ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಅಂತ್ಯ – ಕರ್ತವ್ಯಕ್ಕೆ ಹಾಜರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟ ಮುಷ್ಕರ ಕೈಗೊಂಡಿದ್ದ ಗ್ರಾಮ ಆಡಳಿತಾಧಿಕಾರಿಗಳ ಸಂಘದೊಂದಿಗೆ ಸರಕಾರ ನಡೆಸಿದ ಮಾತುಕತೆ ಫಲಪ್ರದವಾಗಿರುವುದರಿಂದ ಮುಷ್ಕರ ಹಿಂಪಡೆದು ಅ.4ರಿಂದ ಕರ್ತವ್ಯಕ್ಕೆ ಗ್ರಾಮ ಆಡಳಿತಾಧಿಕಾರಿಗಳು ಹಾಜರಾಗಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಿಂದ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದರು. ಆರಂಭದಲ್ಲಿ ಸೆ.30ರಂದು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರು ಗ್ರಾಮ ಆಡಳಿತಾಧಿಕಾರಿಗಳ...

ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ- ಸುಳ್ಯ ಪ್ರಖಂಡ ಇದರ ನೇತೃತ್ವದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನ ಕಾರ್ಯಕ್ರಮವು ಅಜ್ಜಾವರದ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ನಡೆಯಿತು. ಭಜನಾ ತರಬೇತಿ ಶಿಬಿರವು 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಭಜನಾ ತರಬೇತಿ ಹಾಗೂ ಸಂಸ್ಕಾರ ಶಿಬಿರವು ಶ್ರೀ ಮಹಿಷಮರ್ದಿನಿ ದೇವಸ್ಥಾನ...
Ad Widget

“ತೆರೆದ ಮನೆ” ಕಾರ್ಯಕ್ರಮದಡಿಯಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭೇಟಿ.

“ತೆರೆದ ಮನೆ” ಕಾರ್ಯಕ್ರಮದಡಿಯಲ್ಲಿ, ಅಜ್ಜಾವರ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಳ್ಯ ಅಟ್ಲೂರು ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಂಡರು. ಸುಳ್ಯ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಗಳು ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಠಾಣಾ ಪರಿಚಯ ಹಾಗೂ ದೈನಂದಿನ ಕರ್ತವ್ಯಗಳ ಬಗ್ಗೆ ಮಾಹಿತಿ ಠಾಣಾ ಉಪನಿರೀಕ್ಷಕರಾದ ಸಂತೋಷ್ ಹಾಗೂ...

ಸುಳ್ಯ : ಬಿಜೆಪಿ ಯುವಮೋರ್ಚಾ ನೂತನ ಪದಾಧಿಕಾರಿಗಳ ನೇಮಕ

ಸುಳ್ಯ ಬಿಜೆಪಿಯ ಯುವಮೋರ್ಚಾ ಪದಾಧಿಕಾರಿಗಳನ್ನು ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ನಿಯುಕ್ತಿಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗಳಾದ ಪ್ರದೀಪ್ ಕೊಲ್ಲರಮೂಲೆ, ಆರ್ ದಿವಾಕರ ಕುಂಬಾರ ಮತ್ತಿತರರು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳು: ಉಪಾಧ್ಯಕ್ಷರುಗಳಾಗಿ ಸುನೀಲ್ ಕೇರ್ಪಳ, ದೀಲಿಪ್ ಉಪ್ಪಳಿಕೆ, ದುರ್ಗೇಶ್ ಪಾರೆಪ್ಪಾಡಿ, ಲತೀಶ್ ಗುಂಡ್ಯ, ಕಾರ್ಯದರ್ಶಿಗಳಾಗಿ ಮುನೀಷ್ ಪದೇಲ, ರಾಜೇಶ್ ಕಿರಿಭಾಗ, ನಿಖಿಲ್ ಮಡ್ತಿಲ, ನಿಕೇಶ್ ಉಬರಡ್ಕ,...

ತಾಲೂಕು ಯುವ ಮೋರ್ಚಾ ಅಧ್ಯಕ್ಷ ರು ಪದಾಧಿಕಾರಿಗಳು ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಬಿಜೆಪಿ ಕಾರ್ಯಕರ್ತರು ಮನೆಗೆ ಭೇಟಿ

ಸೇನೆಯ ಅಗ್ನಿಪತ್ ಗೆ ಆಯ್ಕೆಯಾದ ಐವರ್ನಾಡು ಗ್ರಾಮದ ಚಲ್ಲತ್ತಡಿಯ ಗಂಗಾಧರ ಮತ್ತು ಕುಸುಮಾವತಿ ದಂಪತಿಗಳ ಪುತ್ರ ಮೋಕ್ಷಿತ್ ರವರ ಮನೆಗೆ ಇಂದು ತಾಲೂಕು ಯುವ ಮೋರ್ಚಾ ಅಧ್ಯಕ್ಷ ರು ಪದಾಧಿಕಾರಿಗಳು ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರು ಮತ್ತು ಬಿಜೆಪಿ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಗೌರವಿಸಲಾಯಿತು ಮತ್ತು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು...

