ಅರಂತೋಡು : ಸ್ಕೂಟಿ ಹಾಗೂ ಕಾರು ಅಪಘಾತ – ಸವಾರನಿಗೆ ಗಾಯ

ಸುಳ್ಯದಿಂದ ಮಡಿಕೇರಿ ಗೆ ಹೋಗುವ ಕಾರು ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಸ್ಕೂಟಿ ಮಧ್ಯೆ ಅರಂತೋಡಿನಲ್ಲಿ ಅಪಘಾತ ಸಂಭವಿಸಿದ ಇದೀಗ ವರದಿಯಾಗಿದೆ. ಸ್ಕೂಟಿ ಸವಾರನಿಗೆ ಗಾಯಗಳಾಗಿದ್ದು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಅರಂತೋಡು : ವಿಷ ಸೇವಿಸಿದ್ದ ಕಾರು ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು

ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಾರು ಚಾಲಕ ಶೇಷಪ್ಪ ಗೌಡ ಚಿಕಿತ್ಸೆ ಫಲಿಸದೆ ಅ.12 ರಂದು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಳ್ಯ, ಅರಂತೋಡು ಭಾಗದಲ್ಲಿ ಅಂಬಾಸಿಡರ್ ಕಾರು ಚಾಲಕರಾಗಿ ಚಿರಪರಿಚಿತರಾಗಿದ್ದರು. ಪಾಲ್ತಾಡಿನಶೇಷಪ್ಪ ಗೌಡ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯದ ಕೆವಿಜಿ...
Ad Widget

ಅರಂತೋಡು : ಮಾತೃ ಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ

ವಿಶ್ವ ಹಿಂದೂಪರಿಷದ್ ಭಜರಂಗದಳ ಮಾತೃ ಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಹನುಮಾನ್ ಶಾಖೆ ಅರಂತೋಡು ಇದರ ನೂತನ ಮಾತೃ ಶಕ್ತಿ ದುರ್ಗಾವಾಹಿನಿ ಘಟಕ ಉದ್ಘಾಟನೆ ಕಾರ್ಯಕ್ರಮ ಅ.12ರಂದು ಆರಂತೋಡು ರಬ್ಬರ್ ಹಾಲು ಉತ್ಪಾದಕರ ಸಹಕಾರಿ ಸಂಘ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು ವಹಿಸಿದ್ದರು. ವೇದಿಕೆ ಯಲ್ಲಿ ಸುಳ್ಯ ಪ್ರಖಂಡ ಅಧ್ಯಕ್ಷರಾದ...

ಸುಳ್ಯದ ಮಹಿಳಾ ದಸರಾದಲ್ಲಿ  ಜನರನ್ನು ಆಕರ್ಷಿಸುತ್ತಿದೆ ಚೈತ್ರ ಯುವತಿ ಮಂಡಲದ ಸ್ಟಾಲ್

ಸುಳ್ಯ ಮಹಿಳಾ ದಸರಾದ  ಅಂಗವಾಗಿ ಮಹಿಳೆಯರಿಗೆ   ನೀಡಿರುವ ಸ್ಟಾಲ್ ಗಳಲ್ಲಿ ಕೆಲವೊಂದು ಗೃಹ ಸಲಕರಣೆಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಇಲ್ಲಿ ಅಜ್ಜಾವರದ ಚೈತ್ರ ಯುವತಿ ಮಂಡಲದ ವತಿಯಿಂದ 10 ನೇ ಕೌಂಟರ್ ನಲ್ಲಿ ತೆರೆಯಲಾದ ಸ್ಟಾಲ್ ನಲ್ಲಿ ಹಳ್ಳಿಯ ಮತ್ತು ಪಾರಂಪರಿಕ ಆಹಾರ ಸಾಮಾಗ್ರಿ ಮತ್ತು ಪರಿಸರ ಸ್ನೇಹಿ...

ಎನ್ ಕೆ ಅಸೋಸಿಯೇಟ್ಸ್ ಸ್ಥಳಾಂತರಗೊಂಡು ನೂತನ ಕಛೇರಿಯಲ್ಲಿ ಶುಭಾರಂಭ

ಖ್ಯಾತ ನ್ಯಾಯವಾದಿ ನಾರಾಯಣ ಕೆ ಇವರ ಕಛೇರಿಯು ಸ್ಥಳಾಂತರಗೊಂಡು ಕೆವಿಜಿ ವೃತ್ತ ಕ್ಯಾಂಪಸ್ ಬಳಿಯ ಡಿ ಎಂ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲದಲಿ ನೂತನ ಕಛೇರಿಯು ಶುಭಾರಂಭಗೊಂಡಿತು. ಈ ಹಿಂದೆ ಸುಳ್ಯ ಪೋಲಿಸ್ ಠಾಣೆಯ ಬಳಿಯ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ ಕಛೇರಿಯು ಕಾರ್ಯಚರಿಸುತ್ತಿದ್ದು,  ಇದೀಗ ತಾಲೂಕು ಕಛೇರಿಯ ಮುಂಭಾಗದ ಕೆವಿಜಿ ವೃತ್ತ ಕ್ಯಾಪಸ್ ಬಳಿಯ ಡಿ...

