ಶ್ರೀರಾಮ ಪೇಟೆಯಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಪರಸ್ಪರ ಡಿಕ್ಕಿ.

ಶ್ರೀರಾಮ ಪೇಟೆಯಲ್ಲಿ ದ್ವಿಚಕ್ರ ವಾಹನಗಳ ಮಧ್ಯೆ ಸ್ಕಿಡ್ ಆಗಿ ಪರಸ್ಪರ ಡಿಕ್ಕಿಯಾದ ಘಟನೆ ಇದೀಗ ವರದಿಯಾಗಿದೆ. ಶ್ರೀ ರಾಮ ಭಜನಾ ಮಂದಿರದ ಬಳಿಯಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿಯಾಗಿ ಬರುತ್ತಿದ್ದಾಗ ಮಳೆಯ ಪರಿಣಾಮ ಸ್ಕಿಡ್ ಆಗಿ ಡಿಕ್ಕಿಯಾಗಿದ್ದು ಯಾವುದೇ ಗಾಯಗಳಿಲ್ಲದೇ ದ್ವಿಚಕ್ರ ವಾಹನ ಸವಾರರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸರಕಾರದಿಂದ ಅಕ್ರಮ ಪಡಿತರ ಚೀಟಿ ರದ್ದತಿಗೆ ಕ್ರಮ – ಸುಳ್ಯ ತಾಲೂಕಿನಲ್ಲಿ 2900ರಕ್ಕೂ ಅಧಿಕ ಪಡಿತರ ಚೀಟಿದಾರರ ಮಾಹಿತಿ ಕೇಳಿದ ಸರಕಾರ.

ಸುಳ್ಯ ತಾಲ್ಲೂಕಿನಲ್ಲಿ 42 ಬಿಪಿಎಲ್ ಪಡಿತರ ಚೀಟಿ ರದ್ದು , ಗ್ರಾಮವಾರು ಮಾಹಿತಿ ಇಲ್ಲಿದೆ. ವರದಿ: ಮಿಥುನ್ ಕರ್ಲಪ್ಪಾಡಿ ಸುಳ್ಯ: ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿ ಬೆನ್ನಲ್ಲೇ ನಕಲಿ ಪಡಿತರ ಚೀಟಿದಾರರ ಪತ್ತೆಗೆ ಸರಕಾರವು ಕ್ರಮ ಕೈಗೊಂಡಿದ್ದು ರಾಜ್ಯದಲ್ಲಿ ಲಕ್ಷಾಂತರ ನಕಲಿ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲಾಗಿದೆ. ಸುಳ್ಯ ತಾಲೂಕಿನಲ್ಲಿ 16 ಸಾವಿರಕ್ಕಿಂತ ಹೆಚ್ಚಿನ ಬಿಪಿಎಲ್...
Ad Widget

ಅ 10 : ಡಾ| ಪುರುಷೋತ್ತಮ ಬಿಳಿಮಲೆಯವರ ಹುಡುಕಾಟ ಸಂಶೋಧನ ಗ್ರಂಥ ಮುಖ್ಯ ಮಂತ್ರಿಗಳಿಂದ ಬಿಡುಗಡೆ

ಅ 10 :ಡಾIಪುರುಷೋತ್ತಮ ಬಿಳಿಮಲೆಯವರ ಹುಡುಕಾಟ ಸಂಶೋಧನ ಗ್ರಂಥ ಮುಖ್ಯ ಮಂತ್ರಿಗಳಿಂದ ಬಿಡುಗಡೆ, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಹಾಗೂ ಖ್ಯಾತ ಸಾಹಿತಿ ವಿಮರ್ಶಕ ಡಾI ಪುರುಷೋತ್ತಮ ಬಿಳಿಮಲೆ ವಿರಚಿತಾ "ಹುಡುಕಾಟ " ಸಂಶೋಧನ ಗ್ರಂಥವನ್ನು ಅ 10ರಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ...

ಸುಳ್ಯ : ನಗರದ ವಾಹನ ಪಾರ್ಕಿಂಗ್ ಸಮಸ್ಯೆ ಪರಿಹಾರದ ಜತೆಗೆ ದ್ವಿಚಕ್ರ ವಾಹನ ಸವಾರರ ಜೀವ ರಕ್ಷಕರಾದ ಸಂತೋಷ್

ಸುಳ್ಯ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಿರುವುಗಳು ಹೆಚ್ಚಾಗಿ ಮತ್ತು ದ್ವಿಚಕ್ರ ವಾಹನ ಸವಾರರು ಅತೀ ವೇಗದ ಚಲಾವಣೆ ಮತ್ತು ಜೀವ ರಕ್ಷಕ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಹಲವಾರು ಜನ ಇತ್ತೀಚೆಗೆ ಜೀವ ಕಳೆದುಕೊಂಡಿದ್ದರು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಹಾಗೂ ನಗರದ ಪಾರ್ಕಿಂಗ್ ಸಮಸ್ಯೆ ಸರಿಪಡಿಸುವ ಸಲುವಾಗಿ ಪೋಲೀಸರು ನೋಟೀಸ್ ನೀಡಿ, ದಂಡ ಪಾವತಿಸುಂತೆ ಕ್ರಮಕೈಗೊಂಡ...

