ಕೊರಂಗುಬೈಲು ಗದ್ದೆಯಲ್ಲಿ ಭತ್ತ ಬೇಸಾಯ – ಶಾಲಾ ಮಕ್ಕಳ ಶಿಕ್ಷಕರು ನಾಗರಿಕರ ಜೊತೆಗೆ ಸಂವಾದ ನಡೆಸಿದ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ ಎಸ್ 

ಭತ್ತ ಕೃಷಿಗಳಿಗೆ ಔಷಧಿ, ಯಂತ್ರೋಪಕರಣಗಳ ಸಹಾಯ ನೀಡುವ ಭರವಸೆ

ಅಜ್ಜಾವರ : ಅಜ್ಜಾವರ ಗ್ರಾಮದ ಕೊರುಂಗು ಬೈಲು ಗದ್ದೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭತ್ತದ ನಾಟಿ ಕಾರ್ಯಕ್ರಮವು ನಡೆಯಿತು. ಭತ್ತದ ನಾಟಿ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊರಿನ ನಾಗರಿಕರು ಮಹಿಳೆಯರು ಭಾಗವಹಿಸಿದ್ದು ಭತ್ತದ ನಾಟಿ ಕಾರ್ಯಕ್ರಮಕ್ಕೆ ಸುಳ್ಯ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಎಂ ಎಸ್ ರವರು ಆಗಮಿಸಿ ಕೃಷಿಯ...

ಯೋಗಾಸನದಲ್ಲಿ 04ನೇ ವಿಶ್ವ ದಾಖಲೆ  ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ  ನಿಹಾನಿ ವಾಲ್ತಾಜೆ

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , ಯೋಗಮುದ್ರಾಸನ ದಲ್ಲಿ 41 ನಿಮಿಷ  02 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ.  ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಮತ್ತು 04 ಅಗಸ್ಟ್ 2024 ಆದಿತ್ಯವಾರ ದಂದು  ಮೈಸೂರು ನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ...
Ad Widget

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಸುಳ್ಯ: ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿ‌ ಮುಗಿದು ಸುಮಾರು ಒಂದೂವರೆ ವರ್ಷಗಳ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ.20 ಸದಸ್ಯರ ನಗರ ಪಂಚಾಯತ್‌ನಲ್ಲಿ 14 ಮಂದಿ...

ಬಳ್ಪ : ಅಕ್ಕೇಣಿಯ ಅಶೋಕ್   ನಾಪತ್ತೆ – ಪೋಲೀಸ್ ದೂರು

ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33)ಎಂಬವರು ಆ.5 ರಂದು  ಬೆಳಿಗ್ಗೆಯಿಂದ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿದ್ದು, ತಾಯಿ ಮಗಳ ಮನೆಗೆ ಹೋಗಿದ್ದ ವೇಳೆ  ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ಹರೀಶ ರವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳ್ಳಕ್ಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆ ಪತ್ತೆ

ಗುತ್ತಿಗಾರು ಪಂಜ ರಸ್ತೆಯಲ್ಲಿ ಸಿಗುವ ಬಳ್ಳಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಸದಾಶಿವ ಕುದ್ವ ಅವರು ಈ ರಸ್ತೆಯಲ್ಲಿ ಹೋಗುವಾಗ ಮೊಸಳೆ ಇರುವುದು ಕಂಡುಬಂದಿದೆ. ಮೊಸಳೆ ಹೊಳೆಯ ದಡದಲ್ಲಿ ಮಲಗಿರುವ ಫೋಟೋ ತೆಗೆದು ಹಂಚಿಕೊಂಡಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.

