ಪಂಜ: ರಸ್ತೆಗುರುಳಿದ ಬೃಹತ್ ಮರ

ಭಾರಿ ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದ ಘಟನೆ ಪಂಜದ ಪಲ್ಲೋಡಿ ಪೆಟ್ರೋಲ್ ಪಂಪು ಬಳಿ ನಡೆದಿದೆ. ರಸ್ತೆಯ ಮಧ್ಯಕ್ಕೆ ಮರ ಬಿದ್ದ ಪರಿಣಾಮ ಈಗ ರಸ್ತೆ ಬಂದ್ ಆಗಿದ್ದು ಪಂಜ ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ.

ಬಾಳುಗೋಡು : ಪದಕ ಸೇತುವೆ ಮುಳುಗಡೆ

ಹರಿಹರ ಬಾಳುಗೋಡು ರಸ್ತೆಯಲ್ಲಿರುವ ಪದಕ ಸೇತುವೆ ಕಳೆದೆರಡು ದಿನಗಳಿಂದ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಇಂದು ಹೆಚ್ಚು ನೀರು ಹರಿದು ಬರುತ್ತಿದ್ದು ಸೇತುವೆ ಕೊಚ್ಚಿ ಹೋಗುವ ಭೀತಿ ಜನರಲ್ಲಿ ಉಂಟಾಗಿದೆ.
Ad Widget

ನಿರಂತರವಾಗಿ ವಿದ್ಯುತ್ ಸಮಸ್ಯೆ ಗ್ರಾ.ಪಂ ಕಛೇರಿ ಕತ್ತಲೆಯಲ್ಲಿ – ಜನರ ಸಮಸ್ಯೆ ಕೇಳುವವರಾರು

ಅಜ್ಜಾವರ: ಅಜ್ಜಾವರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಿರಂತರವಾಗಿ ಐದು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿದ್ದು ಇದೀಗ ವಾರ್ಡ್ ಸಭೆಗಳು ಸೇರಿದಂತೆ ಮಳೆಯ ಪರಿಣಾಮ ತುರ್ತು ಕೆಲಸ ಕಾರ್ಯಗಳನ್ನು ಮಾಡಬೇಕಾದ ಕಛೇರಿಯಲ್ಲಿ ಬೆಳಕಿಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಗಿದೆ. ಅಲ್ಲದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ವಿಪತ್ತು ತಂಡದ ಮುಖ್ಯಸ್ಥರಾಗಿದ್ದು ವಿದ್ಯುತ್ ಸಮಸ್ಯೆ ಮತ್ತು ಬಿ ಎಸ್ ಎನ್ ಎಲ್...

ಉಬರಡ್ಕ : ಮಂಜಿಕಾನ – ಬದನಕಜೆ ರಸ್ತೆ ಜಲಾವೃತ

ಉಬರಡ್ಕ ಗ್ರಾಮದ ಮಂಜಿಕಾನ ದಿಂದ ಬದನೆಕಜೆಗೆ ಹೋಗುವ ರಸ್ತೆ ಜಲಾವೃತಗೊಂಡು ಬ್ಲಾಕ್ ಆಗಿದೆ. ತೋಡೊಂದು ಹರಿಯುತ್ತಿದ್ದ ನೀರು ವಿಪರೀತವಾಗಿದ್ದರಿಂದ ರಸ್ತೆ ಬ್ಲಾಕ್ ಆಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಸಣ್ಣದಾದ ಕಾಲು ಸೇತುವೆ ಮಾಡಲಾಗಿದ್ದು, ಇದನ್ನು ಬಳಸಿ ಈ ಭಾಗದ ಜನರು ಸಂಚರಿಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ಹಿಂದಿ ಚಲನಚಿತ್ರ ನಟಿ ಏಕ್ತಾ ಕಪೂರ್ ಭೇಟಿ

ಸುಬ್ರಹ್ಮಣ್ಯ: ಹಿಂದಿ ಚಲನಚಿತ್ರ ರಂಗದ ನಿರ್ದೇಶಕಿ ಹಾಗೂ ನಟಿ ಏಕ್ತ ಕಪೂರ್ ಜು.18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠಾ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ಮುಂಬೈ ರವಿ ಕೋಟಿಯನ್ ಜೊತೆಗಿದ್ದರು.ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಹಾಗೂ ಕೃಷ್ಣಮೂರ್ತಿ ಭಟ್ ಬರಮಾಡಿಕೊಂಡರು.

ನಾಳೆ (ಜು.19) ದ.ಕ.ಜಿಲ್ಲೆಯ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ದಿನಾಂಕ 19-07-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ದಿನಾಂಕ 19-07-2024 ರಂದು...

ತುಳು ಒಕ್ಕೂಟ ಕುವೈತ್ ವತಿಯಿಂದ ಅಜ್ಜಾವರದಲ್ಲಿ ವಿದ್ಯಾರ್ಥಿ ವೇತನ ವಿತರಣೆ

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ  ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್...

ಜು. 21: ಬೆಳ್ಳಾರೆಯಲ್ಲಿ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ

ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ,ಸ್ನೇಹಿತರ ಕಲಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಜಂಟಿ ಆಶ್ರಯದಲ್ಲಿ ಜು.21ರಂದು ಆದಿತ್ಯವಾರ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ ಬೆಳ್ಳಾರೆ ಸಮೀಪದ ಪಡ್ಪು ಕೃಷಿಕ ಶೇಷಪ್ಪ ಗೌಡರ ಮನೆಯಲ್ಲಿ ನಡೆಯಲಿದೆ. ಆ ದಿನ ಬೆಳಿಗ್ಗೆ  ರಂಗ ಕಲಾವಿದ, ಚಲನಚಿತ್ರ ನಟ ರವಿ ರಾಮಕುಂಜ ಕಾರ್ಯಕ್ರಮವನ್ನು ಉದ್ಘಾಟೀಸಲಿದ್ದಾರೆ....

ಅಜ್ಜಾವರ : ತುಳು ಒಕ್ಕೂಟ ಕುವೈತ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್ ಇದರ...

ಮೇನಾಲ : ಬೈಕ್‌ – ಸ್ಕೂಟಿ ಅಪಘಾತ, ಗಾಯಾಳು ಮಂಗಳೂರಿನ ಆಸ್ಪತ್ರೆಗೆ ಶಿಪ್ಟ್

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿರುವ ಘಟನೆ ಇಂದು ವರದಿಯಾಗಿದೆ. ಅಜ್ಜಾವರ ಕುಡೆಂಬಿ ಸಮಂತ್ ಎಂಬವರು ಕೆಲಸ ಬಿಟ್ಟು ಮನೆಯ ಕಡೆ ಹೋಗುತ್ತಿದ್ದು ಅಜ್ಜಾವರ ಕಡೆಯಿಂದ ಬರುತ್ತಿದ್ದ ಚಿತ್ರಕುಮಾರ್ ಎಂಬವರ ಸ್ಕೂಟಿ ಮೇನಾಲದಲ್ಲಿ ಡಿಕ್ಕಿಯಾಯಿತು. ಪರಿಣಾಮ ಸಮಂತ್ ರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಚಿತ್ರಕುಮಾರ್ ರ ಕೈಗೂ ಸಣ್ಣಪುಟ್ಟ ಗಾಯವಾಗಿದೆ. ಸಮಂತ್...
Loading posts...

All posts loaded

No more posts

error: Content is protected !!