ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ, ಧನ ಸಹಾಯ ಹಸ್ತಾಂತರ.

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಪ್ರಥಮ ಮಾಸಿಕ ಮಹಾಸಭೆ ಆ. 5ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಅಜ್ಜಾವರ ಸ್ವಾಗತಿಸಿದರು. ಸಂಘದ ಸದಸ್ಯರಾಗಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಚೆನ್ನಕೇಶವರಿಗೆ ರೂ. 5000/- ಧನ ಸಹಾಯ ನೀಡಿದರು. ಕಾರ್ಯಕಾರಿ ಸಮಿತಿಗೆ...

ಬೆಳಕು ವಿಶೇಷಚೇತನರ ಸಂಜೀವಿನಿ ಸ್ವ ಸಹಾಯ ಗುಂಪು ರಚನೆ.

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶೇಷಚೇತನರ ಸಭೆ 5/08/23ರಂದು ನಡೆಯಿತು. ಈ ಸಭೆಯಲ್ಲಿ ನೂತನವಾಗಿ " ಬೆಳಕು ವಿಶೇಷಚೇತನರ ಸಂಜೀವಿನಿ ಸ್ವ ಸಹಾಯ ಸಂಘ" ರಚಿಸಲಾಯಿತು ಈ ಸಂದರ್ಭದಲ್ಲಿ ತಾಲೂಕಿನ ಎಂ.ಆರ್.ಡಬ್ಲ್ಯು ಶ್ರೀ ಚಂದ್ರಶೇಖರ, ತಾಲೂಕಿನ NRLM ವಲಯ ಮೇಲ್ವಿಚಾರಕ ಅವಿನಾಶ್, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ,ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಅಭಿವೃದ್ದಿ ಅಧಿಕಾರಿ...
Ad Widget

ಕೇರಂ ಪಂದ್ಯಾಟ: ಕನಕಮಜಲು ತಂಡಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಮುಕ್ತ ಕೇರಂ ಪಂದ್ಯಾಟದಲ್ಲಿ ಕನಕಮಜಲು ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.ಸಿಂಗಲ್ಸ್ ವಿಭಾಗದಲ್ಲಿ ಚಂದ್ರಶೇಖರ ಕನಕಮಜಲು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ,ಡಬಲ್ಸ್ ವಿಭಾಗದಲ್ಲಿ ಸತೀಶ್ ಬೊಮ್ಮಟ್ಟಿ ಮತ್ತು ಈಕ್ಷಿತ್ ಕಂಚಿಲ್ ಪಾಡಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ಮಾಪನ

ಸುಳ್ಯ ತಾಲೂಕಿನ ಶಾಲೆಗಳಲ್ಲೆ ಏಕೈಕ ಮಳೆ ಮಾಪನ ಇರುವ ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ಮಕ್ಕಳಿಗೆ ಪ್ರತಿ ದಿನ ಹವಾಮಾನ ಮಾಹಿತಿ ನೀಡಲಾಗುತ್ತದೆ. ಪ್ರತಿ ದಿನ ಮಕ್ಕಳು ಬೆಳಗ್ಗೆ 9.00ರಿಂದ ಮರುದಿನ 9.00ಗಂಟೆ ವರೆಗೆ ಬೀಳುವ ಮಳೆ ಪ್ರಮಾಣವನ್ನು ಅಳತೆ ಮಾಡಿ ದಾಖಲಿಸುತ್ತಾರೆ. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ ಪಿ.ಜಿ. ಎಸ್. ಎನ್ ಪ್ರಸಾದ್ ರವರು ಕಳೆದ 45ವರ್ಷಗಳಿಂದಲೂ...

ಶೇಣಿ: ಶಾಲಾ ಶೌಚಾಲಯ ಉದ್ಘಾಟನೆ

ಅಮರಪಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿಯಲ್ಲಿ ಗ್ರಾಮ ಪಂಚಾಯತ್ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮತ್ತು ಶಿಕ್ಷಣ ಇಲಾಖೆಯ ಜಂಟಿ ಅನುದಾನ ರೂ 5.30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಶೌಚಾಲಯ ಕಟ್ಟಡವನ್ನು ಅಮರಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾರವರು ಉದ್ಘಾಟಿಸಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ...

