ಸೆ.23 : ರೋಟರಿ ಪ.ಪೂ. ಕಾಲೇಜಿನಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮ ಹಾಗೂ ಮೋಟಾರು ವಾಹನ ಕಾಯ್ದೆಗಳ ಬಗ್ಗೆ ಅರಿವು ಕಾರ್ಯಕ್ರಮ

ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ, ವಕೀಲರ ಸಂಘ ಸುಳ್ಯ, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ,ಇವುಗಳ ಸಂಯುಕ್ತ ಆಶ್ರಯದಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಾನೂನು ಅರಿವು ಕಾರ್ಯಕ್ರಮ ಸೆಪ್ಟೆಂಬರ್ 23ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಲೆಟ್ಟಿ ಮಿತ್ತಡ್ಕ ಸುಳ್ಯ ಇಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಬಿ.ಮೋಹನ್ ಬಾಬು,...

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆ.21 ರಿಂದ 30ರವರೆಗೆ ಎನ್.ಸಿ.ಸಿ. ಯ RDC-II ಮತ್ತು CATC ಶಿಬಿರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ RDC-II ಮತ್ತು CATC ಶಿಬಿರವು ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ 600 ಎನ್ ಸಿ ಸಿ ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್...
Ad Widget

ಸುಬ್ರಹ್ಮಣ್ಯದ ಕೆ.ಎಸ್.ಎಸ್.ಕಾಲೇಜಿನಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಇತಿಹಾಸ ವಿಭಾಗದಿಂದ ಸೆ. 20ರಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ತಾಳೆಯ ಹಿಂಗಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಅವರು ಇತಿಹಾಸ...

ಕಾಡಾನೆಗಳ ದಾಳಿ : ಸ್ಥಳಕ್ಕೆ ಜನಪ್ರತಿನಿಧಿಗಳ ಭೇಟಿ

ಸುಳ್ಯ ಪರಿವಾರಕಾನ ಪರಿಸರದಲ್ಲಿ ಕಾಡಾನೆ ಗಳು ದಾಳಿ ನಡೆಸಿ ಕೃಷಿ ನಾಶಗೈದಿರುವ ಭಾಗಗಳಿಗೆ ಸ್ಥಳೀಯ ನ ಪಂ ಸದಸ್ಯೆ ಸುಶೀಲ ರವರ ಪತಿ ಜಿನ್ನಪ್ಪ ಪೂಜಾರಿ, ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್, ಮಾಜಿ ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ಭೇಟಿ ನೀಡಿದರು.ಸ್ಥಳೀಯರಾದ ಸುರೇಶ್, ಕೇಪಣ್ಣ ಮಾಸ್ಟರ್, ಸತ್ಯನಾರಾಯಣ ರವರ ಹಾನಿಯಾದ...

ಎನ್.ಎಸ್.ಯು.ಐ.ರಾಷ್ಟ್ರೀಯ ಸಂಯೋಜಕರಾಗಿ ಸವಾದ್ ಸುಳ್ಯ ನೇಮಕ

NSUI ನ ರಾಷ್ಟ್ರೀಯ ಸಂಯೋಜಕರನ್ನಾಗಿ "ಸವಾದ್ ಸುಳ್ಯ" ಅವರನ್ನು NSUI ರಾಷ್ಟ್ರೀಯ ಅಧ್ಯಕ್ಷರಾದ "ವರುಣ್ ಚೌಧರಿ" ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಸವಾದ್ ಸುಳ್ಯ ಮೂಲತ ಸುಳ್ಯ ನಗರದ ಗಾಂಧಿನಗರದವರು, ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ ಮುಗಿಸಿ 14 ನೇ ವಯಸ್ಸಿನಲ್ಲಿ ಸರಕಾರಿ ಪ್ರೌಢ ಶಾಲೆ ಗಾಂಧೀನಗರ ಸುಳ್ಯ ಇದರ ಚುನಾಯಿತ ಉಪನಾಯಕನಾಗಿ...

