ಪಂಜ: ಸುಳ್ಯತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ದ ವತಿಯಿಂದ ಹಿರಿಯರ ಸಂಸ್ಮರಣೆ..

ಪಂಜ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜಹೋಬಳಿ ಘಟಕದ ವತಿಯಿಂದ ಸ್ವಾತಂತ್ರ್ಯ ನಂತರ ನಾಡಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರ ಸಂಸ್ಮರಣೆ ಕಾರ್ಯಕ್ರಮವು ಆ.15 ರಂದು ಹೋಬಳಿ ಘಟಕದ ಅಧ್ಯಕ್ಷರಾದ ಬಾಬುಗೌಡ ಅಚ್ರಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ...

ಕಟ್ಟಡ ಕಾರ್ಮಿಕ ಸಂಘ ಚೆಂಬು ಘಟಕದ ವತಿಯಿಂದ .ಜಾನಿ.ಕೆ.ಪಿ ಯವರಿಗೆ ಸನ್ಮಾನ

ಆ.18. ಕಟ್ಟಡ ಕಾರ್ಮಿಕರ ಸಂಘ ಚೆಂಬು ಘಟಕದ ವತಿಯಿಂದ, ದೇಶದ ಪ್ರತಿಷ್ಠಿತ ಕಲ್ಯಾಣ ಮಂಡಳಿಯಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಢಳಿತ ಮಂಡಳಿ ಸದಸ್ಯರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ನಿಯೋಜಿಸಲ್ಪಟ್ಟ ಜಾನಿ.ಕೆ.ಪಿ ಇವರನ್ನು ಸುಳ್ಯ ತಾಲೂಕಿನ ಹಿರಿಯ ಕಾರ್ಮಿಕ ನಾಯಕರಾದ ನಾಗರಾಜ್ ಹೆಚ್.ಕೆ,ಆನಂದ ಗೌಡ,ಕೃಷ್ಣ ಕೇರ್ಪಳ,ವಸಂತ ಪೆಲ್ತಡ್ಕ, ರಾಜ್ಯ ಮಹಿಳಾ ಸಮಿತಿ ಸದಸ್ಯೆಯಾದ ಭಾರತಿ.ಬಿ ಹಾಗೂ ವಲಯ...
Ad Widget

ಚೊಕ್ಕಾಡಿ :  ಶಾಲಾ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ನೇಜಿ ನೆಡುವ ಕಾರ್ಯಕ್ರಮವು

ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಹಾಗೂ ಮಯೂರಿ ಯುವತಿ ಮಂಡಲ (ರಿ) ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ನೇಜಿ ನೆಡುವ ಕಾರ್ಯಕ್ರಮವು ಆ.18 ರಂದು  ಅಚ್ಚಿಪಳ್ಳ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಮುಖ್ಯೋಪಾಧ್ಯಾಯರಾದ...

ಕುಕ್ಕೆ: ಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ : ಭಾರತೀಯರು ಮಾತ್ರವಲ್ಲದೆ ವಿಶ್ವವೇ ಸ್ವೀಕಾರಾರ್ಹ ಭಾಷೆ ಸಂಸ್ಕೃತ –  ಲಕ್ಷ್ಮೀಶ ಗಬ್ಲಡ್ಕ

ಸುಬ್ರಹ್ಮಣ್ಯ: ಸಂಸ್ಕೃತ ಅನ್ನುವುದು ಸಂಪ್ರದಾಯಿಕ ಭಾಷೆ. ಜಾತಿ ಧರ್ಮ ಮೀರಿದ ಈ ಭಾಷೆಯನ್ನು ಸರ್ವರೂ ಅತ್ಯಂತ ಪ್ರೀತಿಯಿಂದ ಅನುಸರಿಸುತ್ತಿರುವುದು ಸಂತಸಕರ. ಈ ಭಾಷೆಯು ಸರ್ವ ಸಮುದಾಯಗಳ ಭಾಷೆಯಾಗಿ ಪ್ರಗತಿಯಾಗಿದೆ.ಅತ್ಯಂತ ಸಂಸ್ಕರಿಸಲ್ಪಟ್ಟುದು ಸಂಸ್ಕೃತ.ನಮ್ಮ ಭಾವನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾತಿನ ಮೂಲಕ ವ್ಯಕ್ತಪಡಿಸುವ ಉತ್ಕೃಷ್ಠ ಮಾಧ್ಯಮ ಸಂಸ್ಕೃತ.ಸರ್ವ ಭಾರತೀಯರು ಮಾತ್ರವಲ್ಲದೆ ವಿಶ್ವ ಸ್ವೀಕಾರಾರ್ಹ ಭಾಷೆ ಸಂಸ್ಕೃತ ಎಂದು ಜಿಲ್ಲಾ...

ಗುತ್ತಿಗಾರು: ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂಡಳಿ ವತಿಯಿಂದ ಆಚರಿಸ್ಪಡುತ್ತಿರುವ ಅಷ್ಟಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಆ.17 ರಂದು ನಡೆಯಿತು. ಈ ಸಂದರ್ಭದಲ್ಲಿ ರವಿಪ್ರಕಾಶ್ ಬಳ್ಳಡ್ಕ, ಪೂರ್ಣಚಂದ್ರ ಪೈಕ, ಆನಂದ ಆಚಾರ್ಯ, ಲೀಲಾಧರ ಅಡ್ಡನಪಾರೆ, ನಾರಾಯಣ ಕುಚ್ಚಾಲ, ರಮೇಶ್ ಮೆಟ್ಟಿನಡ್ಕ, ಮೋಹನ ಆಚಳ್ಳಿ, ಸುಕೇಶ್ ಚಾರ್ಮತ, ಶ್ರೀಮತಿ ದಮಯಂತಿ ರವೀಂದ್ರ ಉಪಸ್ಥಿತರಿದ್ದರು.