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಕಚೇರಿ ಉದ್ಘಾಟನೆ

ಸಂಘದ ಲೋಗೋ ಬಿಡುಗಡೆ,ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಅಕ್ಟೋಬರ್ 6 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ಇರುವ ವೆನಿಸ್ಸಿಯಾ ಬಿಲ್ಡಿಂಗ್ ನಲ್ಲಿ ನಡೆಯಿತು. ತೂಗು ಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ...

ಸುಳ್ಯ ಪೋಲಿಸರ ಕಣ್ಣು ತಪ್ಪಿಸಿ ಪರಾರಿಯಾದವನ ಪತ್ತೆಗೆ ಬಲೆ ಬೀಸಿದ ಫೋಲೀಸರು – ಭಾವಚಿತ್ರ ಬಿಡುಗಡೆ – ಸಾರ್ವಜನಿಕರಿಗೆ ಕಂಡಲ್ಲಿ ಪೋಲಿಸರಿಗೆ ತಿಳಿಸಲು ಸೂಚನೆ.

ಸುಳ್ಯ : ಪೋಲೀಸರ ಕಣ್ಣು ತಪ್ಪಿಸಿ ಪರಾರಿಯಾದ ಆರೋಪಿ ಪತ್ತೆಗೆ ಪೋಲೀಸರು ಕಾರ್ಯಚರಣೆ ಆರಂಭಿಸಿದ್ದು, ಇದೀಗ ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಗೊಳಿಸಿದ್ದಾರೆ. ಫೋಟೋದಲ್ಲಿ ಕಾಣಿಸಿದ ವ್ಯಕ್ತಿಯನ್ನು ಕಂಡಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ ಪ್ರಕರಣವೊಂದರಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದು ಈತನು ಸುಳ್ಯ ದ ಸುತ್ತ ಮುತ್ತಲಿದ್ದು ಸಾರ್ವಜನಿಕರಿಗೆ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ...

ಅನ್ಯ ಕೋಮಿನ ಹಲ್ಲೆ ಪ್ರಕರಣದಲ್ಲಿ ಬಂಧಿತರ ಬಿಡುಗಡೆ ,ಶಾಲು ಹಾಕಿ ಸ್ವಾಗತ.

ಗುಂಡ್ಯ ಮಾರ್ಗವಾಗಿ ಬರುತ್ತಿದ್ದ ಬಸ್ಸಿನಲ್ಲಿ ಸುಳ್ಯದ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಜೊತೆಗೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ವರ್ಷಿತ್ ಚೊಕ್ಕಾಡಿ ಮತ್ತು ಮಿಥುನ್ ಎನ್ ಪಿ , ಶುಶ್ಮಿತ್ ಬೊಳ್ಳುರು ಇವರಿಗೆ ದಿನಾಂಕ 04-10-2024ರಂದು ಜಿಲ್ಲಾ ಸೆಸನ್ಸ್ ನ್ಯಾಯಾಲಯ ಪುತ್ತೂರಿನಲ್ಲಿ ಜಾಮಿನು ನೀಡಿದ್ದು ಇಂದು ನ್ಯಾಯಾಲಯದ ಆದೇಶದ ಮೇರೆಗೆ ಜಾಮೀನು ಪ್ರಕ್ರಿಯೆ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಯನ ಪ್ರವಾಸ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ವಾಣಿಜ್ಯ ವಿಭಾಗದಿಂದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಸಕಲೇಶಪುರದ ಕಾಡುಮನೆ ಟೀ ಎಸ್ಟೇಟ್ಗೆ ಡಾ.ವಿನ್ಯಾಸ್ ಮತ್ತು ಕೃತಿಕಾ ಇವರ ನೇತೃತ್ವದಲ್ಲಿ ಅಧ್ಯಯನ ಪ್ರವಾಸವನ್ನು ಕೈಗೊಂಡರು. ಒಟ್ಟು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರಂಬೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ ಎಸ್ ಎಸ್ ಪೂರಕ -ಕೆ.ಆರ್.ಗಂಗಾಧರ್

ಅರಂಬೂರು: ಕರ್ನಾಟಕ ಸರಕಾರ , ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿಪೂರ್ವ)ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 16 ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ- ಅರಂಬೂರಿನಲ್ಲಿ ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತ ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ್...

ಕುಕ್ಕೆಯಲ್ಲಿ ನಟಿ ರಕ್ಷಿತಾ ಪ್ರೇಮ್ ರವರಿಂದ ಹುಲಿವೇಷ ವೀಕ್ಷಣೆ

ಸುಬ್ರಹ್ಮಣ್ಯ ಅ.4: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ತದನಂತರ ಕಾರಲ್ಲಿ ಹೊರಡುವ ಸಮಯದಲ್ಲಿ ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಹುಲಿ ವೇಷವನ್ನು ಕಂಡು ಕಾರಿನಿಂದ ಇಳಿದರು.ತಕ್ಷಣ...
Loading posts...

All posts loaded

No more posts

error: Content is protected !!