ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಸಿ. ಡಿ. ದಿನೇಶ್ ಚೆನ್ನೂರು ಹವಾಲ್ದಾರ ಇವರಿಗೆ ಸನ್ಮಾನ ಕಾರ್ಯಕ್ರಮ

ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಸಿ. ಡಿ. ದಿನೇಶ್ ಚೆನ್ನೂರು ಹವಾಲ್ದಾರ ಇವರಿಗೆ ಸನ್ಮಾನ ಕಾರ್ಯಕ್ರಮವು ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಕುಶಾಲಪ್ಪ ತುಂಬತ್ತಾಜೆ ಇವರ ಅಧ್ಯಕ್ಷತೆಯಲ್ಲಿ ಜು.29 ರಂದು ಜರಗಿತು. ಸನ್ಮಾನ ಸ್ವೀಕರಿಸಿದ ದಿನೇಶ್ ರವರು ಕಾರ್ಗಿಲ್ ಯುದ್ಧದ ವಿವರಣೆಯನ್ನು ಹೇಳಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೇನೆಗೆ...

ಸಂಪಾಜೆ : ಪೇರಡ್ಕ ಸೇತುವೆ ಮುಳುಗಡೆ – ಬದಲಿ ಮಾರ್ಗ ಬಳಕಗೆ ಸೂಚನೆ

ಸಂಪಾಜೆ ಗ್ರಾಮದ ಪೇರಡ್ಕ ಎಂಬಲ್ಲಿ ಸೇತುವೆಯು ಮುಳುಗಿದ್ದು ಇದೀಗ ರಸ್ತೆಯಲ್ಲಿ ಸಂಚಾರವನ್ನು ತಡೆಯುವ ಹಿನ್ನಲೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.ಗೂನಡ್ಕದಿಂದ ದರ್ಖಾಸು ಪೇರಡ್ಕ ಸಂಪರ್ಕಿಸುವ ರಸ್ತೆಯು ಇದೀಗ ಪೇರಡ್ಕ ಮುಳುಗು ಸೇತುವೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ಬಂದು ಸೇತುವೆ ಮುಳುಗಡೆಯಾಗಿದ್ದು ಗ್ರಾಮ ಪಂಚಾಯತ್ ವತಿಯಿಂದ ಬದಲಿ ಮಾರ್ಗ ಸೂಚಿಸಿ ಬ್ಯಾನರ್ ಮತ್ತು ಬ್ಯಾರಿಕೇಡ್ ಆಳವಡಿಕೆ...
Ad Widget

ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆ- ಪೆರುವಾಜೆಯ ಜಲದುರ್ಗಾದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು

ತಾಲೂಕಿನಾದ್ಯಂತ  ಭಾರಿ ಮಳೆ ಸುರಿಯುತ್ತಿದ್ದು ಪೆರುವಾಜೆಯ ಜಲದುರ್ಗಾ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಹಿಂಬದಿಯ ಹೊಳೆಯಿಂದ ನೀರು ದೇವಸ್ಥಾನಕ್ಕೆ ಬಂದಿದೆ.

ತುಂಬಿ ಹರಿಯುತ್ತಿರುವ ಗೌರಿ ಹೊಳೆ – ಪೆರುವಾಜೆ ಸವಣೂರು ರಸ್ತೆ ಬಂದ್

https://youtu.be/8RMyHWzoAls?si=gEjgh_NKAMFH7VU7 ಗೌರಿ ಹೊಳೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪೆರುವಾಜೆ ಸವಣೂರು ರಸ್ತೆಗೆ ನೀರು ಬಂದಿದೆ. ಇಂದು ಸುರಿದ ಮಳೆಗೆ ಗೌರಿ ಹೊಳೆ ಉಕ್ಕಿ ಹರಿಯುತ್ತಿದ್ದು ಪೆರುವಾಜೆಯ ಕಾಪು ಸಮೀಪ ಹೊಳೆಯ ನೀರು ರಸ್ತೆ ಆವರಿಸಿದ್ದು ಸಂಪರ್ಕ ಕಡಿತಗೊಂಡಿದೆ.

