- Thursday
- August 13th, 2026
ನ.09 ಶನಿವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10.00 ರಿಂದ...
ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 68ನೆಯ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 06 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಸುಳ್ಯ ತಾಲೂಕಿನಲ್ಲಿ ಪೆನ್ಸಿಲ್ ಆರ್ಟ್ ಮೂಲಕ ಅಲ್ಲದೆ ವಾಲ್ ಆರ್ಟ್,...
ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚರಂಡಿಗೆ ಇಳಿದ ಘಟನೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ನ.8ರಂದು ರಾತ್ರಿ ಸಂಭವಿಸಿದೆ. ಮಳೆ ಕಾರಣ ಲಾರಿ ಆನೆಗುಂಡಿಯ ಪ್ರಯಾಣಿಕರ ಬಸ್ಸು ತಂಗುದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಸಂಚರಿಸಿ, ರಸ್ತೆ ಬದಿಯ ವಿದ್ಯುತ್...
ಉಬರಡ್ಕದ ಸೂಂತೋಂಡು ಬಳಿಯಲ್ಲಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿ ರಚನಾ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕರು ಹಾಗೂ ಊರಿನವರು ಆಸ್ಪತ್ರೆ ಬಳಿ ನೆರೆದಿದ್ದು ಎಲ್ಲರಲ್ಲೂ ಶೋಕ ಮನೆ ಮಾಡಿದೆ. ಮೃತಪಟ್ಟ ವಿದ್ಯಾರ್ಥಿನಿ ಹೈಸ್ಕೂಲ್,, ಪಿಯುಸಿಯಲ್ಲಿ ಪ್ರತಿಭಾನ್ವಿತೆಯಾಗಿದ್ದು ಊರಿನಲ್ಲು ಜನರ ಜೊತೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು. ಯಕ್ಷಗಾನ ಕಲೆಯಲ್ಲೂ ತನ್ನ ಪ್ರತಿಭೆ ಪ್ರದರ್ಶಿಸಿದ್ದ ರಚನಾ ಇತ್ತೀಚೆಗೆ ನಡೆದ...
ಸುಳ್ಯ ಸೂಂತೋಡು ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡುತೋಟ ನಾರಾಯಣ ಕಾಡುತೋಟರವರ ಮಗಳು ರಚನ ಕಾಡುತೋಟ ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು ಇನ್ನೊರ್ವ ಸಹ ಸವಾರೆ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿ ಅನನ್ಯ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ವಿದ್ಯಾರ್ಥಿನಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ವರ್ಷದ...
ಉಬರಡ್ಕದ ರಸ್ತೆಯ ಸೂಂತೋಡು ಸಮೀಪ ಸ್ಕೂಟಿ ಹಾಗೂ ಬಸ್ ನಡುವೆ ಇದೀಗ ಅಪಘಾತ ಸಂಭವಿಸಿದ್ದು ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿವ ವಿವರ ಲಭ್ಯವಾಗಿಲ್ಲ.
ಸುಳ್ಯದ ಬೀರಮಂಗಲದಲ್ಲಿ ನಾಗರೋಥ್ಥಾನ ಯೋಜನೆಯಡಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಪುತ್ತೂರು ಸಹಾಯಕ ಆಯುಕ್ತರು ಇಂದು ಭೇಟಿ ನೀಡಿದರು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸುಳ್ಯದ ಪ್ರವಾಸಿ ಮಂದಿರದಲ್ಲಿ ಎ. ಸಿ ಯವರನ್ನು ಭೇಟಿಯಾಗಿ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣದ ಬಗ್ಗೆ ಗಮನಕ್ಕೆ ತಂದ ಸಂದರ್ಭದಲ್ಲಿ ಉದ್ಯಾನವನಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ...
ಸುಬ್ರಹ್ಮಣ್ಯ ರೋಟರಿ ಕ್ಲಬ್ ಆಶ್ರಯದಲ್ಲಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ರೋಟರಿ ಕ್ಲಬ್ ನವರು ಕೌಶಲ್ಯ ಅಭಿವೃದ್ಧಿ ಯೋಜನೆ ಅನ್ವಯ ಸುಬ್ರಹ್ಮಣ್ಯದ ದೇವರಹಳ್ಳಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಮಿಷಿನ್ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮವನ್ನು ನಡೆಸಲಿರುವರು.ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ವಹಿಸಲಿರುವರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ...
ಕಲ್ಲೆಂಬಿಯ ರಾಘವ ಬೆಳ್ಳಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್( 26) ಎಂಬ ಯುವಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮನೆಯವರು ಸುಳ್ಯಕ್ಕೆ ಬಂದಿದ್ದಾಗ ಪುನಃ ಮನೆಗೆ ಹಿಂತಿರುಗಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಮೃತ ಪಟ್ಟ ಯುವಕ ಸುಳ್ಯದ ಕೆ.ವಿ.ಜಿ.ಕಾನೂನು...
Loading posts...
All posts loaded
No more posts
