- Sunday
- August 16th, 2026
ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆಯು ಜು. 21ರಂದು ಸುಳ್ಯದ ಗ್ಯಾರೇಜು ಮಾಲಕರ ಸಂಘದ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ಧನ ದೋಳ ಇವರ ಅಧ್ಯಕ್ಷತೆಯಲ್ಲಿ ಜರಗಿತು.2023ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಕೇವಲ ಒಂಬತ್ತು ತಿಂಗಳಿನಲ್ಲಿ ರೂ. 5,60,70,219 ವ್ಯವಹಾರ ನಡೆಸಿ ರೂ. 31,951 ಲಾಭ ಗಳಿಸಿದೆ. ಸಂಘವು...
ಅರಂತೋಡು ಪಂಚಾಯತ್ ವ್ಯಾಪ್ತಿಯ ಅರಮನೆಗಯ ತೂಗು ಸೇತುವೆಯ ಸಂಚಾರ ನಿರ್ಬಂಧಿಸಿದ್ದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ, ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ. ಸಿ. ಎ. ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ ಇವರು ನಿಯೋಗ ಶಾಸಕರಿಗೆ ಮನವಿ...
ದೇವಚಳ್ಳ ಗ್ರಾಮದ ಕೇರ, ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ ಜು.21 ರಂದು ನೆರವೇರಿತು. ಅಂಬೆಕಲ್ಲು ಹೂವಪ್ಪ ಗೌಡ ಹಾಗೂ ವೆಂಕಟ್ರಮಣ ಗೌಡರು ರಿಬ್ಬನ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದರು. ಕೃಷ್ಣಕುಮಾರ್ ದಂಪತಿಗಳು ದೀಪ ಬೆಳಗಿಸಿದರು. ಹುಕ್ರ ತೆಗಿನಕಾಯಿ ಒಡೆದರು. ವಿಶೇಷ ಅನುದಾನದಲ್ಲಿ ನಡೆದ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ನಾಗೇಶ್ ಅಂಬೆಕಲ್ಲು,...
ಸುಳ್ಯ ದಸರಾ ಉತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಶಾರದಾಂಬಾ ಮಹಿಳಾ ಸಮಿತಿಯ ಸಭೆ ಇಂದು ಬೂಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ಯಾದ ಶ್ರೀಮತಿ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮುಂದಿನ ಭಾನುವಾರ ನಡೆಯಲಿರುವ ಕ್ರೀಡಾ ದಸರಾದ ಅಂಗವಾಗಿ ನಡೆಯುವ...
ಸುಳ್ಯ ತಾಲೂಕು ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವೀಣಾ ಕರ್ತವ್ಯಕ್ಕೆ ಹಾಜರು - ನಿಟ್ಟುಸಿರು ಬಿಟ್ಟ ಬಡ ಜನತೆ ಸುಳ್ಯ ಸರಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಗಳ ಆರೋಪದಿಂದ ಬೇಸತ್ತು ಕರ್ತವ್ಯಕ್ಕೆ ಗೈರಾಗಿದ್ದ ಪ್ರಸೂತಿ ತಜ್ಞೆಯಾಗಿರುವ ಡಾ. ವೀಣಾ ರವರು ಜು.16 ರಿಂದ ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಮರು ಹಾಜರಾಗಿರುವುದಾಗಿ ತಿಳಿದುಬಂದಿದೆ.ತನ್ನ ಮೇಲೆ ಬಂದ ಆರೋಪದಿಂದ...
ಯಾಂತ್ರಿಕೃತ ಬದುಕಿನಲ್ಲಿ ನೊಂದವರ ಮನಸ್ಸಿಗೆ ಮುದ, ನೆಮ್ಮದಿ ಶಾಂತಿ ಸಂತಸ ತರುವಲ್ಲಿ ಹಬ್ಬಗಳ ಪಾತ್ರ ಬಹಳ ಹಿರಿದಾಗಿದೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದಲ್ಲ ಒಂದು ಹಬ್ಬ ಇರುವುದು ಬಹಳ ಸಂತಸದ ವಿಚಾರ. ಈ ಹಬ್ಬಗಳು ನಮ್ಮ ಜೀವನಕ್ಕೆ ನವಚೈತನ್ಯ, ಉಲ್ಲಾಸ, ಸಡಗರ ಮತ್ತು ಸಂಭ್ರಮವನ್ನು ತರುತ್ತದೆ. ಭಾರತದಲ್ಲಿ ನಾವು ವಿಶೇಷವಾಗಿ ನಾಲ್ಕು...
ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡಾ ಬೆಳ್ಳಾರೆ ಶಾಖೆಯ ವತಿಯಿಂದ ಬ್ಯಾಂಕಿನ 117ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಜು.20ರಂದು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (CSR) ನಿಧಿಯಿಂದ ರೂ 10,000 ಮೌಲ್ಯದ (Ryak) ತೆರೆದ ಕಪಾಟನ್ನು ಕೊಡುಗೆಯಾಗಿ ನೀಡಿದರು. ಈ ಕೊಡುಗೆಯನ್ನು ಬೆಳ್ಳಾರೆ ಶಾಖೆಯ ಹಿರಿಯ ಅಧಿಕಾರಿಯಾಗಿರುವ ಶ್ರೀಮತಿ ಶುಭಶ್ರೀ ಅವರು...
ರಸ್ತೆ ದಾಟುತ್ತಿದ್ದ ಬಾಲಕನಿಗೆ ಓಮಿನಿ ಕಾರೊಂದು ಗುದ್ದಿದ ಘಟನೆ ಇಂದು ಸಂಜೆ ವರದಿಯಾಗಿದೆ. ಕನಕಮಜಲಿನಲ್ಲಿ ಅಜ್ಜಿ ಮನೆಗೆ ಬಂದಿದ್ದ ಆಸಿಮ್ ರಸ್ತೆ ದಾಟುತ್ತಿದ್ದಾಗ ಪುತ್ತೂರು ಕಡೆಯಿಂದ ಬಂದ ಓಮಿನಿ ಕಾರು ಢಿಕ್ಕಿಯಾಗಿದೆ. ತಲೆಗೆ ಸ್ವಲ್ಪ ಗಾಯಗೊಂಡಿರುವ ಬಾಲಕನಿಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
✍️ರವೂಫ್ ಪೈಂಬೆಚ್ಚಾಲ್ ಮಳೆರಾಯ ಹೇಳುತ್ತಾನೆಅಡೆತಡೆ ಇಲ್ಲದೆಹಿಂದೆಯೂ ನಾನು ಬಹಳಷ್ಟು ಸುರಿದಿದ್ದೆ.ಇಂದು ನೀವು ನನ್ನ ದಾರಿಗೆಅಡ್ಡವಾಗಿದ್ದೀರಿ.ನಾ ಹೇಗೆ ಚಲಿಸಲಿ. ನದಿ ಹೇಳುತ್ತಿದೆಹಿಂದೆಯೂ ನಾನುತುಂಬಿ ಹರಿಯುತ್ತಿದ್ದೆ.ಇಂದು ನೀವು ನನ್ನ ಒಡಲನ್ನುಕಟ್ಟಿಹಾಕಿದಿರಿ.ನಾ ಹೇಗೆ ಹರಿಯಲಿ? ಭೂಮಿತಾಯಿ ಹೇಳುತ್ತಾಳೆಹಿಂದೆ ನಾನು ಬಹಳಷ್ಟು ನೀರಹೀರುತ್ತಿದ್ದೆ.ಇಂದು ನೀವು ನನ್ನ ಬಾಯಿಗೆಕಾಂಕ್ರೀಟ್ ಹಾಕಿ ಮುಚ್ಚಿದಿರಿನಾನು ನೀರು ಸಂಗ್ರಹಿಸುತ್ತಿದ್ದಗದ್ದೆ,ಕೆರೆಗಳನ್ನೆಲ್ಲಾ ಮಣ್ಣುಹಾಕಿಸಮತಟ್ಟು ಮಾಡಿದ್ದೀರಿ.ನಾನೇನು ಮಾಡಲಿ. ಪರ್ವತ ಹೇಳುತ್ತಿದೆನಾನು ಯಾವುದೇ...
ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯರಾದ ಪ್ರದ್ಯುಮ್ನ ಅವರ ಕೃಷಿ ಸ್ಥಳದಲ್ಲಿ ಕೆಲಸಗಾರರಾಗಿದ್ದ ಯೋಗೀಶ್ ಪಿ ಅವರ ಆಕಸ್ಮಿಕ ಮರಣ ಪರಿಹಾರವಾಗಿ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜು 20ರಂದು ದಿ. ಯೋಗೀಶ್ ಪಿ ರವರ...
Loading posts...
All posts loaded
No more posts
