- Friday
- July 31st, 2026
ಬೆಳ್ಳಾರೆಯ ಮಾಸ್ತಿಕಟ್ಟೆ ತಡಗಜೆ ಅಂಗನವಾಡಿ ಕೇಂದ್ರದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವ ನಡೆಯಿತು. ಪುಟಾಣಿಗಳು ದೀಪ ಬೆಳಗಿಸಿದರು. ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಉಪಸ್ಥಿತರಿದ್ದು, ಶುಭಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಸಹಾಯಕಿ ಗುಲಾಬಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ನಿರಂತರ ಚಟುವಟಿಕೆಗಳಿಂದ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಮಂಡೆಕೋಲು ಗ್ರಾಮಪಂಚಾಯತ್ ಗ್ರಂಥಾಲಯದಲ್ಲಿ 10 ದಿನಗಳ ಬೇಸಿಗೆ ಶಿಬಿರ “ಗ್ರಂಥಾಲಯದ ಅಂಗಳದಲ್ಲಿ ಮಕ್ಕಳ ಜ್ಞಾನಹಬ್ಬ” ಆರಂಭಗೊಂಡಿದೆ. ಶಿಬಿರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಾಜಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮಂಡಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಚಾಯತ್...
ದೊಡ್ಡತೋಟ : ಭರವಸೆಗಳ ಮಹಾಪೂರ ಹರಿಸುವ ಆಡಳಿತ ಯಂತ್ರವು ಕಾರ್ಯರೂಪಕ್ಕೆ ಬಂದಾಗ ಜನರ ತಾಳ್ಮೆಯನ್ನು ಹೇಗೆ ಪರೀಕ್ಷಿಸುತ್ತದೆ ಎಂಬುದಕ್ಕೆ ದೊಡ್ಡತೋಟ-ಮರ್ಕಂಜ ಸಂಪರ್ಕಿಸುವ ಪಿಡಬ್ಲ್ಯೂಡಿ ರಸ್ತೆಯೇ ಜ್ವಲಂತ ಸಾಕ್ಷಿ. ಹಲವು ವರ್ಷಗಳ ಕಾಲ ನೆನೆಗುದಿಗೆ ಬಿದ್ದು, ಕೊನೆಗೂ 2026 ರ ಮಾರ್ಚ್‌ನಲ್ಲಿ ಚಾಲನೆ ಪಡೆದಿದ್ದ ಈ ಕಾಮಗಾರಿ ಪೂರ್ಣಗೊಳ್ಳದೇ ಸಾರ್ವಜನಿಕರು ಹಿಡಿಶಾಪ ಹಾಕುವ ಸ್ಥಿತಿಗೆ ತಲುಪಿದೆ. 3.5...
ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷದ 09 ಸಾವಿರದ 080.77 ರೂ ಆದಾಯ ಗಳಿಸಿದೆ. 2025 ಎಪ್ರಿಲ್ 1ರಿಂದ 2026 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ....
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಯೋಜನೆಯಲ್ಲಿ ರೂ.604 ಕೋಟಿಯಲ್ಲಿ ವಿವಿಧ ಕಾಮಗಾರಿಗಳಿಗೆ ನಡೆಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ ನೀಡಿದ್ದಾರೆ.ಮೇ.7 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ದೊರೆತಿರುವುದಾಗಿ ಅವರು ತಿಳಿಸಿದ್ದಾರೆ.ಮಾಸ್ಟರ್ ಪ್ಲಾನ್ ಯೋಜನೆಯಂತೆ 604...
ದಿನಾಂಕ :11 ಮೇ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 11) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 445 ರಿಂದ 475ಹಳೆ...
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಇದೀಗ ಸುಳ್ಯದಲ್ಲಿ ಮರು ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 4ನೇ ದಿನಕ್ಕೆ ಕಾಲಿರಿಸಿದೆ. ಸುಳ್ಯ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ.11 ರಂದು 7 ಗಂಟೆಗೆ ಚಿತ್ರ ಪ್ರದರ್ಶನ ನಡೆಯಲಿದೆ.
ಹೌದು, ಅಮ್ಮ ಎಂಬ ಪದವೇ ಎಷ್ಟು ಸುಂದರ ಅಲ್ವಾ? ಅಮ್ಮ ಎಂದರೆ ಆ ಪದವೇ ಹೇಳಲಾಗದ ಅಧ್ಬುತ , ಅದೇನೋ ವಿಪರೀತ ಶಕ್ತಿ, ಅವಳೆಂದರೆ ಸಹನೆ, ಅವಳೆಂದರೆ ಕರುಣೆ, ಅವಳೆಂದರೆ ಆಗಸದಷ್ಟು ಎತ್ತರ, ಸಾಗರದಷ್ಟು ಆಳ. ಈ ಜಗತ್ತಿನಲ್ಲಿ ಪ್ರೀತಿ ಎನ್ನುವ ಪದಕ್ಕೆ ರೂಪವಿದ್ದರೆ ಅದು ಅಮ್ಮನ ಮುಖವಾಗಿರುತಿತ್ತು. ಮಮತೆ ಎಂಬ ಭಾವನೆಗೆ ಹೃದಯವಿರುತ್ತಿದ್ದರೆ ಅದು ಅಮ್ಮನ...
ಕರ್ನಾಟಕ 7A ಸೈಡ್ ಅಂಡರ್-15 ಫುಟ್ಬಾಲ್ ತಂಡಕ್ಕೆ ಸುಳ್ಯ ಮೂಲದ ಸ್ಕಂದ ಸಿ.ಎಸ್ ಆಯ್ಕೆಯಾಗಿದ್ದಾರೆ. ಅವರು ಮೇ.14ರಿಂದ ಗೋವಾದಲ್ಲಿ ನಡೆಯಲಿರುವ ಸಬ್-ಜ್ಯೂನಿಯರ್ ನ್ಯಾಷನಲ್ ಟೂರ್ನಮೆಂಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸ್ಕಂದ ಸದ್ಯ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಎಣ್ಮೂರಿನ ತೇಜಸ್ವಿನಿ ಕೆ.ಎನ್ ಮತ್ತು ದಂಬೆ ರವಿಶಂಕರ ಶಾಸ್ತ್ರಿಯವರ ಮಗ, ನಿವೃತ್ತ ಅಧ್ಯಾಪಕರಾದ...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೇಮಿರಾಜ ಪಲ್ಲೋಡಿ ಅವರಿಗೆ ಮೇ.09 ರಂದು ದೇಗುಲದ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ನೇಮಿರಾಜ...
Loading posts...
All posts loaded
No more posts