ಬಿಡುವು ನೀಡದ ಮಳೆ, ದಕ್ಷಿಣ ಕನ್ನಡ ಜಿಲ್ಲಾ ಶಾಲೆಗಳಿಗೆ ರಜೆ ಮುಂದುವರಿಕೆ.

ಬಿಡುವು ನೀಡದ ಮಳೆ, ದಕ್ಷಿಣ ಕನ್ನಡ ಶಾಲೆಗಳಿಗೆ ನಾಳೆಯೂ ರಜೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಎಡಬಿಡದೇ ಸುರಿಯುತ್ತಿದ್ದು ರೆಡ್​ ಅಲರ್ಟ್ ಘೋಷಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರೆಡ್​ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಾಗಿ ದಕ್ಷಿಣ...

ಆರಾಧನಾ ಪದ್ಧತಿಯನ್ನು ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ಕಲಿಸುವ ಪಾಲಕರು

✍️ ಭಾಸ್ಕರ ಜೋಗಿಬೆಟ್ಟು ತುಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಆರಾಧನಾ ಪದ್ಧತಿಗೆ ವಿಶೇಷವಾದ ಸ್ಥಾನ ಮಾನವಿದೆ. ಇಲ್ಲಿ ಅಲ್ಲಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳು , ಬನಗಳು , ಕಟ್ಟೆಗಳನ್ನು ಕಾಣಬಹುದು. ಇಲ್ಲಿನ ಜನರಿಗೆ ನಂಬಿಕೆಯೆ ಮೂಲ ಆಧಾರವಾಗಿದ್ದು, ದೈವಗಳ ಆರಾಧನೆಯನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಆರಾಧನ ಪದ್ಧತಿಯನ್ನು ಕಿರಿಯರು ನೋಡಿ ಕಲಿತು...

ಸುಳ್ಯ : ರೆಡ್ ಅಲರ್ಟ್ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪ.ಪೂ ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಹಳೆಗೇಟು ಬಳಿ ಬೈಕ್ ಮುಖಾಮುಖಿ ಡಿಕ್ಕಿ, ಆಸ್ಪತ್ರೆಗೆ ದಾಖಲು .

ಹಳೆಗೇಟು ಬಳಿ ನಿನ್ನೆ ಸಂಜೆ ಬೈಕ್ ಗಳ ಮಧ್ಯೆ ಪರಸ್ಪರ ಡಿಕ್ಕಿಯಾಗಿ ಸವಾರರಿಗೆ ಗಾಯವಾದ ಘಟನೆ ನಡೆದಿದೆ. ಬೆಟ್ಟಂಪಾಡಿಯ ಸ್ಮರಣ್ ಗಾಯಗೊಂಡವರು. ಪೈಚಾರ್ ನಿಂದ ಸುಳ್ಯಕ್ಕೆ ಬೈಕ್ ನಲ್ಲಿ ಬರುತ್ತಿದ್ದಾಗ ಸುಳ್ಯದಿಂದ ಪೈಚಾರ್ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕ್ ಕಾರ್ ಅನ್ನು ಒವರ್ ಟೇಕ್ ಮಾಡುವ ಭರದಲ್ಲಿ ಸ್ಮರಣ್ ರವರ ಬೈಕಿಗೆ ಢಿಕ್ಕಿಯಾಗಿದ್ದು ಅವರು ಅಲ್ಲೆ...

ಅರಂಬೂರಿನ ಇಡ್ಯಡ್ಕ ಸರಕಾರಿ ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ, ಅರಂಬೂರು ಇಲ್ಲಿ ಮೆಂಡ ಫೌಂಡೇಶನ್, ಎಸ್.ಪಿ. ಗ್ಲೋಬಲ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಒಂದು ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸ್ಮಾರ್ಟ್ ಸಿಸ್ಟಮ್ ಉದ್ಘಾಟನಾ ಕಾರ್ಯಕ್ರಮ ಜು.22 ರಂದು ನಡೆಯಿತು. ಸಭಾ...
Loading posts...

All posts loaded

No more posts

error: Content is protected !!