ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ

ಸುಳ್ಯ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಶನಿವಾರ ನಡೆಯಿತು.ಸ್ಪರ್ಧೆಗಳಿಗೆ ಶಾಲಾ ಸಂಚಾಲಕ ಜಾಕೆ ಸದಾನಂದ ಚಾಲನೆ ನೀಡಿದರು.ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಎ ವಹಿಸಿದರು.ಅತಿಥಿಗಳಾಗಿ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಆಶಾ ನಾಯಕ್ ಭಾಗವಹಿಸಿ ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ಎಸ್. ಡಿ.ಎಂ.ಸಿ...

ಹರಿಹರ ಪಲ್ಲತ್ತಡ್ಕ : ಮರ ಬಿದ್ದು ಮನೆಗೆ ಹಾನಿ ; ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು

ಹರಿಹರ ಪಲ್ಲತ್ತಡ್ಕ ಗ್ರಾಮದ ಕಾಲನಿ ನಿವಾಸಿ ರವಿ ಎಂಬುವವರ ಮನೆಯ ಮೇಲೆ ಕಳೆದ ರಾತ್ರಿ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದ್ದು, ಬೆಳಿಗ್ಗೆ 8:45ರ ಸುಮಾರಿಗೆ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಜೊತೆಗಿದ್ದರು.
Ad Widget

ನಾಳೆ (ಆ.22) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಆ.22 ಗುರುವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಮತ್ತು ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ...

ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ – ಪ್ರತಿಭಾ ಪುರಸ್ಕಾರ

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.15 ರಂದು ನಡೆಯಿತು. ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ಮತ್ತು ಶ್ರೀಮತಿ ದಿವಂಗತ ಶಿವಮ್ಮನವರು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ದತ್ತಿ ನಿಧಿ ರೂಪಾಯಿ 240, ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ತಮ್ಮ ಮಾತಾಪಿತರಾದ ಪಲ್ಲತಡ್ಕ...

ಮೊಗ್ರ: ಭಾರಿ ಮಳೆಗೆ ಮುಳುಗಿದ ತೂಗುಸೇತುವೆ – ಹಾನಿ

ಇಂದು ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ವಿವಿಧ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಸಾರ್ವಜನಿಕರೇ ಖರ್ಚು ಹಾಕಿ ನಿರ್ಮಾಣ ಮಾಡಿದ ತೂಗು ಸೇತುವೆ ಮುಳುಗಡೆ ಯಾಗಿದೆ. ಕಸ ಬಿದಿರು, ಹಾಗೂ ಮರದ ಗೆಲ್ಲುಗಳು ಸಿಲುಕಿ ತೂಗು ಸೇತುವೆಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ.

ಸುಳ್ಯ:ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ ಇಂದು ಸುಳ್ಯದ ನರೇಂದ್ರ ವಿಹಾರದಲ್ಲಿ ಮಾಜಿ ಪ್ರಧಾನಿ, ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ದಿನವನ್ನು ಆಚರಿಸಲಾಯಿತು. ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಹಾಗೂ ಟ್ರಸ್ಟ್ ಕೋಶಾಧಿಕಾರಿಗಳಾದ ಎ ವಿ ತೀರ್ಥರಾಮ, ಶಾಸಕಿ ಹಾಗೂ ಟ್ರಸ್ಟಿಗಳಾದ ಕು. ಭಾಗೀರಥಿ ಮುರುಳ್ಯ ಮತ್ತು...

ಹಳೆಗೇಟು : ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯದ ಹಳೆಗೇಟಿನ ಸಾಂಸ್ಕೃತಿಕ ಸಂಘದ ಇದರ ವತಿಯಿಂದ ನಡೆಯುವ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಸಂಜೆ ಹಳೆಗೇಟು ವಸಂತ ಕಟ್ಟೆಯ ಬಳಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಶ್ರೀನಿವಾಸ್ ರಾವ್, ಕಾರ್ಯದರ್ಶಿ ಕೆ.ಶಿವನಾಥ್ ರಾವ್. ಉಪಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಯು. ಚಿತ್ತರಂಜನ್, ಸಚಿನ್ ರಾವ್, ಯತಿನ್ ರಾವ್, ಧನಂಜಯ್...

ಕೊಲ್ಲಮೊಗ್ರದಲ್ಲಿ ಭಾರಿ ಮಳೆ – ಸೇತುವೆ ಮುಳುಗಡೆ – ಕಲ್ಮಕಾರು ಸಂಪರ್ಕ ಕಡಿತ.

ಕೊಲ್ಲಮೊಗ್ರ ಭಾಗದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಮುಳುಗಡೆಯಾಗಿದ್ದು ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಶ್ವಥಮರದ ಸಮೀಪ ತಲುಪಿದ್ದು ಕಲ್ಮಕಾರು ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ಸುಳ್ಯ ತಾ.ಪಂ.ನಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ – ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.

ಸುಳ್ಯ: ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ನೇತೃತ್ವದಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಪ್ರಗತಿ ಪರಿಶೀಲನಾ ಸಭೆ ಆ.16ರಂದು ನಡೆಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ದಿನಗೂಲಿ ಸಂಖ್ಯೆ ಕಡಿಮೆ ಇರುವ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶ್ನಿಸಿ ಯಾವ ಕಾರಣಕ್ಕೆ...

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ವಿಶಿಷ್ಟ ಶ್ರೇಣಿಯ ಸಾಧಕರಿಗೆ ಪ್ರತಿಭಾ ಪುರಸ್ಕಾರದ ಗೌರವಾರ್ಪಣೆ

ಅರಂತೋಡು: 78ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮತ್ತುಎಸ್ ಎಸ್ ಎಲ್ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಗೌರವಾರ್ಪಣೆ ನಡೆಸಲಾಯಿತು.2023-24 ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಮತ್ತು ಗಣಕ ವಿಜ್ಞಾನ ವಿಭಾಗ 100 ಶೇಕಡಾ ಫಲಿತಾಂಶ ದಾಖಲಿಸಿದೆ. ವಿಜ್ಞಾನ...
Loading posts...

All posts loaded

No more posts

error: Content is protected !!