SDPI ಸುಳ್ಯ ಬ್ಲಾಕ್ ಪ್ರತಿನಿಧಿ ಸಭೆ ಮತ್ತು ಆಂತರಿಕ ಚುನಾವಣೆ –

▪️ಅಧ್ಯಕ್ಷರಾಗಿ ಮಿರಾಝ್ ಸುಳ್ಯ▪️ಉಪಾಧ್ಯಕ್ಷರಾಗಿ ಸಲೀಂ ಗೂನಡ್ಕ▪️ಕಾರ್ಯದರ್ಶಿಯಾಗಿ ಸುಹೈಲ್ ಸುಳ್ಯ ಆಯ್ಕೆ ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ಪ್ರತಿನಿಧಿ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ರವರ ಅಧ್ಯಕ್ಷತೆಯಲ್ಲಿ ಸುಳ್ಯದಲ್ಲಿ ನಡೆಯಿತು. ಎಸ್‌ಡಿಪಿಐ ಸುಳ್ಯ ಬ್ಲಾಕ್ ನ 2024-27 ನೇಯ ಸಾಲಿಗೆ...

ವಳಲಂಬೆ : ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಗಣೇಶ ಚತುರ್ಥಿ ಪ್ರಯುಕ್ತ ಗುತ್ತಿಗಾರು ಗ್ರಾಮ ಪಂಚಾಯತ್ ಒಕ್ಕೂಟ ಮತ್ತು ದೇವಚಳ್ಳ ಗ್ರಾಮ ಪಂಚಾಯತ್ ಒಕ್ಕೂಟ ಜಂಟಿ ಆಶ್ರಯ ದಲ್ಲಿ ವಳಲಂಬೆ ದೇವಸ್ಥಾನ ಆವರಣ ದಲ್ಲಿ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ಯಪ್ಪ...
Ad Widget

ಚೌತಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ನಲ್ಲಿ ಫುಲ್ ರಶ್ – ಶುಭ ದಿನದಂದು ಚಿನ್ನ ಖರೀದಿಗೆ ಆಗಮಿಸಿದ ಗ್ರಾಹಕರು

ಸುಳ್ಯದ ಪ್ರಸಿದ್ಧ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಪುಲ್ ರಶ್ ಕಂಡು ಬಂದಿದೆ.ಶುಭ ದಿನದ ಪ್ರಯುಕ್ತದ ಖರೀದಿಗಾಗಿ ಬೆಳಗ್ಗಿನಿಂದಲೇ ಗ್ರಾಹಕರು ಚಿನ್ನ, ಬೆಳ್ಳಿ ಖರೀದಿಗಾಗಿ ಧಾವಿಸಿದರು. ಮಕ್ಕಳಿಗೆ ಕಿವಿ ಚುಚ್ಚುಲು ಶುಭ ದಿನವಾದುದರಿಂದಲೂ ಮಳಿಗೆ ಜನಸಂದಣಿ ಕಂಡು ಬಂತು. ಗ್ರಾಹಕರು ವೈವಿಧ್ಯಮಯ ಚಿನ್ನಾಭರಣಗಳನ್ನು ಖರೀದಿಸಿದರು.

ಹರಿಹರ ಪಲ್ಲತ್ತಡ್ಕ – 15 ನೇ ವರ್ಷದ ಗಣೇಶೋತ್ಸವ ಆಚರಣೆ

ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಆಶ್ರಯದಲ್ಲಿ 15 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.‌

ಕುಕ್ಕುಜಡ್ಕ : 32 ನೇ ವರ್ಷದ ಗಣೇಶೋತ್ಸವು ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ಇದರ ವತಿಯಿಂದ ನಡೆಯುವ 32 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಸೆ.08 ರಂದು ಅದ್ದೂರಿ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.

ಕಲ್ಮಡ್ಕ : ನವೋದಯ ಸಂಘದ ಆಶ್ರಯದಲ್ಲಿ 46 ವರ್ಷದ ಗಣೇಶೋತ್ಸವ ಆಚರಣೆ

ಕಲ್ಮಡ್ಕ ನವೋದಯ ಸಂಘ ಆಶ್ರಯದಲ್ಲಿ 46 ವರ್ಷದ ಗಣೇಶೋತ್ಸವು ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭಗೊಂಡಿತು. ವೇದಮೂರ್ತಿ ಶಿವರಂಜನ್ ವೈದಿಕ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಇಂದು ಸಂಜೆ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.

