ಅಜ್ಜಾವರ : ಅಡ್ಪಂಗಾಯ ಕಾಲೊನಿಯಲ್ಲಿ ತಡೆಗೋಡೆ ಕುಸಿತ ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು

ಅಜ್ಜಾವರ ಗ್ರಾಮದ ಅಡ್ಪಂಗಾಯ ಕಾಲೊನಿಯಲ್ಲಿ ಆ.01ರಂದು ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದಿದ್ದು, ಘಟನಾ ಸ್ಥಳಕ್ಕೆ ಆ.02ರಂದು ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ಅರ್.ಐ ಸಿಬ್ಬಂದಿ ನಾರಾಯಣ ಹಾಗೂ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಅಬ್ಬಾಸ್.ಎ.ಬಿ ಉಪಸ್ಥಿತರಿದ್ದರು.

ಬೊಳ್ಳಾಜೆ : ಯಾಧವ ಸಭಾ ಕೇಂದ್ರದ ತಾಲೂಕು ಸಮಿತಿಯ ಸಭೆ

ಯಾದವ ಸಭಾ ಕರ್ನಾಟಕ(ರಿ.) ಕೇಂದ್ರ ಸಮಿತಿ, ಮಂಗಳೂರು ಪ್ರಾದೇಶಿಕ ಸಮಿತಿ ಬೆಟ್ಟ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.02ರಂದು ಗೋಪಾಲಕೃಷ್ಣ ಬೊಳ್ಳಾಜೆಯವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷರಾದ ಕರುಣಾಕರ ಹಾಸ್ಪರೆ, ತಾಲೂಕು ಯುವ...
Ad Widget

ನಾಳೆ(ಆ.03) ದ.ಕ ಜಿಲ್ಲೆಯ ಮಂಗಳೂರು ಹಾಗೂ ಪುತ್ತೂರು ಉಪವಿಭಾಗದ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಹೊರಡಿಸಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ(ಆ.03) ಮಂಗಳೂರು ಉಪವಿಭಾಗದ ತಾಲೂಕುಗಳಾದ ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ, ಉಳ್ಳಾಲದ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ...

ಕುಕ್ಕೆ ಸುಬ್ರಹ್ಮಣ್ಯ : ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಭಕ್ತಸಾಗರ

ಸುಬ್ರಹ್ಮಣ್ಯ ಆಗಸ್ಟ್ 02 : ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಂದು ರವಿವಾರ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದ್ದಾರೆ. ಭಕ್ತರಿಗೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನಕ್ಕಾಗಿ ಸ್ನಾನ...

ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ ; ಕೃಷಿ ಬೆಳೆಗಳಿಗೆ ಹಾನಿ

ಪುತ್ತೂರು : ಪೆರ್ನಾಜೆ ಕೃಷಿ ಪ್ರದೇಶಕ್ಕೆ ಶನಿವಾರ ರಾತ್ರಿ ಕೃಷಿಕರಾದ ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಹತ್ತಕ್ಕೂ ಮಿಕ್ಕಿ ಬಾಳೆ, ಅಡಿಕೆ ಸಸಿ ರಾಘವೇಂದ್ರ ಭಟ್ ಹಾಗೂ ಸುಳ್ಯ ತಾಲೂಕಿನ ಪೆರ್ನಾಜೆ ಕಲ್ಲರ್ಪೆ ಕನಕಮಜಲು ಗ್ರಾಮದ ಹೊನ್ನಪ್ಪ ನಾಯ್ಕ್‌ರ ತೋಟಗಳಿಗೆ ನುಗ್ಗಿದ ಕಾಡಾನೆ ಬಾಳೆ ಗಿಡಗಳನ್ನು ನಾಶಪಡಿಸಿದೆ  ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ...