ಕುಕ್ಕುಜಡ್ಕ : ಅನಾರೋಗ್ಯದಿಂದ ಬಳಲುತ್ತಿರುವ ಆನಂದರವರ ಚಿಕಿತ್ಸೆಗೆ ಅಮರ ಸಂಘಟನಾ ವತಿಯಿಂದ ಸಹಾಯಧನ ಹಸ್ತಾಂತರ

ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕ ನಿವಾಸಿಯಾದ ಆನಂದ ಕುಕ್ಕಜಡ್ಕ ಇವರು ತಲೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಅಮರ ಸಂಘಟನಾ ವತಿಯಿಂದ ಸಾತ್ವಿಕ್ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ದಾತಡ್ಕ, ಜಯಪ್ರಸಾದ್ ಸಂಕೇಶ, ಮಿಥುನ್ ಕೆರೆಗದ್ದೆ, ಪ್ರವೀಣ್ ಕುಲಾಲ್,...

ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್  ಚೂರಲ್ ಮಾಲಾ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ.ನೇತೃತ್ವದಲ್ಲಿ ಸಂಪಾಜೆಯಾ ಉಮ್ಮರ್ ತಾಜ್, ಹಾರೀಸ್ ಸಿ.ಕೆ,ಆರಾಫಾತ್ ಜೊತೆಗೆ ಕೊಝಿಕೋಡ್ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅಡ್ವಕೆಟ್ ಆದಿಲ್ ವಿಕೋಪದಲ್ಲಿ ಹಾನಿಯದ ಸ್ಥಳಗಳಿಗೆ ಭೇಟಿ ಮಾಡಿ ನಂತರ ಯುವ ಕಾಂಗ್ರೆಸ್ ವತಿಯಿಂದ ಸಂತ್ರಸ್ತರಿಗೆ ನೀಡುತ್ತಿರುವ ಸವಲತ್ತುಗಳ ಕೇಂದ್ರಕ್ಕೆ ಭೇಟಿ ನೀಡಿ ಯುವ ಕಾಂಗ್ರೆಸ್ ರಾಷ್ಟ್ರೀಯ...

ಮಳೆಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸಮಾಜಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್,ಸಿ, ಮಹಾದೇವಪ್ಪ ರನ್ನು ಅವರ ನಿವಾಸದ ಕಛೇರಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಮಳೆಯಿಂದ ಹಾನಿಯಾದ ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸುವಂತೆ‌ ಮತ್ತು ಸುಳ್ಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ವಿನಂತಿಸಿದರು.

ಬಾಳೆಮಕ್ಕಿಯಲ್ಲಿ ನೆರಳಿಗೆ ನೆಟ್ಟ ಮರಗಳ ನಾಶ – ಕಿಡಿಗೇಡಿಗಳ ಪತ್ತೆಗಾಗಿ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಸುಳ್ಯದ ಬಾಳೆಮಕ್ಕಿ ಬಳಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನೆರಳಿಗಾಗಿ ನೆಟ್ಟಿದ್ದ 4 ಮರಗಳು ಬಲಿಯಾದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಜೀಪು ಮತ್ತು ಟೆಂಪೊ ಚಾಲಕ ಮಾಲಕರ ಸಂಘದವರು ಇಂದು ಬೆಳಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಕಿಡಿಗೇಡಿಗಳ ಪತ್ತೆಗಾಗಿ ಪ್ರಾರ್ಥಿಸಿಕೊಂಡರು.ದ್ವಾರಕಾ ಹೋಟೆಲ್ ಬಳಿ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿತ್ತು. ಇದರಲ್ಲಿ ನಾಲ್ಕು ಮರಗಳನ್ನು...

ಬಿಜೆಪಿಯ ದೇವ ಬೂತ್ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ – ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ದೇವ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ಆ.03 ರಂದು ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ, ಬೂತ್ ಲೆವೆಲ್ ಏಜೆಂಟ್ ಗಳಾಗಿ ತೀರ್ಥೆಶ್ ಪಾರೆಪ್ಪಾಡಿ ಮತ್ತು ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಮಹಿಳಾ ಸದಸ್ಯರಾಗಿ ತಾರಾ ರವೀಂದ್ರ ಅಡ್ಡನಪಾರೆ, ಎಸ್.ಸಿ. ಘಟಕದಿಂದ ಬಾಬು ದೇವ ಕಾಲನಿ,...
Loading posts...

All posts loaded

No more posts

error: Content is protected !!