ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಪ್ರತಿ ಮನೆಗಳಿಗೆ ಸಿಹಿ ಹಂಚಿ ಸಂಭ್ರಮ.

ಭಾರತದ ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನಲೆಯಲ್ಲಿ ಮೇದಿನಡ್ಕ ತಮಿಳು ಕಾಲೋನಿಯಲ್ಲಿ ಸಂಭ್ರಮಾಚರಣೆ ಹಾಗೂ ಮನೆ ಮನೆ ಸಿಹಿ ವಿತರಿಸಿ ಪರಸ್ಪರ ಸಂತೋಷವನ್ನು ಹಂಚಿಕೊಂಡರು.

ಜಯರಾಮ ಮಾಸ್ಟರ್ ಅಡ್ತಲೆ ನಿಧನ

ಅರಂತೋಡು ಗ್ರಾಮದ ಅಡ್ತಲೆ  ಜಯರಾಮ ಮಾಸ್ಟರ್ ಇಂದು ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ  ನಿಧನ ಹೊಂದಿದ್ದಾರೆ. ಇವರಿಗೆ ಸುಮಾರು 74 ವರ್ಷ ಪ್ರಾಯ ಹೊಂದಿದ್ದರು. ಮೃತರು ಪತ್ನಿ ಶ್ರೀಮತಿ ಯಶೋಧ,ಪುತ್ರಿಯಾದ ಶ್ರೀಮತಿ ದೀಪಿಕಾ ಅಡ್ತಲೆ , ಪುತ್ರರಾದ  ಪ್ರದೀಪ್ ಅಡ್ತಲೆ , ಸಂದೀಪ್ ಅಡ್ತಲೆ ಹಾಗೂ ಸಹೋದರರಾದ ...
Ad Widget

ಪೆರುವಾಜೆ ಭಾ ಜ ಪ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ

ಪೆರುವಾಜೆ ಭಾ ಜ ಪ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆಯನ್ನುಪಟಾಕಿ ಹೊಡೆದು ಸಿಹಿ ಹಂಚುವುದರ ಮೂಲಕ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡ ಶಿವಪ್ರಸಾದ್ ಪೆರುವಾಜೆ ಯವರು ಇಸ್ರೋ ಸಂಸ್ಥೆಗೆ ಹಾಗೂ ಬೆಂಬಲಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನ ಮಾತುಗಳನ್ನಾಡಿದರು.ಈ ಸಂಭ್ರಮಾಚರಣೆಯಲ್ಲಿ ಭಾ ಜ ಪ ದ ವಿವಿಧ ಪಧಾಧಿಕಾರಿಗಳು ಮತ್ತು ಕಾರ್ಯಕರ್ತ ಮಿತ್ರರೂ ಉಪಸ್ಥಿತರಿದ್ದರು. ನವೀನ್ ಆಚಾರ್ಯ...

ಕೆ.ವಿ.ಜಿ.ಪಾಲಿಟೆಕ್ನಿಕ್: ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಪುಣ್ಯ ತಿಥಿ ಅಂಗವಾಗಿ ನುಡಿನಮನ

ಅಮರ ಸುಳ್ಯದ ಶಿಲ್ಪಿ, ಶಿಕ್ಷಣ ಕ್ರಾಂತಿಯ ಹರಿಕಾರ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ 11 ನೇ ಪುಣ್ಯ ತಿಥಿಯ ಅಂಗವಾಗಿ ನುಡಿನಮನ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್. ನುಡಿನಮನ ಸಲ್ಲಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹರಿಹರಪಲ್ಲತ್ತಡ್ಕ : ನಾಗರ ಪಂಚಮಿ ಆಚರಣೆ

ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ನಾಗದೇವರಿಗೆ, ಸಿಯಾಳಭಿಷೇಕ,ಹಾಲಾಭಿಷೇಕ ನಾಗತಂಬಿಲ ನಡೆಯಿತು ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಸಹಾಯಕ ಅರ್ಚಕರಾದ ಕೃಷ್ಣ ಕುಮಾರ್ ದೇವರಗದ್ದೆ,ಆಡಳಿತ ಮಂಡಳಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ – ಭಾಗಿಯಾದ ಸಾವಿರಾರು ಭಕ್ತರು

ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ಮದ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.ಅಲ್ಲದೆ...

ಕುಕ್ಕೆ ದೇವಳಕ್ಕೆ ಬ್ಯಾಂಕ್ ಆಪ್ ಬರೋಡಾದಿಂದ ಕಂಪ್ಯೂಟರ್ ಕೊಡುಗೆ

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾಗರಪಂಚಮಿಯ ಶುಭ ದಿನ ಬ್ಯಾಂಕ್ ಆಫ್ ಬರೋಡಾದಿಂದ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಶ್ರೀಮತಿ ಗಾಯತ್ರಿ.ಆರ್ಅವರು ಶ್ರೀ ದೇವಳಕ್ಕೆ ಸುಮಾರು ೧ ಲಕ್ಷದ ೨೫ ಸಾವಿರ ಮೌಲ್ಯದ ೫ ಕಂಪ್ಯೂಟರ್‌ಗಳನ್ನು ಮಂಜೂರಾತಿಗೊಳಿಸಿದ್ದರು. ಆ.21...

ಅಂಬೆಕಲ್ಲು : ನಾಗರ ಪಂಚಮಿ ಆಚರಣೆ

ನಾಗರ ಪಂಚಮಿಯ ಅಂಗವಾಗಿ ಎಲಿಮಲೆ ಅಂಬೆಕಲ್ಲು ತರವಾಡು ಮನೆಯಲ್ಲಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲು ಎರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಸುಳ್ಯದಲ್ಲಿ ಇಂದು ಲೋಕಾಯುಕ್ತ ಇಲಾಖೆ ಮಿಂಚಿನ ದಾಳಿ ನಡೆಸಿ ಲಂಚ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿಯನ್ನು ಖೆಡ್ಡಕ್ಕೆ ಬೀಳಿಸಿದ್ದು, ಇದೀಗ ನ್ಯಾಯಮೂರ್ತಿ ಸೌಮ್ಯ ಜೆ ಎಮ್ ಎಫ್ ಸಿ 3ನೇ ಬೆಂಚು ಇವರ ಮುಂದೆ ಹಾಜರುಪಡಿಸಿದ್ದು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಅ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ್ದಾರೆ ಎಂದು...

ಸರಕಾರಿ ಪ್ರೌಢ ಶಾಲೆ ಎಣ್ಮೂರು: ತಾಲೂಕು ಮಟ್ಟದ ಪಿ.ಎಂ.ಪೋಷಣ್ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ – ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

"ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು" ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ತಾಲೂಕು ಪಂಚಾಯತ್ ಸುಳ್ಯ, ಶಾಲಾ ಶಿಕ್ಷಣ ಇಲಾಖೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ...
Loading posts...

All posts loaded

No more posts

error: Content is protected !!