ತಾಲೂಕು ಆಸ್ಪತ್ರೆಯ ನಿವೃತ್ತ ಅಡುಗೆಭಟ್ಟ ವೆಂಕಟ್ರಮಣ ಬೇರ್ಪಡ್ಕರಿಗೆ ಪಿತೃ ವಿಯೋಗ

ಸುಳ್ಯ ಉಬರಡ್ಕ ಗ್ರಾಮದ ಅಮೈ ರಾಮ 91 ವರ್ಷರವರು ಅ.1ರಂದು ನಿಧನರಾದರು. ಮೃತರ ಪತ್ನಿ ಪದ್ಮಾವತಿ, ಪುತ್ರ ಸರಕಾರಿ ಆಸ್ಪತ್ರೆಯ ನಿವೃತ್ತ ಅಡುಗೆ ಭಟ್ಟರಾದ ವೆಂಕ್ರಮಣ ಬೇರ್ಪಡ್ಕ, ರಾಧಾಕೃಷ್ಣ ಬೇರ್ಪಡ್ಕ, ಕಮಲ ಸೊಸೆಯಂದಿರಾದ ಲಕ್ಷ್ಮೀ, ಅನಿತಾ ಮೊಮ್ಮಕ್ಕಳು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹರಿಹರ ಪಳ್ಳತ್ತಡ್ಕ ಸ.ಹಿ.ಪ್ರಾ ಶಾಲೆಗೆ ಹರಿಪ್ರಸಾದ್ ವಾಡ್ಯಪ್ಪನಮನೆ ರವರಿಂದ ಇನ್ವರ್ಟರ್ ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಳ್ಳತ್ತಡ್ಕ ಇಲ್ಲಿಗೆ ಶಾಲೆಯ ಹಳೆ ವಿದ್ಯಾರ್ಥಿಯಾದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಪ್ರಸಾದ್ ವಾಡ್ಯಪ್ಪನಮನೆ ರವರು ಇನ್ವರ್ಟರ್ ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ದಾನಿಗಳಾದ ಹರಿಪ್ರಸಾದ್ ವಾಡ್ಯಪ್ಪನಮನೆ, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಸುಳ್ಯ : ಗಾಂಧಿ ಜಯಂತಿ ಅಂಗವಾಗಿ ಅಮರ ಸಂಘಟನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ದ್ವೇಯದಡಿಯಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿ ರಿ, ನಗರ ಪಂಚಾಯ‌ರ್ ಸುಳ್ಯ, ತಾಲ್ಲೂಕು ಕಛೇರಿ, ತಾಲೂಕು ಪಂಚಾಯತ್ ಸುಳ್ಯ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ,ಅರಕ್ಷಕ ಠಾಣೆ ಸುಳ್ಯ, ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಸುಳ್ಯ, ಸಾಮಾಜಿಕ ಅರಣ್ಯ ವಲಯ ಸುಳ್ಯ,ವಕೀಲರ ಸಂಘ ಸುಳ್ಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ...

ವಳಲಂಬೆ: ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಗಾಂಧಿ ಜಯಂತಿ ಪ್ರಯುಕ್ತ ಸ್ತ್ರೀಶಕ್ತಿ ಸಂಘ ವಳಲಂಬೆ, ಸಂಜೀವಿನಿ ಸಂಘ ವಳಲಂಬೆ, ಅಂಗನವಾಡಿ ಪೋಷಕ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘದವರು ಜಂಟಿಯಾಗಿ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಚ್ಛತಾ ಕಾಯಕ್ರಮಕ್ಕೆ ಉಪಾಹಾರವನ್ನು ಚಂದ್ರಾವತಿ ಅಂಗನವಾಡಿ ಕಾಯಕರ್ತೆ, ಜೀವನ್ ದಂಬೆಕೋಡಿ, ಮತ್ತು ಚೈತನ್ಯ ವಳಲಂಬೆ ಇವರು ನೀಡಿ ಸಹಕರಿಸಿದರು.

ಉಬರಡ್ಕ : ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ವತಿಯಿಂದ ಉಬರಡ್ಕ ಬಸ್ ತಂಗುದಾಣ ಸ್ವಚ್ಛತೆ ಮತ್ತು ಉಬರಡ್ಕ ಪಂಚಾಯತ್ ನವರೊಂದಿಗೆ ಸೇರಿಕೊಂಡು ಉಬರಡ್ಕ ಪೇಟೆಯಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಗಾಂಧಿಜಯಂತಿ ಪ್ರಯುಕ್ತ ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!