ಬಾಳಿಲ: ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ವಿದ್ಯಾಬೋಧಿನಿ ವಿದ್ಯಾಸಂಸ್ಥೆಗಳು ಬಾಳಿಲ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟ ಸೆ.17ರಂದು ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರುಗಿತು. ಈ ಪಂದ್ಯಾಟವನ್ನು ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕರಾದ ಪಿ ಜಿ...

ಪೆರುವಾಜೆ ಮುರ್ಕೆತಿ ಬಿಜೆಪಿ ವಾರ್ಡ್ ಸಮಿತಿ ರಚನೆ : ಅಧ್ಯಕ್ಷ ಮಧುಸೂದನ್ ನಾಯಕ್ ಬಜತ್ತನೆ – ಕಾರ್ಯದರ್ಶಿ ಶಶಿಕುಮಾರ್ ಬಿ ಎನ್

ಪೆರುವಾಜೆ ಗ್ರಾಮದ ಮುರ್ಕೆತಿ ವಾರ್ಡ್ ನ ಬಿಜೆಪಿ ಸಮಿತಿಯ ಸಭೆ ಸೆ.19 ರಂದು ನಡೆಯಿತು.‌ ಈ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ಮಧುಸೂದನ್ ನಾಯಕ್ ಬಜತ್ತನೆ ಹಾಗೂ ಕಾರ್ಯದರ್ಶಿಯಾಗಿ ಶಶಿಕುಮಾರ್ ಬಿ ಎನ್ ಆಯ್ಕೆಯಾಗಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅಜಿತ್ ರಾವ್ ಮತ್ತು ಪಕ್ಷದ ಪ್ರಮುಖರು ಹಾಗೂ...

ಕೆ.ಎಸ್.ಎಸ್.ಕಾಲೇಜಿನ ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್, ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ದಿನಾಂಕ 19.09.2024 ರಂದು ಬೆಂಗಳೂರಿನ ತರಬೇತಿ ಸಂಸ್ಥೆಯಾದ Q-Spiders ವತಿಯಿಂದ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಆಪರ್ಚುನಿಟಿ ಇನ್ ಬ್ಯಾಂಕಿಂಗ್ ಸೆಕ್ಟರ್ಸ್ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ತರಬೇತಿಯಲ್ಲಿ ಅವಕಾಶವನ್ನು ಪಡೆದುಕೊಳ್ಳಲು ಒಟ್ಟು 149 ಅಂತಿಮ ಪದವಿಯ...

ಸುಳ್ಯ : ಪೋಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ ಅಧಿಕಾರ ಸ್ವೀಕಾರ

ಸುಳ್ಯದ ಪೋಲೀಸ್ ವೃತ್ತ ನಿರೀಕ್ಷಕರಾಗಿ ಕುಮುಟದಲ್ಲಿ ವೃತ್ತ ನಿರೀಕ್ಷಕರಾಗಿದ್ದ ತಿಮ್ಮಪ್ಪ ನಾಯ್ಕ ರವರು ಸುಳ್ಯಕ್ಕೆ ವರ್ಗಾವಣೆಗೊಂಡು ಇಂದು ಸುಳ್ಯ ವೃತ್ತ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಓಡಬಾಯಿ :  ಜೀಪು ಮತ್ತು ಬೈಕ್ ಅಪಘಾತ – ಸವಾರ ಅಪಾಯದಿಂದ ಪಾರು

ಓಡಬಾಯಿ ಪೆಟ್ರೋಲ್ ಪಂಪ್ ಬಳಿಯಲ್ಲಿ ಇದೀಗ  ಜೀಪು ಮತ್ತು ಬೈಕ್ (ka21k8948)ಪರಸ್ಪರ ಡಿಕ್ಕಿ  ಹೊಡೆದಿದ್ದು, ಬೈಕ್  ಸವಾರ ಸಣ್ಣಪುಟ್ಟ ಗಾಯದೊಂದಿಗೆ  ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Loading posts...

All posts loaded

No more posts

error: Content is protected !!