ದೈವ ನರ್ತನ, ಕೊಳಲುವಾದನ, ಯಕ್ಷಗಾನಕ್ಕೂ ಸೈ – ಈ ಸಕಲ ಕಲಾ ವಲ್ಲಭ ವಿಜಿತ್ ಮೈತಡ್ಕ

ಮುಂದೆ ಗುರಿ, ಹಿಂದೆ ಗುರು ಇದ್ದು ಸಾಧಿಸುವ ಛಲ ಇದ್ದರೆ ಸಾಧಕನಿಗೆ ಸಾಧನೆ ಅಸಾಧ್ಯವಲ್ಲ ಎಂಬ ಮಾತು ಜನಜನಿತ. ಆದರೆ ಹಿಂದೆ ಗುರುವಿಲ್ಲದಿದ್ದರೂ ಸಾಧನೆಯ ಹುಮ್ಮಸ್ಸು, ಗಮ್ಯ ತಲುಪಲು ಬೇಕಾದ ಪ್ರಯತ್ನ, ಶ್ರದ್ಧೆ ಇದ್ದರೆ ಯಾವುದೇ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿ ಪಡೆಯಬಹುದೆಂದು ತೋರಿಸಿಕೊಟ್ಟವರು ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕದ ವಿಜಿತ್ ಕುಮಾರ್. ದೈವ ನರ್ತನ ವೃತ್ತಿಯ...

ಆದಿ ಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯದಲ್ಲಿ ಗ್ರಾಮ ವಾಸ್ತವ್ಯ

ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿ ಬಂದ ಯೋಗ ಭಾಗ್ಯವೆಂದು ಪರಿಗಣಿಸಿ, ನಾವೆಲ್ಲರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಪೂಜ್ಯರ ಆಗಮನದ...
Ad Widget

ಶುಭವಿವಾಹ: ಚಿ|ರಾ|ಭಾಸ್ಕರ – ಚಿ|ಸೌ|ಚೈತ್ರಾ

ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ತಿಮ್ಮಣ್ಣ ನಾಯ್ಕರ ಸುಪುತ್ರ ಚಿ|ರಾ|ಭಾಸ್ಕರ ರವರ ವಿವಾಹವು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ಶ್ರೀ ಸೇಸಪ್ಪ ನಾಯ್ಕರ ಸುಪುತ್ರಿ ಚಿ|ಸೌ|ಚೈತ್ರಾ ರವರೊಂದಿಗೆ ಡಿ.04ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಶುಭವಿವಾಹ: ಚಿ|ಪ್ರಸಾದ – ಚಿ|ಸೌ|ಅಶ್ವಿನಿ

ಬೆಳ್ಳಾರೆ (ಕೊಳ್ತಿಗೆ) ಶ್ರೀಮತಿ ಸುಮತಿ ಮತ್ತು ಶ್ರೀ ಸತ್ಯನಾರಾಯಣ ಆಚಾರ್ಯರ ಸುಪುತ್ರ ಚಿ|ಪ್ರಸಾದ ರವರ ವಿವಾಹವು ಕಯ್ಯಾರು ಶ್ರೀಮತಿ ಆಶಾ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರ ಸುಪುತ್ರಿ ಚಿ|ಸೌ|ಅಶ್ವಿನಿ ರವರೊಂದಿಗೆ ಡಿ.02 ಶುಕ್ರವಾರದಂದು ಪುತ್ತೂರಿನ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ : ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನ

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ ಮತ್ತು ಅಮರ ತರಂಗ ಸುಳ್ಯ ಇದರ ಸಹಯೋಗದೊಂದಿಗೆ ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ಉದಾರ ಕೊಡುಗೆಯಾದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನವು ನವಂಬರ್ 30ರಂದು ಕುಕ್ಕುಜಡ್ಕ ವಿದ್ಯಾಸಂಸ್ಥೆಯ ಸುವರ್ಣ ರಂಗ ಸಭಾಭವನದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು...