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಹಿಂಬಾಗ ಗುಡ್ಡ ಜರಿತ – ಮರ ಬಿದ್ದು ಕಾಂಪೌಂಡ್ ಗೆ ಹಾನಿ

ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು(ಆ.02) ಸುರಿದ ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಹಿಂಬಾಗದ ಗುಡ್ಡ ಜರಿದಿದ್ದು, ಜೊತೆಗೆ ಮರವೂ ಉರುಳಿ ಬಿದ್ದಿದ್ದು, ಪರಿಣಾಮವಾಗಿ ದೈವಸ್ಥಾನದ ಕಾಂಪೌಂಡ್ ಹಾನಿಗೀಡಾಗಿದೆ. ಗುಡ್ಡ ಇನ್ನೂ ಜರಿಯಾಗುವ ಸಂಭವವಿದ್ದು, ಗುಡ್ಡದಲ್ಲಿ ಇನ್ನೂ ಅನೇಕ ಮರಗಳು ಅಪಾಯಕಾರಿ ಸನ್ನಿವೇಶದಲ್ಲಿವೆ ಎಂದು...

ಬೆಳ್ಳಾರೆ : ಗಣೇಶೋತ್ಸವದ ಆಮಂತ್ರಣ ಬಿಡುಗಡೆ

ವಿರಾಟ್ ಫ್ರೆಂಡ್ಸ್ (ರಿ)ಬೆಳ್ಳಾರೆ ಇದರ 55ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಉದಯಕುಮಾರ್ ಉಪಾಧ್ಯಾಯ ನೆರವೇರಿಸಿದರು. ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್‌ನ ಅಧ್ಯಕ್ಷ ದಾಮೋದರ್ ತಡಗಜೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಅಧ್ಯಕ್ಷ ವಸಂತ ಗೌಡ ಪಡ್ಪು, ತಪಸ್ವಿ ಫ್ರೆಂಡ್ಸ್ ಬೆಳ್ಳಾರೆ...

ಸುಬ್ರಹ್ಮಣ್ಯ : ಕಸ್ತೂರಿ ರಂಗನ್ ವರದಿಯ ಏಳನೇ ಅಧಿಸೂಚನೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿ ; “ಕಸ್ತೂರಿ ರಂಗನ್ ವರದಿ ವಿರುದ್ಧ ಮತ್ತೆ ಹೋರಾಟಕ್ಕೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಜ್ಜು” : ಕಿಶೋರ್ ಶಿರಾಡಿ

ಕುಕ್ಕೆ ಸುಬ್ರಹ್ಮಣ್ಯ, ಆ.02 : “ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನರಿಗೆ ತೊಂದರೆಯಾಗಬಹುದಾದ ಯೋಜನೆಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿರುವ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಇದೀಗ ಮತ್ತೊಮ್ಮೆ ಕಸ್ತೂರಿ ರಂಗನ್ ವರದಿಯ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನಲ್ಲಿ ಆ.02ರಂದು ನಡೆದ...

ಸಂಪಾಜೆ : ಕಾರು – ಜೀಪು ಅಪಘಾತ – ಜೀಪು ಪಲ್ಟಿ

ಸಂಪಾಜೆ ಮಸೀದಿ ಸಮೀಪ ಜೀಪು ಹಾಗೂ ಕಾರು ಮಧ್ಯೆ ಅಪಘಾತ ನಡೆದು ಜೀಪು ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಜೀಪು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಬ್ಬರಿಗೆ ಗಾಯಗಳಾಗಿದ್ದು, ಎಐಕೆಎಂಸಿಸಿ ಅಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಆಲೆಟ್ಟಿ : ಭಾರೀ ಮಳೆಗೆ ಕೂಟೇಲು ಎಂಬಲ್ಲಿ ಬರೆ ಕುಸಿತ – ತರವಾಡು ಮನೆಗೆ ಹಾನಿ

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಆಲೆಟ್ಟಿ ಗ್ರಾಮದ ಕೂಟೇಲು ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತರವಾಡು ಮನೆಗೆ ಹಾನಿಯಾಗಿದ್ದು, ತರವಾಡು ಮನೆಯ ದೈವ ಚಾವಡಿಯ ಮೇಲ್ಬಾಗದ ಬರೆ ಕುಸಿತಗೊಂಡಿದ್ದು, ಪರಿಣಾಮವಾಗಿ ಮನೆಯ ಗೋಡೆ ಹಾಗೂ ನೀರಿನ ಟ್ಯಾಂಕ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!