ಕೆಲಸದ ಒತ್ತಡಗಳ ಮಧ್ಯೆ ಕೆಸರುಗದ್ದೆಯಲ್ಲಿ ಕ್ರೀಡೆಯ ಮೂಲಕ ಸಂಭ್ರಮಿಸಿದ ಸುಳ್ಯ ಪೋಲೀಸರು

ಸುಳ್ಯ:ಉಪನಿರೀಕ್ಷಕ ಈರಯ್ಯ ದೂಂತೂರು ಸೇರಿದಂತೆ ಠಾಣಾ ಸಿಬ್ಬಂದಿಗಳು ಅಜ್ಜಾವರ ಗ್ರಾಮದ ಮೇನಾಲದ ಕೆಸರುಗದ್ದೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿವಿಧ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು. ಕೆಲಸದ ಒತ್ತಡಗಳ ನಡುವೆ ಪೊಲೀಸ್ ಅಧಿಕಾರಿಗಳಾದ ಈರಯ್ಯ ದೂಂತೂರು ನೇತೃತ್ವದಲ್ಲಿ ಸಿಬ್ಬಂದಿಗಳು ಪರಸ್ಪರ ಒಬ್ಬರನ್ನೊಬ್ಬರು ಕೆಸರಿಗೆ ತಳ್ಳಿ ಹಾಕಿ ಜೈಕಾರಗಳನ್ನು ಹಾಕಿಕೊಂಡು ಸಂತೋಷಪಟ್ಟರು.

ಸುಳ್ಯ ಎನ್ನೆoಪಿಯುಸಿಯಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಕ್ರೀಡೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಸಾಧನೆಗೈಯುವಂತಾಗಲಿ ಅವರು ಶ್ರೀ ಪಿ ಎಸ್ ಗಂಗಾಧರ್ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಗೌಡ ಸಮುದಾಯ ಭವನ ಕೊಡಿಯಾಲಬೈಲ್  ಸುಳ್ಯ ಇಲ್ಲಿ ನಡೆದ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ...
Ad Widget

ಕಾಂತಮಂಗಲ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆಹಚ್ಚಿದ ಉಪ್ಪಿನಂಗಡಿ ಮುಳುಗು ತಜ್ಞರು.

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ನಿನ್ನೆ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಡ್ಕ ನಿವಾಸಿ ಸುಮಾರು 23 ವರ್ಷದ ಸಿನಾನ್ ನಿನ್ನೆ ಹೊಳೆಗೆ ಹಾರಿದ್ದರು. ಇಂದು ಬೆಳಗ್ಗೆ ಉಪ್ಪಿನಂಗಡಿ ಮುಳುಗು ತಜ್ಞರ ತಂಡ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಚ್ಚು ಪ್ರಗತಿ ಸಹಿತ ಮತ್ತಿತರರ ಸಹಾಯದಿಂದ ಮೃತದೇಹವನ್ನು ಪತ್ತೆ ಮಾಡಿರುವುದಾಗಿ ತಿಳಿದುಬಂದಿದೆ.

ಮಾಜಿ ಗ್ರಾ.ಪಂ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲರ ತಂದೆ ಕುಂಜಾಡಿ ವೆಂಕಪ್ಪ ರೈ ನಿಧನ

ಅಜ್ಜಾವರ ಗ್ರಾಮದ ಮೇನಾಲ ನಿವಾಸಿ ಕುಂಜಾಡಿ ವೆಂಕಪ್ಪ ರೈಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅನುಪಮಾ ರೈ, ಪುತ್ರರಾದ ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಸಾದ್ ರೈ ಮೇನಾಲ, ಪ್ರಮೋದ್‌ಕುಮಾರ್‌ ರೈ ಮೇನಾಲ, ಪುತ್ರಿಯರಾದ ಪ್ರವೀಣ ರೈ, ಪ್ರತೀಭಾ ರೈ ಹಾಗೂ ಕುಟುಂಬಸ್ಥರನ್ನು ಅಪಾರ ಬಂಧುಮಿತ್ರರನ್ನು...

ಸುಬ್ರಹ್ಮಣ್ಯದಲ್ಲಿ ನಡೆದ ಅಟ್ಟಿಮಡಿಕೆ ಸ್ಪರ್ಧೆಯಲ್ಲಿ ರೆಂಜಾಳ ಶಾಸ್ತಾವು ಯುವಕ ಮಂಡಲಕ್ಕೆ ತೃತೀಯ ಬಹುಮಾನ

ಸುಬ್ರಹ್ಮಣ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ಅಟ್ಟಿಮಡಿಕೆ ಸ್ಪರ್ಧೆಯಲ್ಲಿ ರೆಂಜಾಳ ಶಾಸ್ತಾವು ಯುವಕ ಮಂಡಲ ತೃತೀಯ ಬಹುಮಾನ ಪಡೆದುಕೊಂಡಿದೆ.