ಮಡಪ್ಪಾಡಿಯಲ್ಲಿ ಲಘು ಭೂಕಂಪನ – ಭಾರಿ ಶಬ್ದ

ಮಡಪ್ಪಾಡಿಯಲ್ಲಿ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ಹಲವರಿಗೆ ಶಬ್ದ ಕೇಳಿರುವ ಬಗ್ಗೆ, ಕಂಪನದ ಅನುಭವವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 7.30 ರ ಸಮಯದಲ್ಲಿ ದೊಡ್ಡ ಸದ್ದು ದೇವಚಳ್ಳ ಭಾಗದಲ್ಲೂ ಕೇಳಿಸಿದೆ ಎಂದು ತಿಳಿದುಬಂದಿದೆ.

ಡಿ.10 ರಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ

ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನ ಡಿ.10 ರಂದು ನಡೆಯಲಿದ್ದು, ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದ ವಿವರ ನೀಡಿದರು. ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನದ ಮಹತ್ವ ಏನು ಅನ್ನುವುದರ ಬಗ್ಗೆ ವಿವರಿಸಿದರು. ಸಂಪಾಜೆ, ಗೂನಡ್ಕ, ಸುಳ್ಯ ತಾಲೂಕಿನ ಹಲವು ಭಾಗಗಳು ಸರಣಿ ಭೂಕಂಪದಿಂದ ಜನ ಭಯಭೀತರಾಗಿದ್ದಾರೆ....

ಪತ್ರಕರ್ತರ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದ ಸಚಿವ ಎಸ್. ಅಂಗಾರ ;
ಪತ್ರಕರ್ತರ ಕೆಲಸ ದೇಶಕಾಯುವ ಸೈನಿಕರಂತೆ – ಒಡಿಯೂರು ಶ್ರೀ

ಪತ್ರಕರ್ತರು ನಿಖರ, ನೇರ ವರದಿ ಮಾಡುವ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸವಾಗಬೇಕಿದೆ. ನಮ್ಮ ಸ್ಪಷ್ಟತೆ, ಉದ್ದೇಶದಲ್ಲಿ ಯಾವುದೇ ರಾಜಿಮಾಡಿಮಾಡದೇ ನಮ್ಮ ಕೆಲಸದ ಬಗ್ಗೆ ಪ್ರಯತ್ನಿಸಿದಾಗ ಯಶಸ್ಸು ಸಾಧ್ಯ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಅವರು ಬುಧವಾರ ಸುಳ್ಯದ ಅಂಬಟಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಳ್ಯ ಪ್ರೆಸ್ ಕ್ಲಬ್ ಸುಳ್ಯನ...

ಕ.ರಾ.ರಸ್ತೆ ಸಾರಿಗೆ ಸಂಸ್ಥೆಯ ಚಿನ್ನದ ಪದಕ ಪುರಸ್ಕೃತ ಸೂರಪ್ಪ ಗೌಡ ಆಲೇಕಿ ಸೇವಾ ನಿವೃತ್ತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿನ್ನದ ಪದಕ ಪುರಸ್ಕೃತ ಚಾಲಕ ಸೂರಪ್ಪ ಗೌಡ ಆಲೇಕಿ ನ.30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಸುದೀರ್ಘ 28 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿದ ಇವರಿಗೆ 2006ರಲ್ಲಿ ಕರ್ನಾಟಕ ಸರಕಾರ ಬೆಳ್ಳಿಯ ಪದಕ ಹಾಗೂ ನಗದು ಬಹುಮಾನ ನೀಡಿದೆ. 2015ರಲ್ಲಿ ಇವರ ಅತ್ಯುತ್ತಮ ಚಾಲನೆಗೆ ಜೆಸಿಐ ಪುತ್ತೂರು...

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತಿಯಲ್ಲಿ ನೀರು ಪರೀಕ್ಷಾ ತರಬೇತಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತಿಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ ನೀರಿನ ಗುಣಮಟ್ಟದ ಪರೀಕ್ಷಣಾ ವಿಧಾನದ ಬಗ್ಗೆ ನ.28ರಂದು ತರಬೇತಿ ನೀಡಲಾಯಿತು. ಪುತ್ತೂರು ಉಪವಿಭಾಗದ ನೀರು ಪರೀಕ್ಷಾ ಪ್ರಯೋಗಾಲಯದ ಸಿಬ್ಬಂದಿ ಜಗದೀಶ್.ಎಂ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ...
Loading posts...

All posts loaded

No more posts

error: Content is protected !!