ಕಂಡಕ್ಟರ್ ಅಚಾತುರ್ಯಕ್ಕೆ ಸಹಾಯವಾಣಿಗೆ ದೂರು ನೀಡಿದ ಮಕ್ಕಳು : ತುರ್ತು ಸ್ಪಂದಿಸಿದ ಇಲಾಖೆ

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ನಿಂದಾದ ಅಚಾತುರ್ಯಕ್ಕೆ ಸಹಾಯವಾಣಿಗೆ ಮಕ್ಕಳು ದೂರು ನೀಡಿದ್ದು, ಸಂದೇಶ ಬಂದ ಕೂಡಲೇ ಇಲಾಖೆ ತುರ್ತು ಸ್ಪಂದಿಸಿದ ಘಟನೆ ಅ.25 ರಂದು ನಡೆದಿದೆ.ಮಡಪ್ಪಾಡಿಯ ಕಡ್ಯ ರೇಷ್ಮಾ ಯತೀಶ್ ರವರ ಪುತ್ರ 4 ನೇ ತರಗತಿ ವಿದ್ಯಾರ್ಥಿ ಆರ್ಯ ಕಡ್ಯ ಹಾಗೂ ಪವಿತ್ರ ಮಹೇಶ್ ದಂಪತಿಗಳ ಪುತ್ರ...

ಕಾವಿನಮೂಲೆ : ಟಿಂಬರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಬೆಳ್ಳಾರೆ ಕಾವಿನಮೂಲೆ ಸಮೀಪ ಟಿಂಬರ್ ಲಾರಿಯೊಂದು ಪಲ್ಟಿಯಾದ ಘಟನೆ ಅ.29 ರ ರಾತ್ರಿ ನಡೆದಿದೆ. ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ರಬ್ಬರ್ ಮರಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಮರದ ತುಂಡುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು.
Ad Widget

ತಾಯಿ ಗದರಿಸಿದಕ್ಕೆ ಮಂಗಳೂರಿನಿಂದ ಪೆರ್ಲ ಅಜ್ಜಿಯ ಮನೆಗೆ ಸೈಕಲಿನಲ್ಲಿ ಹೊರಟ ಬಾಲಕ

ಮಂಗಳೂರಿನ ಕೊಂಚಾಡಿ ಪರಿಸರದ ಸೂರಜ್ ಎಂಬ ಬಾಲಕ ತಾಯಿ ಗದರಿಸಿದ್ದಕ್ಕೆ ಕೋಪಿಸಿಕೊಂಡು ತನ್ನ ಸೈಕಲ್ಲನ್ನು ಏರಿ ಮನೆಯವರಿಗೆ ವಿಷಯ ತಿಳಿಸದೇ ಕೇರಳದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೊರಟಿರುತ್ತಾನೆ. ಮಧ್ಯಾಹ್ನ 12:00 ಗಂಟೆಗೆ ಕಾಣೆಯಾದ ಬಾಲಕ ಆತಂಕದಿಂದ ಮನೆಯವರು ಹುಡುಕಲು ಆರಂಭಿಸಿದಾಗ ಹುಡುಗ ಕಲ್ಲಡ್ಕದಲ್ಲಿ ಇದ್ದಾನೆ ಎಂದು ವಿಷಯ ತಿಳಿದು ಬಂದಿದೆ. ಕಲ್ಲಡ್ಕದಲ್ಲಿ ಬಾಲಕ ಸೈಕಲ್ನಲ್ಲಿ ಬರುವುದನ್ನು...

ಬೆಳ್ಳಾರೆ ಝಖರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

ಬೆಳ್ಳಾರೆ ಝಖರಿಯಾ ಜುಮಾ ಮಸ್ಜಿದ್ ನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಮಸೀದಿಯ ಆಡಳಿತಾಧಿಕಾರಿ ಮುಹಮ್ಮದ್ ರಾಫಿ ಯವರ ನಿರ್ಧೆಶನ ಪ್ರಕಾರ ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಾಯಿತು. ಸ್ಥಳೀಯ ಖತೀಬ್ ಯೂನುಸ್ ಸಖಾಫಿ ವಯನಾಡ್ ರವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆದು ಪ್ರವಾದಿಯವರ ಜೀವನ ಕುರಿತು...

ಶುಭವಿವಾಹ ಮೇಘನಾ – ಶಶಾಂಕ್

ನೆಲ್ಲೂರು ಕೆಮ್ರಾಜೆ ಗ್ರಾಮದ ಗಟ್ಟಿಗಾರು ಚಂದ್ರಶೇಖರ ರವರ ಪುತ್ರಿ ಮೇಘನಾ ಳ ವಿವಾಹವು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಹಡೀಲು ಚಿನ್ನಪ್ಪ ಗೌಡರ ಪುತ್ರ ಶಶಾಂಕ್ ರೊಂದಿಗೆ ಅ.29 ರಂದು ಉಡುಪಿ ಚಿಟ್ಟಾಡಿಯ ಶ್ರೀ ಸರಸ್ವತಿ ಸಭಾಭವನದಲ್ಲಿ ನಡೆಯಿತು.