ಗುತ್ತಿಗಾರು : ಪಂಚಾಯತ್ ರಸ್ತೆಯಲ್ಲಿ ಬರೆ,ಕಂಪೌಂಡ್ ಕುಸಿತ

ಗುತ್ತಿಗಾರು ಪಂಚಾಯತ್ ರಸ್ತೆಯಲ್ಲಿದ್ದ ಮರವೊಂದು ಶಾಲೆಗೆ ಬೀಳುವ ಪರಿಸ್ಥಿತಿಯಲ್ಲಿದ್ದುದರಿಂದ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಭಾರಿ ಮಳೆಯಿಂದಾಗಿ ಇದೇ ರಸ್ತೆಯಲ್ಲಿ ಬರೆ, ಹಾಸ್ಟೆಲ್ ಕಂಪೌಂಡ್ ಕುಸಿತಗೊಂಡಿದೆ.

ಆಟೋದಲ್ಲಿ ಮರೆತು ಹೋದ ಮೊಬೈಲ್, ಪ್ರಾಮಾಣಿಕವಾಗಿ ಹಿಂದುರುಗಿಸಿದ ಆಟೋ ಚಾಲಕ ನಾರಾಯಣ್

ಸುಳ್ಯ: ಸುಳ್ಯ ನಗರದಲ್ಲಿ ಬಾಡಿಗೆ ರಿಕ್ಷಾ ಓಡಿಸುತ್ತಿರುವ ಆಟೋ ಚಾಲಕ ತನ್ನ ಆಟೋ ರಿಕ್ಷಾ ದಲ್ಲಿ ಅಜ್ಜಾವರ ಗ್ರಾಮದ ಮಹಿಳೆಯೊಬ್ಬರು ಮೊಬೈಲ್ ಅನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದು ಇದನ್ನು ಗಮನಿಸಿದ  ವೀರ ಕೇಸರಿ ಆಟೋ ರಿಕ್ಷಾ ಪಾರ್ಕಿಂಗ್ ಚಾಲಕರಾದ ನಾರಾಯಣ ಎಸ್  ಎಂ ಪ್ರಾಮಾಣಿಕವಾಗಿ ಹಿಂದುರುಗಿಸಿದ್ದು ಇವರು  ಬಿಎಂಎಸ್ ಸದಸ್ಯರು ಹಾಗು ಭಾಜಪದ ಸುಳ್ಯ ನಗರ...

ಸಂಪರ್ಕ ಕಡಿತದ ಭೀತಿಯಲ್ಲಿ ಕಮಿಲ ಮೊಗ್ರ ರಸ್ತೆ

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ  ರಸ್ತೆಯ  ಕಾಂತಿಲ ಚೈಪೆ  ಎಂಬಲ್ಲಿ ಹೊಳೆಬದಿ ರಸ್ತೆ ಕುಸಿದಿದೆ. ಸುಮಾರು 40 ಅಡಿಗಳಷ್ಟು ಕೆಳಗಿನ ತನಕ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ.  ಇಲ್ಲಿ  ನಿರಂತರ ಅನೇಕ  ವಾಹನಗಳು ಹಾದು ಹೋಗುತ್ತಿದ್ದು ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.

ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದೆಹಲಿ: ಸಂಸತ್ತು ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ' ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ."ಪ್ರತಿ ತಿಂಗಳ ಮಾಧ್ಯಮಗಳ...

ಅಜ್ಜಾವರ : ಮನೆಯ ಮೇಲೆ ಮುರಿದು ಬಿದ್ದ ಮರ – ತಪ್ಪಿದ ಅನಾಹುತ

ಅಜ್ಜಾವರ ಗ್ರಾಮದ ಅಡ್ಪoಗಾಯ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ಇಂದು ವರದಿಯಾಗಿದೆ.   ಮೊನ್ನಿ ಎಂಬುವವರ  ಮನೆ ಮೇಲೆ ಮರ  ಬಿದ್ದು ಮನೆಯ ಹಂಚುಗಳು ಮತ್ತು ಅಲ್ಪ ಪ್ರಮಾಣದಲ್ಲಿ ಗೋಡೆಗಳಿಗೂ ಕೂಡ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರಿಗೆ ಬೀಳ್ಕೊಡುಗೆ –  ಸನ್ಮಾನ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ರವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ಜು 30 ರಂದು ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿ, ನಿವೃತ್ತರಾದ ಬಿಇಓ ರಮೇಶ್ ಅವರಿಗೆ ಶುಭಹಾರೈಸಿದರು. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಮಂಜುನಾಥ್ ಜಿ ವಹಿಸಿದ್ದರು.  ನಿವೃತ್ತ...
Loading posts...

All posts loaded

No more posts

error: Content is protected !!