- Sunday
- August 16th, 2026
*ಸುಳ್ಯ ದಸರಾ - 2024* ಕಾರ್ಯಕ್ರಮ ಆಯೋಜನೆ ಮತ್ತು ಜು. 28ರಂದು ಆದಿತ್ಯವಾರ ಕೇರ್ಪಳ ಬೂಡು ಗದ್ದೆಯಲ್ಲಿ ಶಾರದಾಂಬಾ ಸಮೂಹ ಸಮಿತಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ *ಕೆಸರುಗದ್ದೆ ದಸರಾ ಕ್ರೀಡೋತ್ಸವ -2024* ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ *ಶ್ರೀ ಶಾರದಾಂಬಾ ಸಮೂಹ ಸಮಿತಿಗಳ ಜಂಟಿ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣ*...
ಮಂಡೆಕೋಲು ಗ್ರಾಮದ ಶಾಲಾ ಬಳಿಯ ಭವಾನಿಶಂಕರ ಆಚಾರ್ಯ ಎಂಬವರ ಮನೆಗೆ ಇಂದು ಬೆಳಗ್ಗೆ ಬೀಸಿದ ಬಾರೀ ಗಾಳಿಗೆ ಪಕ್ಕದಲ್ಲಿದ್ದ ದೊಡ್ಡದಾದ ತೆಂಗಿನ ಮರ ಬುಡ ಸಹಿತ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮನೆಗೆ ಬಿದ್ದ ಮರವನ್ನು ತೆರವುಗೊಳಿಸಿ ಮನೆಯನ್ನು ದುರಸ್ತಿಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ....
ಕೊಯಮತ್ತೂರು ನಿವಾಸಿ ಸತೀಶ್ ಎಂಬಾತನನ್ನು ಅವರ ತಾಯಿ ಕುಕ್ಕೆ ಸುಬ್ರಮಣ್ಯದಲ್ಲಿ ಬಿಟ್ಟು ಹೋದ ಘಟನೆ ನಡೆದಿರುತ್ತದೆ. ಈ ವ್ಯಕ್ತಿಯು ಸಾರ್ವಜನಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಪುಟ್ ಪಾತ್ ನಲ್ಲಿ ಪತ್ತೆಯಾಗುತ್ತಾನೆ. ಜೋರಾದ ಮಳೆಗೆ ಪುಟ್ ಪಾತ್ ನಲ್ಲಿ ಮಲಗಿಕೊಂಡು ಒದ್ದೆಯಾಗುತ್ತಿರುವುದನ್ನು ಗಮನಿಸಿದ ರಾಧಾ ಕೃಷ್ಣ, ಶಿವ ಭಟ್ ಮಾಧ್ಯಮ ಅವರು ಈ ವ್ಯಕ್ತಿಯನ್ನು ಮಾತನಾಡಿಸಿದಾಗ ತಮಿಳಲ್ಲಿ ಮಾತನಾಡುತ್ತಿದ್ದು...
ಪಿ ಎಮ್ ಶ್ರೀ ಶಾಲೆ ಗುತ್ತಿಗಾರು ಇದರ ಪೋಷಕರ ಸಭೆಯು ಇತ್ತೀಚೆಗೆ ನಡೆದಿದ್ದು ಇದರಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ ಮಾಡಲಾಯಿತು.ಎಸ್ ಡಿ. ಎಂ.ಸಿ. ಯ ನೂತನ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ ಅವರು ಎರಡನೇ ಅವಧಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಸನ್ನ ಆಮೆ ಆಯ್ಕೆಯಾದರು. ಸದಸ್ಯರುಗಳಾಗಿ ಅಶೋಕ್ ನೆಕ್ರಾಜೆ, ದಿನೇಶ್ ಹಾಲೆ...
ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಇಂದು ರಾತ್ರಿ ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ . ಓರ್ವ ಸವಾರ ಆಡೂರು ಮೂಲದವರಾಗಿದ್ದು ಅವರ ತಲೆಗೆ ಗಾಯಗಳಾಗಿದ್ದು ಇನ್ನೋರ್ವ ಸವಾರನ ಕೈ ಕಾಲುಗಳಿಗೆ ಗಾಯಗಳಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಕೆಲ ದಿನಗಳ ಹಿಂದೆ...
ಆಟೋ ಚಾಲಕರ ಸಂಘ B.M.S ಕಲ್ಲುಗುಂಡಿ ಘಟಕದ ವತಿಯಿಂದ B.M.S ಸಂಸ್ಥಾಪಕರಾದ ದತ್ತೊಪಂತ್ ಅವರ ದಿನಾಚರಣೆಯನ್ನು ಸಂಘದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ವಿಷ್ಣುಮೂರ್ತಿ ಸಭಾಂಗಣದಲ್ಲಿ ಆಚರಿಸಲಾಯಿತು.ಪ್ರಾಸ್ತಾವಿಕವಾಗಿ ಕೇಶವ ಬಂಗ್ಲೆಗುಡ್ಡೆ ಮತ್ತು ರವಿಕುಮಾರ್ ನಿಡಿಂಜಿ ಅವರು ಸಂಘಟನೆ ಬೆಳೆದು ಬಂದ ರೀತಿ ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು. ಸಂಘದ ಪಧಾದಿಕರಿಗಳು ಸದಸ್ಯರು ಉಪಸ್ಥಿತಿರಿದ್ದರು.
ಸುಬ್ರಹ್ಮಣ್ಯ ಜುಲೈ 24 : ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಸುಬ್ರಹ್ಮಣ್ಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಘಟಕ ಹಾಗೂ ಇನ್ನರ್ ವೀಲ್ ಘಟಕ ಸುಬ್ರಹ್ಮಣ್ಯ ಇವುಗಳ ಸಹಕಾರದೊಂದಿಗೆ ಎರಡು ಗ್ರಾಮಗಳ ರೈತರಿಗೆ ಜೇನು ಕೃಷಿ, ಬಿದಿರು ಕೃಷಿ ಹಾಗೂ ಮಣ್ಣು ಪರೀಕ್ಷೆ ಮತ್ತು ಗೊಬ್ಬರದ...
ಮಡಪ್ಪಾಡಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಶ್ರೀ ರಾಮ ಸಂಘದ ಧನ್ಯಕುಮಾರ್ ರವರ ತಂದೆಯವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಮಂಜೂರು ಆದ ರೂ. 25,000/- ಮೊತ್ತದ ಚೆಕ್ ನ್ನು ಬಲ್ಕಜೆ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಒಕ್ಕೂಟದ ಅಧ್ಯಕ್ಷರಾದ ವಸಂತ ಕುಮಾರ್ ರವರು,...
ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿರುವ ಆಟಿ ತಿಂಗಳು ಪ್ರಕೃತಿ ಒಡ್ಡುವ ಸವಾಲುಗಳಿಗೆ ಪ್ರಕೃತಿಯಿಂದಲೇ ಉತ್ತರ ನೀಡುವ ವಿಶಿಷ್ಟ ತಿಂಗಳು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆ...
Loading posts...
All posts loaded
No more posts
