವರು ದೇಣಿಗೆಯನ್ನು ಹಸ್ತಾಂತರ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಅಂಬುಲೆನ್ಸ್ ಸೇವೆ ಮತ್ತು ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಇತರೆ ಕಾರ್ಯಕ್ರಮಗಳು ಹಾಗೂ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿ ಶುಭ...

ಸಂಪಾಜೆ : ಕಾಳಜಿ ಕೇಂದ್ರಕ್ಕೆ ಸಿ.ಎಂ. ಬೊಮ್ಮಾಯಿ ಭೇಟಿ – ಪರಿಹಾರದ ಚೆಕ್ ವಿತರಣೆ

ಕೊಡಗು, ದ.ಕ., ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಡಿಕೇರಿಯಿಂದ ರಸ್ತೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿರುವ ವೇಳೆ ಕೊಯನಾಡು ಗಣಪತಿ ದೇವಸ್ಥಾನದ ಸಭಾಭವನದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ಮಾಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ನಂತರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಹಾಯಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ, ಜಿಲ್ಲಾಧಿಕಾರಿ ಡಾ....
Loading posts...

All posts loaded

No more posts

error: Content is protected !!