ಸುಳ್ಯ : ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚೇತನ್ ಕಜೆಗದ್ದೆ ಆಯ್ಕೆ

ರಾಜ್ಯ ಯುವ ಕಾಂಗ್ರೆಸ್ ನ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಗೆ  ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆ ನಡೆದ ಚುನಾವಣೆಯಲ್ಲಿ ಚೇತನ್ ಕಜೆಗದ್ದೆ  ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹರಿಹರ ಪಳ್ಳತ್ತಡ್ಕ : ಫೆ.11 ರಂದು ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಫೆ.11 ರಂದು ವಾರ್ಷಿಕ ನೇಮೋತ್ಸವ ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30 ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶ ಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00...
Ad Widget

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಈ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ

ಕೊಲ್ಲಮೊಗ್ರ : ಜೇಸಿಐ ಪಂಜ ಪಂಚಶ್ರೀ ಹಾಗೂ ಮೂಡೂರು ಇನ್ಫೋಟೆಕ್ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಜೇಸಿಐ ಪಂಜ ಪಂಚಶ್ರೀ, ಮೂಡೂರು ಇನ್ಫೋಟೆಕ್ ಪಂಜ ಇವರ ಜಂಟಿ ಆಶ್ರಯದಲ್ಲಿ ಕೊಲ್ಲಮೊಗ್ರದ ಕೆ .ವಿ .ಜಿ. ಅನುದಾನಿತ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರದ ಅಂಗವಾಗಿ ನಲಿವಿನ ಓದು ಗೆಲುವಿನ ಕಡೆಗೆ ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರವು ಫೆ.06 ರಂದು ನಡೆಯಿತು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಜೇಸಿಐ ಪಂಜ...

ಫೆ.‌12 ರಂದು ಸುಳ್ಯ ಹಾಗೂ ಸಂಪಾಜೆಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ – ಸಾರ್ವಜನಿಕರಿಗೆ ಅಹವಾಲು ಸಲ್ಲಿಸಲು ಅವಕಾಶ

ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ವತಿಯಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ ಕಾರ್ಯಕ್ರಮಮನ್ನು ಫೆ. 12 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಸುಳ್ಯ ತಾಲೂಕು ಕಛೇರಿಯಲ್ಲಿ ಆಯೋಜಿಸಲಾಗಿರುತ್ತದೆ. ಬಳಿಕ ಅಪರಾಹ್ನ 2.00 ಗಂಟೆಯಿಂದ ಅಪರಾಹ್ನ 3.00 ಗಂಟೆಯವರೆಗೆ ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮವನ್ನು ನಡೆಯಲಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಶಾಲೆಗೆ ದತ್ತಿನಿಧಿ ಕೊಡುಗೆ

ಸುಬ್ರಹ್ಮಣ್ಯ ಫೆ 05 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಅತ್ಯುನ್ನತ ಅಂಕ ಪಡೆದವರಿಗೆ ರೂ.10000 ದತ್ತಿ ನಿಧಿಯನ್ನು ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ದತ್ತಿ ನಿಧಿಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಮೂಕಮಲೆ ಅವರಿಗೆ ಹಸ್ತಾಂತರಿಸಿದರು. ಮುಖ್ಯ...

ಒಂದೇ ರಾತ್ರಿಯಲ್ಲಿ ಎರಡು ಬಾರಿ ದಾಳಿ ನಡೆಸಿದ ಚಿರತೆ – ಎರಡು ನಾಯಿ ಬಲಿ – ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

https://youtu.be/_B5XQShoCu0?si=WU9apUhF8jjAKIr2 ಅಜ್ಜಾವರ ಗ್ರಾಮದ ಪಡ್ಡಂಬೈಲು ನಿವಾಸಿ ಶಂಕರ ಪಾಟಾಳಿಯವರ ಮನೆಯ ಅಂಗಳಕ್ಕೆ ಎರಡು ಬಾರಿ ಬಂದ ಚಿರತೆ  ಎರಡು ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಬಿಎಸ್ಎನ್ ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿಯವರ ಅಂಗಳದಲ್ಲಿ ರಾತ್ರಿ ಸುಮಾರು 1.40 ಸುಮಾರಿಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ...

ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್. ಅವರಿಗೆ ಕಾಯರ್ತೋಡಿ ದೇವಸ್ಥಾನದ ವತಿಯಿಂದ ಗೌರವಾರ್ಪಣೆ

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಡಳಿತಾಧಿಕಾರಿಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್. ಅವರನ್ನು ದೇವಸ್ಥಾನದ ಪರವಾಗಿ ತಂತ್ರಿವರ್ಯರು ಇಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಕಾಮತ್, ನಾರಾಯಣ ಕೇಕಡ್ಕ, ಕುಸುಮಾಧರ ಎ.ಟಿ., ಚಂದ್ರಶೇಖರ ಅಡ್ಪಂಗಾಯ, ದೇವಿಪ್ರಸಾದ್ ಕುದ್ಪಾಜೆ, ವಿಠಲ್ ಬಾಣೂರು,...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.20, 21 ಹಾಗೂ 22 ರಂದು ನಡೆಯಲಿದ್ದು, ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.04 ರಂದು ನಡೆಯಿತು.ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್, ಸಹ ಅರ್ಚಕರಾದ ಕೃಷ್ಣ ಕುಮಾರ್...

ಲಗೇಜನ್ನು ಕಳ್ಳರು ಕದ್ದೋಯ್ದ  ಹಿನ್ನೆಲೆ ಕುಕ್ಕೆಯಿಂದ ಕೇರಳದ ಇಡುಕ್ಕಿಗೆ ನಡೆದೇ ಹೊರಟ ಕುಟುಂಬ – ವಿಷಯ ತಿಳಿದು ಬಸ್ ಪ್ರಯಾಣ ವೆಚ್ಚ ಭರಿಸಿದ ಸಮಾಜ ಸೇವಕ ಚಂದ್ರಶೇಖರ ಕಡೋಡಿ, ಧರ್ಮಗುರು ಆದರ್ಶ ಜೋಸೆಫ್

ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ, ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರು ಕಡೆಗೆ ತೆರಳಿದ್ದು ಅಲ್ಲಿಂದ ಮಾಹೇ ಚರ್ಚಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ತಮ್ಮಲಿದ್ದ ಲಗೇಜ್ ನಲ್ಲಿ ಪರ್ಸ್ ಮೊಬೈಲ್ ಸಮೇತ ಇಟ್ಟಿದ್ದು, ಕಳ್ಳರು ಸಂಪೂರ್ಣ ಲಗೇಜ್ ಕದ್ದಿದ್ದು, ದಿಕ್ಕು ತೋಚದೆ ಅವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಬಂದಿದ್ದರು. ನಂತರ ದೂರ...
Loading posts...

All posts loaded

No more posts

error: Content is protected !!