ಪೆರಾಜೆ : ರಾತ್ರಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ , ಬೆಳ್ಳಂಬೆಳಗೆ, ಪಂಚಾಯತ್ ನಿಂದ ತೆರವು

ಪೆರಾಜೆ ಗ್ರಾಮದ ಕುಂಬಳಚೇರಿಯಲ್ಲಿ ಕಳೆದ ರಾತ್ರಿ ಕುಂಡಾಡು ಚಾಮಕಜೆ ಭಾಗದ ನಿವಾಸಿಗಳು ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು , ಹಲವು ಯೋಜನೆಗಳು ನಿವಾಸಿಗಳನ್ನು ತಲಪಲಿಲ್ಲ ಎಂಬ ಆಕ್ರೋಶ, ಈ ಬಗ್ಗೆ ಸಹಿ ಸಂಗ್ರಹಿಸಿ ಬ್ಯಾನರ್ ನಲ್ಲಿ ಮುದ್ರಿಸಿದ್ದರು ಬೆಳಿಗ್ಗೆ ಪಂಚಾಯತ್ ನವರು ಇದನ್ನು ತೆರವು ಗೊಳಿಸಿದ್ದರು, ಬ್ಯಾನರ್ ಹಾಕಿರುವ ಕಾರಣ ವಿಚಾರಿಸದೆ, ಇದರ ಬಗ್ಗೆ ,...

ಸುಳ್ಯ ತಾಲೂಕು ಕಛೇರಿಯಲ್ಲಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಮಂಗಳೂರು ಇದರ ವತಿಯಿಂದ 'ಜಾಗೃತಿ ಅರಿವು ಸಪ್ತಾಹ 2020' ಕಾರ್ಯಕ್ರಮವು ಅ.29 ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಉಪಾಧೀಕ್ಷಕರಾದ ವಿಜಯಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸುಳ್ಯದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು. ಜಾಗೃತಿ ಅರಿವು ಸಪ್ತಾಹದ ಬಗ್ಗೆ ಉಪಾಧೀಕ್ಷಕರು ಮಾತನಾಡುತ್ತಾ ಭ್ರಷ್ಟಾಚಾರ ನಿರ್ಮೂಲನೆ, ಕಛೇರಿ...

ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಈದ್ ಮಿಲಾದ್ ಆಚರಣೆ

ಪೈಚಾರು ಬದ್ರಿಯಾ ಜುಮಾ ಮಸೀದಿಯ ಈದ್ ಮಿಲಾದ್ ಸಮಿತಿ ವತಿಯಿಂದ ಸರಳ ಈದ್ ಮಿಲಾದ್ ಆಚರಣೆ ಇಂದು ಮಸೀದಿ ವಠಾರದಲ್ಲಿ ನಡೆಯಿತು . ಧ್ವಜಾರೋಹಣ ನೆರವೇರಿಸಿ ಸಿಹಿ ವಿತರಣೆ ಮಾಡಲಾಯಿತು. ಮೌಲೂದ್ ಕಾರ್ಯಕ್ರಮವನ್ನು ಆಚರಿಸಿ ಪ್ರಾರ್ಥನಾ ಮಜ್ಲಿಸ್ ನಡೆಯಿತು. ಈ ಸಂದರ್ಭದಲ್ಲಿ ಜಮಾಹತ್ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಸ್ಥಳೀಯರು...

ತಾಲೂಕಿನಾದ್ಯಂತ ಸರಳ ಈದ್ ಮಿಲಾದ್ ಆಚರಣೆ

ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಆಚರಣೆ ಕೋವಿಡ್ 19 ರ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಎಲ್ಲಾ ಮಸೀದಿಗಳಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಪೈಗಂಬರ್ ಮಹಮ್ಮದ್ ರವರ ಹುಟ್ಟಹಬ್ಬದ ಅಂಗವಾಗಿ ಆಚರಿಸಲ್ಪಡುವ ಈ ಹಬ್ಬವು ಮದರಸ ವಿಧ್ಯಾರ್ಥಿಗಳ ಹಾಗೂ ಮುಸಲ್ಮಾನ ಭಾಂದವರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾಥಾ ದೊಂದಿಗೆ ಸಂತೋಷ ಸಡಗರದಿಂದ ಆಚರಿಸಲಾಗುತ್ತಿತ್ತು. ಆದರೇ...

ಸುಬ್ರಹ್ಮಣ್ಯ : ನ 8 ರಿಂದ 14 ರವರೆಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಕುಕ್ಕೆಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನವಂಬರ್ 8 ರಿಂದ 14ರ ವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ....
Loading posts...

All posts loaded

No more posts

error: Content is protected !!