ಅರಮನೆ ನಗರದಲ್ಲಿ ಯಶಸ್ವಿ ಕಂಡ ಸಜ್ಜನ ವಿಶೇಷ ತರಬೇತಿ ಕಾರ್ಯಗಾರ

ಉದ್ಯೋಗ, ಶೈಕ್ಷಣಿಕ, ಸಾಂಸ್ಕೃತಿಕ ,ಕನ್ನಡ ನಾಡು ನುಡಿ, ಜಲ-ನೆಲದ ಹಾಗೂ ವಿವಿಧ ರಂಗಗಳಲ್ಲಿ ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಕಾರ್ಯಾಚರಣೆ ನಡೆಸುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರಾಜ್ಯಾದ್ಯಂತ ನಡೆಸಿಕೊಂಡು ಬಂದಿದೆ. ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ವೇದಿಕೆ ಸಜ್ಜುಗೊಳಿಸಿ ಯಶಸ್ವಿಯಾಗಿ ಪೂರೈಸಿದೆ. ಈ ಒಂದು ಕಾರ್ಯಕ್ರಮವನ್ನು ಆಗಸ್ಟ್‌ 24...

ಸುಳ್ಯ ಮೊಸರು ಕುಡಿಕೆ ಉತ್ಸವದ ದಿಕ್ಸೂಚಿ ಭಾಷಣಕಾರ ಚಿಂತಕ , ಅಂಕಣಕಾರ , ಲೇಖಕ ಮಾಜಿ ಸಂಸದ ಪ್ರತಾಪ ಸಿಂಹರಿಗೆ ಆಹ್ವಾನ

ಸುಳ್ಯದಲ್ಲಿ ನಡೆಯಲಿರುವ ಮೊಸರು ಕುಡಿಕೆ ಉತ್ಸವದ ದಿಕ್ಸೂಚಿ ಭಾಷಣಕಾರ ಮಾಜಿ ಸಂಸದ ಅಂಕಣಕಾರ ಲೇಖಕ ಪ್ರತಾಪ ಸಿಂಹ ರವರನ್ನು ಭೇಟಿಯಾಗಿ ಉತ್ಸವದ ಆಮಂತ್ರಣ ಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವದ ಕಾರ್ಯದರ್ಶಿ ಯಾದ ಪ್ರಕಾಶ್ ಯಾದವ್ , ವಿಹೆಚ್ ಪಿ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗದಳ ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಬಜರಂಗದಳ ಜಿಲ್ಲಾ...

ಸುಳ್ಯದ ಕುವರಿ ಪೂಜಾ ಬೋರ್ಕರ್ ರ ಪೆನ್ಸಿಲ್ ಆರ್ಟ್ ಗೆ ಜೆಸಿಐ ರಾಷ್ಟ್ರೀಯ ಅಧ್ಯಕ್ಷರಿಂದ ಮನ್ನಣೆ.

ಜೇಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ನಡೆದ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಧ್ಯಕ್ಷರ ಭಾವಚಿತ್ರದ ಪೆನ್ಸಿಲ್ ಆರ್ಟ್ ಬಿಡಿಸುವ ಸ್ಪರ್ಧೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದಿಂದಾ ಸ್ಪರ್ಧಿಸಿದ ಸುಳ್ಯ ಶಾಂತಿನಗರ ಬೆಟ್ಟಂಪಾಡಿ ನಿವಾಸಿ ಪೂಜಾ ಬೋರ್ಕಾರ್ ರಚಿಸಿದ ಪೆನ್ಸಿಲ್ ಆರ್ಟ್ ಗೆ ಪ್ರಥಮ ಬಹುಮಾನ ಲಭಿಸಿದೆ. ಪ್ರಶಸ್ತಿ...

ಮರಾಟಿ ಸೇವಾ ಸಂಘ (ರಿ) ಸುಳ್ಯ ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಆಯ್ಕೆ.

ಸುಳ್ಯ: ಹಲವಾರು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯ ಬಳಿಕ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡು ಮರಾಟಿ ಸೇವಾ ಸಂಘದಲ್ಲಿ ಸಮಾಜದಲ್ಲಿ ಅನೋನ್ಯ ಜವಬ್ದಾರಿಗಳನ್ನು ನಿರ್ವಹಿಸಿ ಇದೀಗ ಮರಾಟಿ ಸೇವಾ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಆಯ್ಕೆಯಾದರು.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಳಲಂಬೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಗುತ್ತಿಗಾರು, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಆಗಸ್ಟ್ 22ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇಲ್ಲಿ ನಡೆದಿದ್ದು ಸ.ಹಿ.ಪ್ರಾ.ಶಾಲೆ ವಳಲಂಬೆ ಇಲ್ಲಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ದ್ವಿತೀಯ...
Loading posts...

All posts loaded

No more posts

error: Content is protected !!