ಪೇರಾಲು – ಮೈತಡ್ಕ ಗಣೇಶೋತ್ಸವ ಆಚರಣೆ

ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಹಾಗೂ ಪಯಸ್ವಿನಿ ಯುವತಿ ಸಂಘ ಪೇರಾಲು ಮೈತಡ್ಕ ಇದರ ಆಶ್ರಯದಲ್ಲಿ 31 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಗಣಪತಿ ಪ್ರತಿಷ್ಠೆ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಇಂದು ಸಂಜೆ ಶೋಭಾಯಾತ್ರೆ ನಡೆಯಲಿದೆ.

ವಳಲಂಬೆ : ಗಣಪತಿ ಪ್ರತಿಷ್ಠೆಯೊಂದಿಗೆ ಗಣೇಶೋತ್ಸವ ಆರಂಭ – ನಾಳೆ ಶೋಭಾಯಾತ್ರೆ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವು ಇಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡಿದೆ. ಎರಡು ದಿನಗಳ ಕಾಲ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನಡೆದು ಸೆ.08 ರಂದು ಭವ್ಯ ಶೊಇಭಾಯಾತ್ರೆಯಲ್ಲಿ ತೆರಳಿ ಶ್ರೀ ಗಣೇಶನ ವಿಸರ್ಜನೆ...

ಕೆವಿಜಿ ಮೆಡಿಕಲ್ ಕಾಲೇಜಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ನೂತನ 11ಕೆವಿ ಫೀಡರ್ ಉದ್ಘಾಟನೆ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಕ್ಯಾಂಪಸ್ ಗೆ ಯಾವುದೇ ಅಡೆತಡೆ ಇಲ್ಲದೆ ನಿರಂತರ ವಿದ್ಯುತ್ ಪೂರೈಕೆಗಾಗಿ ಸುಳ್ಯದ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಭೂಗತ ಕೇಬಲ್ ಮುಖಾಂತರ ನೂತನ ಫೀಡರ್ ನಿರ್ಮಾಣ ಮಾಡಲಾಗಿದೆ. 33/11KV ಸುಳ್ಯದ ಮೆಸ್ಕಾಂ ವಿದ್ಯುತ್ ಕೇಂದ್ರದಿಂದ 11KV HT ಡೆಡಿಕೇಟೆಡ್‌ ಎಕ್ಸ್‌ ಪ್ರೆಸ್ ಫೀಡರ್ ಭೂಗತ ಕೇಬಲ್ ಮೂಲಕ ಕೆವಿಜಿ...

ಎನ್ನೆಂಸಿ ನೂತನ ವಿದ್ಯಾರ್ಥಿ ಸಂಘದ ರಚನೆ – ನಾಯಕನಾಗಿ ಆದಿತ್ಯ ಡಿ.ಕೆ. ಉಪನಾಯಕಿಯಾಗಿ ಗಾನ ಬಿ.ಡಿ., ಕಾರ್ಯದರ್ಶಿಯಾಗಿ ಸೂರ್ಯದರ್ಶನ್ ಪಿ.ಎ., ಜತೆ ಕಾರ್ಯದರ್ಶಿಯಾಗಿ ಉಜಾನ ಕೆ

ಎನ್ನೆಂಸಿ, ನೆಹರು ಮೆಮೋರಿಯಲ್ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮಾರ್ಗದರ್ಶನದಲ್ಲಿ ಸರ್ವಾನುಮತದಿಂದ ಆರಿಸಲಾಯಿತು.ತರಗತಿ ಪ್ರತಿನಿಧಿಗಳು ಸೂಚಿಸಿದ ಅಂತಿಮ ಬಿ.ಕಾಂ ಪದವಿಯ ಆದಿತ್ಯ ಡಿ.ಕೆ ನಾಯಕನಾಗಿ, ಅಂತಿಮ ಬಿ.ಎ ಪದವಿಯ ಗಾನ ಬಿ.ಡಿ ಉಪನಾಯಕಿಯಾಗಿ, ಅಂತಿಮ ಬಿ.ಬಿ.ಎ ಪದವಿಯ ಸೂರ್ಯದರ್ಶನ್ ಪಿ.ಎ ಕಾರ್ಯದರ್ಶಿಯಾಗಿ ಮತ್ತು ಅಂತಿಮ ಬಿ.ಎಸ್ಸಿ ಪದವಿಯ...
Loading posts...

All posts loaded

No more posts

error: Content is protected !!