- Wednesday
- November 27th, 2024
ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸುಳ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ 56ನೇ ವರ್ಷದಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣಪತಿ ಪ್ರತಿಷ್ಠೆ ನಡೆಯಿತು. ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆದು ಸೆ.11 ರಂದು ಶೋಭಯಾತ್ರೆಯೊಂದಿಗೆ ಶ್ರೀ ದೇವರ ವಿಸರ್ಜನೆ ನಡೆಯಲಿದೆ.
ಬೆಳ್ಳಾರೆಯ ವಿರಾಟ್ ಫ್ರೆಂಡ್ಸ್ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಭಕ್ತಾಧಿಗಳ ಸಹಕಾರದಿಂದ ಸುಮಾರು 3 ಲಕ್ಷ ರೂ ವೆಚ್ಚದಲ್ಲಿ ಗಣಪತಿಗೆ ಬೆಳ್ಳಿಯ ಕಿರೀಟ ಸಮರ್ಪಿಸಲಾಗಿತ್ತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದುಗ್ಗಲಡ್ಕ ಇದರ ಆಶ್ರಯದಲ್ಲಿ 24ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ದುಗ್ಗಲಡ್ಕದ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಇಂದು ಸಂಜೆ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.
ಸುಳ್ಯದ ನಾಡಹಬ್ಬ 53ನೇ ವರ್ಷದ ಶ್ರೀ ಶಾರದಾಂಬ ದಸರಾ – 2024ರ ಆಮಂತ್ರಣ ಪತ್ರಿಕೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಶ್ರೀ ಚೆನ್ನಕೇಶವ ದೇವಾಲಯದ ವಠಾರದಲ್ಲಿ ಬಿಡುಗಡೆಗೊಳಿಸಿದರು. ಸುಳ್ಯ ದಸರಾ ಉತ್ಸವವು ಅ.9ರಿಂದ ಅ.17ರ ತನಕ ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ...
▪️ಅಧ್ಯಕ್ಷರಾಗಿ ಮಿರಾಝ್ ಸುಳ್ಯ▪️ಉಪಾಧ್ಯಕ್ಷರಾಗಿ ಸಲೀಂ ಗೂನಡ್ಕ▪️ಕಾರ್ಯದರ್ಶಿಯಾಗಿ ಸುಹೈಲ್ ಸುಳ್ಯ ಆಯ್ಕೆ ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ಪ್ರತಿನಿಧಿ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ರವರ ಅಧ್ಯಕ್ಷತೆಯಲ್ಲಿ ಸುಳ್ಯದಲ್ಲಿ ನಡೆಯಿತು. ಎಸ್ಡಿಪಿಐ ಸುಳ್ಯ ಬ್ಲಾಕ್ ನ 2024-27 ನೇಯ ಸಾಲಿಗೆ...
ಗಣೇಶ ಚತುರ್ಥಿ ಪ್ರಯುಕ್ತ ಗುತ್ತಿಗಾರು ಗ್ರಾಮ ಪಂಚಾಯತ್ ಒಕ್ಕೂಟ ಮತ್ತು ದೇವಚಳ್ಳ ಗ್ರಾಮ ಪಂಚಾಯತ್ ಒಕ್ಕೂಟ ಜಂಟಿ ಆಶ್ರಯ ದಲ್ಲಿ ವಳಲಂಬೆ ದೇವಸ್ಥಾನ ಆವರಣ ದಲ್ಲಿ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ಯಪ್ಪ...
ಸುಳ್ಯದ ಪ್ರಸಿದ್ಧ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಪುಲ್ ರಶ್ ಕಂಡು ಬಂದಿದೆ.ಶುಭ ದಿನದ ಪ್ರಯುಕ್ತದ ಖರೀದಿಗಾಗಿ ಬೆಳಗ್ಗಿನಿಂದಲೇ ಗ್ರಾಹಕರು ಚಿನ್ನ, ಬೆಳ್ಳಿ ಖರೀದಿಗಾಗಿ ಧಾವಿಸಿದರು. ಮಕ್ಕಳಿಗೆ ಕಿವಿ ಚುಚ್ಚುಲು ಶುಭ ದಿನವಾದುದರಿಂದಲೂ ಮಳಿಗೆ ಜನಸಂದಣಿ ಕಂಡು ಬಂತು. ಗ್ರಾಹಕರು ವೈವಿಧ್ಯಮಯ ಚಿನ್ನಾಭರಣಗಳನ್ನು ಖರೀದಿಸಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ಇದರ ವತಿಯಿಂದ ನಡೆಯುವ 32 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಸೆ.08 ರಂದು ಅದ್ದೂರಿ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.
Loading posts...
All posts loaded
No more posts