ಸಾಹಿತಿ ಭೀಮರಾವ್ ವಾಷ್ಠರ್ ಅವರ ಮರಾಠಿ ಕವನಗಳು ಮಡಿಕೇರಿ ದಸರಾ  ಕವಿಗೋಷ್ಠಿಗಳಲ್ಲಿ ವಾಚನ

ಸುಳ್ಯದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಎರಡು ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಅ. 9 ರಂದು ಬೃಹತ್ತಾದ ಭವ್ಯ ಗಾಂಧಿ ಮಂಟಪದ ವೇದಿಕೆಯಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿ ಸಮಾರಂಭದಲ್ಲಿ "ಜಗಾತ್ಲ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಸುಬ್ರಹ್ಮಣ್ಯ ಅ.12: ರೋಟರಿ ಜಿಲ್ಲೆ 3181 ಇದರ ನಾಲ್ಕು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಒಳಗೊಂಡಂತೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಕ್ಟೋಬರ್ 20ರಂದು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿಸುವುದಾಗಿದೆ. ಈ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗಾಗಿ ರೋಟರಿ ಜಿಲ್ಲೆಯ ಅಧಿಕಾರಿಗಳು ಒಳಗೊಂಡಂತೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳ, ಸದಸ್ಯರುಗಳ ವಿಶೇಷ...

ಸುಳ್ಯ: ಅದ್ದೂರಿ ಮಹಿಳಾ ದಸರಾಕ್ಕೆ ಚಾಲನೆ – ವಸ್ತು ಪ್ರದರ್ಶನ ಮತ್ತು ಮಾರಾಟ

ಸುಳ್ಯ ದಸರ ಅಂಗವಾಗಿ ಮಹಿಳಾ ದಸರಾವನ್ನು ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದ್ದು, ದಸರಾ ಸಮಿತಿ ಗೌರವಾಧ್ಯಕ್ಷರಾದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಅ.12 ರಂದು ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ನಳಿನಿ ಕೃಷ್ಣ ಕಾಮತ್ ಉದ್ಘಾಟಿಸಿದರು . ಸಭಾ ವೇದಿಕೆಯಲ್ಲಿ ಶ್ರೀದೇವಿ ಭಟ್ , ನ.ಪಂ ಹಾಗೂ ಮಹಿಳಾ ಸಮಿತಿ ಅಧ್ಯಕ್ಷರಾದ ಶಶಿಕಲಾ...

ಎಲಿಮಲೆ : ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಂದ ವ್ಯಕ್ತಿತ್ವ ವಿಕಸನ ತರಬೇತಿ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು ..ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಈ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ಸರಕಾರಿ ಪ್ರೌಢಶಾಲಾ ಎಲಿಮೆಲೆಯಲ್ಲಿ ಏರ್ಪಡಿಸಲಾಗಿದೆ. ಶಿಬಿರದಂದು ಜೆಸಿಐನ ವಲಯ ತರಬೇತುದಾರರಾದ ಪ್ರದೀಪ್ ಬಾಕಿಲ ಅವರು ಎನ್ಎಸ್ಎಸ್...

ಹಾಲೆಮಜಲು ಪುಸ್ತಕ ಗೂಡಿಗೆ ಅರೆಭಾಷೆ ಅಕಾಡೆಮಿಯಿಂದ ಪುಸ್ತಕ ಕೊಡುಗೆ

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿರುವ ಬಸ್ಸು ತಂಗುದಾಣದ ಪುಸ್ತಕ ಗೂಡಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕೊಡಮಾಡುವ ವಿವಿಧ ಸಾಹಿತಿಗಳು ಬರಹಗಾರರು ಬರೆದಿರುವ ಅರೆಬಾಷೆಯ ಕವನ ಸಂಕಲನ, ಅರೆ ಭಾಷೆ ಲಿಪಿ ವ್ಯಾಕರಣ ಸೇರಿದಂತೆ ಇನ್ನಿತರ ಸಾಹಿತ್ಯ ಕಥೆಗಳಿರುವ ಪುಸ್ತಕಗಳನ್ನು ಮಡಿಕೇರಿ ದಸರಾ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ...
Loading posts...

All posts loaded

No more posts

error: Content is protected !!