ಚೊಕ್ಕಾಡಿ : “ಕೆಸರುಡೊಂಜಿ ದಿನ -2024” ಮತ್ತು ಸಾಧಕರಿಗೆ ಸನ್ಮಾನ

ಯುವಕ ಮಂಡಲ (ರಿ ) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ) ಚೊಕ್ಕಾಡಿ ಗಳ ಜಂಟಿ ಆಶ್ರಯದಲ್ಲಿ ಕೆಸರುಡೊಂಜಿ ದಿನ 2024 ಕೆಸರುಗದ್ದೆ ಕ್ರೀಡಾಕೂಟವು ಅಮರಮಡ್ನೂರು ಗ್ರಾಮದ ಚೆನ್ನಪರಿ ಎಂಬಲ್ಲಿಯ ಅಚ್ಚಿಪಳ್ಳ ಗದ್ದೆಯಲ್ಲಿ ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಜರುಗಿತು.ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆಟೋಟ ಸ್ಪರ್ಧೆಗಳು, ಗುಂಪು ಆಟಗಳು ಮತ್ತು ವಿವಿಧ ಮನೋರಂಜನಾ ಆಟಗಳು ನಡೆದವು.ಚೊಕ್ಕಾಡಿ...

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿರುವುದು ಖಂಡನೀಯ – ಸುಳ್ಯ ಮಹಿಳಾ ಕಾಂಗ್ರೆಸ್

ರಾಜ್ಯದ ಅಭಿವೃದ್ದಿಯ ಹರಿಕಾರ, ಗ್ಯಾರೆಂಟಿಗಳ ಸರದಾರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಇಲ್ಲದೆ ಈ ನಾಡಿನ 2 ನೇ ಅವಧಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆ ನಡೆಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಮತ್ತು ಕೇಂದ್ರ ಸರಕಾರವು ರಾಜ್ಯಭವನವನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಹೊರಟಿರುವುದನ್ನು ಸುಳ್ಯ ತಾಲೂಕು ಮಹಿಳಾ ಕಾಂಗ್ರೆಸ್ ಘಟಕ...

ಬಿಜೆಪಿ ಷಡ್ಯಂತ್ರ ನಡೆಸಲು ರಾಜಭವನ ಬಳಸಿಕೊಂಡಿದೆ – ಕೆಪಿಸಿಸಿ ಸಂಯೋಜಕ ಪಾಂಬಾರು ಆರೋಪ

ಸಧೃಡವಾಗಿ ಸುಭದ್ರವಾಗಿ ಇರುವ ಸಿದ್ದರಾಮಯ್ಯ ಸರ್ಕಾರವನ್ನು ತೆಗೆದು ಹಾಕಲು ಬಿಜೆಪಿ ಪಕ್ಷದವರು ರಾಜಭವನವನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಪ್ರಾಸಿಕ್ಯೂಶನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದು ಸದರಿ ಅನುಮತಿ ಬಿಜೆಪಿ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಇದು ಖಂಡನೀಯ ಎಂದು...

ಹಳೆಗೇಟು : ಮುಖ್ಯರಸ್ತೆಯಲ್ಲಿದ್ದ ಹೊಂಡ ಮುಚ್ಚಿದ ಸ್ಥಳೀಯ ಯುವಕರ ತಂಡ

ಹಳೆಗೇಟಿನಿಂದ ಜಯನಗರ ರಸ್ತೆಯ ತಿರುವಿನಲ್ಲಿದ್ದ ದೊಡ್ಡ ಹೊಂಡವನ್ನು ಇಂದು ಸ್ಥಳೀಯ ಯುವಕರು ಮುಚ್ಚುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಜಯಪ್ರಕಾಶ್ ,ಸಚಿನ್ ಚೇತನ್ ಆಟೋ ಚಾಲಕ ಗೋಪಾಲ, ಲಕ್ಷ್ಮೀ ಸ್ಟೋರ್ ಮಾಲೀಕ ಲೋಕೇಶ್ ಇತರರು ಸೇರಿ ಕಾಂಕ್ರೀಟ್ ಹಾಕಿ ಹೊಂಡವನ್ನು ಮುಚ್ಚಿ ವಾಹನ ಸಂಚಾರ ಸುಗಮ ವಾಗಿಸಲೂ ಸಹಕರಿಸಿದ್ದಾರೆ.

ಮೊಗ್ರ ಶಾಲೆಯ ಶಿಕ್ಷಕರಾಗಿದ್ದ ಶ್ರೀ ಪ್ರಮೋದ್ ಕೆ.ಬಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ

ಗುತ್ತಿಗಾರು ಸಮೀಪದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 5 ವರ್ಷಗಳು ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀ ಪ್ರಮೋದ್ ಕೆ ಬಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ...
Loading posts...

All posts loaded

No more posts

error: Content is protected !!