- Friday
- August 14th, 2026
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ ಸೆ. 20 ರಂದು ನಡೆಯಿತು. ಈ ಸಭೆಯಲ್ಲಿ 2024 - 25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ ಹಾಗೂ ಕೋಶಾಧಿಕಾರಿಯಾಗಿ ಕಾರ್ತಿಕ್ ಪೈಕ ಮತ್ತು ವಿವಿಧ ಪದಾಧಿಕಾರಿಗಳನ್ನು...
ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆಯಾಗಿತ್ತು,ಆತ ಸುಳ್ಯ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ತೆರಳಿ ಕೇರಳದ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆ ಪೋಲಿಸ್ ಅಧಿಕಾರಿಗಳು ಹಿಂದು ಯುವಕರನ್ನು ವಿಚಾರಣೆಯ ನೆಪದಲ್ಲಿ ಕರೆಸಿದ್ದರು. ಯುವಕರನ್ನು ಬಿಡಿಸಲು ಬಂದ ಕಾರ್ಯಕರ್ತನನ್ನು ಸೇರಿಸಿ ಬಂಧನ ಮಾಡಿ, ನ್ಯಾಯಾಂಗ ಬಂಧನ ಆಗುವಂತೆ ಪೋಲಿಸ್ ಅಧಿಕಾರಿಗಳು ಮಾಡಿದ್ದರು. ವಿದ್ಯಾರ್ಥಿನಿ ನೀಡಿದ ದೂರಿಗೆ...
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.22 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.2023-24ನೇ ಸಾಲಿನಲ್ಲಿ ಸಂಘವು 111.28 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 32.31 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ...
ಸುಳ್ಯದ ಪೈಚಾರಿನಿಂದ ಕರೆತಂದು ಸುಳ್ಯ ಬಸ್ಸು ನಿಲ್ದಾಣದ ಬಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಬಂಧಿತರು ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್, ಮಿಥುನ್ ಎಂದು ತಿಳಿದು ಬಂದಿದೆ. ಸದ್ಯ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಧೀಶರು 14 ದಿನಗಳ ವರೆಗೆ ನ್ಯಾಯಾಂಗ...
ಸುಳ್ಯ:ಅಮರ ಶ್ರೀ ಹಾಲ್ ಹತ್ತಿರದ ಸ್ನೇಹ ಶಾಲೆಯ ರಸ್ತೆ ಬಳಿ ಕೆಲ ದಿನಗಳಿಂದ ಓಮಿನಿ ಕಾರು ನಿಲುಗಡೆ ಮಾಡಲಾಗಿದ್ದು ಇದೀಗ ಓಮಿನಿ ಕಾರಿನಲ್ಲಿ ಕೊಳೆತ ಮಾದರಿಯಲ್ಲಿ ಶವವೊಂದು ಪತ್ತೆಯಾಗಿದೆ.
ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ಕುಮಾರ ಗೌಡರ ಪುತ್ರ ಪುಂಡರೀಕ ಗೌಡ ಪೂಜಾರಿಮನೆಯವರು ಶಂಕಿತ ಇಲಿಜ್ವರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.23 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಚೂಡಾಮಣಿ, ಪತ್ನಿ ವಿಶಾಲಾಕ್ಷಿ, ಪುತ್ರರಾದ ಧನುಶ್, ಪ್ರತೀಕ್, ವಿನುತ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ ಸಂಘದ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಡೆಸುವ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದು, ಈ ಬಗ್ಗೆ ಮನವಿ ಪತ್ರವನ್ನು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.ತಮ್ಮ ಮನವಿ ಪತ್ರದಲ್ಲಿ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿದ್ದು ಈ ಬೇಡಿಕೆಗಳು ಈಡೇರುವವರೆಗೆ ಸೆ.26 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ...
ದೊಡ್ಡೇರಿ ಶಾಲೆಯಲ್ಲಿ ಇಂದು ಊರವರು ಹಾಗೂ ಎಸ್ ಡಿ ಎಂ ಸಿ ಸಭೆ ನಡೆಯಿತು.ಶಾಲಾ ಮೈದಾನದಲ್ಲಿ ತೆಂಗಿನ ಸಸಿ ನೆಡಲು ತೆಗೆದ ಗುಂಡಿಗಳನ್ನು ಮುಚ್ಚಿ ಶಾಲಾ ಹಿಂಬದಿಯಲ್ಲಿ ಇರುವ ಜಾಗವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡುವ ಬಗ್ಗೆ ನಿರ್ಣಯಿಸಲಾಗಿದ್ದು, ಸಭೆ ಸೌಹಾರ್ದಯುತವಾಗಿ ಅಂತ್ಯವಾಯಿತು. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಪ್ರೇಮಿಗಳ ಸಂಘವನ್ನು ರಚಿಸುವುದೆಂದು ತೀರ್ಮಾನಿಸಲಾಯಿತು.
ಸುಳ್ಯದ ಪೈಚಾರಿನಲ್ಲಿ ಅನ್ಯ ಕೋಮಿನ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಹಲವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್ , ಮಿಥುನ್, ಕಿರಣ್ ಸೇರಿದಂತೆ ಕೆಲ ಯುವಕರನ್ನು ಠಾಣೆಗೆ ಬರಹೇಳಿ ಪೋಲಿಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಹಲ್ಲೆಗೊಳಗಾದ ವ್ಯಕ್ತಿ ಮತ್ತು...
ಸುಳ್ಯ : ದೇಲಂಪಾಡಿ ಮೂಲದ ಮಹಿಳೆಯೋರ್ವರು ಆತ್ಮಹತ್ಯೆ ಯತ್ನ ನಡೆಸಿದ್ದಾರೆಂಬ ಬಗ್ಗೆ ಅದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದ ಹೇಳಿಕೆ ಪಡೆಯುವ ಉದ್ದೇಶದಿಂದ ಸುಳ್ಯಕ್ಕೆ ಆದೂರು ಪೋಲಿಸ್ ಅಧಿಕಾರಿಗಳ ಜತೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಇಂಟಿಮೇಶನ್ ನೀಡಿದ ಬಳಿಕ ಬಂದಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ...
Loading posts...
All posts loaded
No more posts
