ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡೆರೇಷನ್ ಮೊಗರ್ಪಣೆ ಶಾಖೆಯ ವಾರ್ಷಿಕ ಮಹಾಸಭೆ -ಅಧ್ಯಕ್ಷ ಜುನೈದ್ ಎಸ್.ಯು. -ಪ್ರ.ಕಾರ್ಯದರ್ಶಿ ಮಶೂದ್

ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ ಎಸ್ ಎಫ್ ಮೊಗರ್ಪಣೆ ಶಾಖೆ ಇದರ ಮಹಾಸಭೆ ಡಿಸೆಂಬರ್ 6 ರಂದು ಮೊಗರ್ಪಣೆ ಮದರಸಾ ಸಭಾಂಗಣದಲ್ಲಿ ನಡೆಯಿತು. ಜಯನಗರ ಮದರಸ ಸದರ್ ಮೊಹಲ್ಲಿಂ ಅಬ್ದುಲ್ ಕರೀಮ್ ಸಖಾಫಿ ಕಟ್ಟತ್ತಾರ್ ದುಆ ನೆರೆವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷರಾದ ಅಸಿಫ್ ಜಯನಗರ ಅಧ್ಯಕ್ಷತೆಯನ್ನು ವಹಿಸಿದ್ದರು. ಸೆಕ್ಟರ್ ಸಮಿತಿಯಿಂದ ಆಗಮಿಸಿದ ಸಿದ್ದೀಕ್ ಹಿಮಮಿ...

ಪೋಷಣ್ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಾಕರ್ತೆಯರಿಗೆ ಮತ್ತು ಐಸಿಡಿಎಸ್ ಮೇಲ್ವಿಚಾರಕರಿಗೆ ಸ್ಮಾರ್ಟ್ ಪೋನ್ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಸುಳ್ಯ ಇದರ ವತಿಯಿಂದ ಪೋಷಣ್ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಐಸಿಡಿಎಸ್ ಮೇಲ್ವಿಚಾರಿಕರಿಗೆ ಸ್ಮಾರ್ಟ್ ಪೋನ್ ವಿತರಣೆ ಕಾರ್ಯಕ್ರಮವು ಸ್ತ್ರೀಶಕ್ತಿ ಭವನ ಸುಳ್ಯ ಇಲ್ಲಿ ಇಂದು ನಡೆಯಿತು. ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯ ಇಲಾಖೆ ಮತ್ತು ಶಿಶು...
Ad Widget

ಮಲ್ನಾಡ್ ಪ್ರಿಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಟ : ಪ್ರಥಮ ಫೈರ್ ಜಟ್ಟಿಪಳ್ಳ – ದ್ವಿತೀಯ ರಾಜ್ ಸೌಂಡ್ಸ್ ಉಬರಡ್ಕ

ಮಲ್ನಾಡ್ ಪ್ರಿಮಿಯರ್ ಲೀಗ್ 2020 (MPL Trophy 2020 Season - 2) ಓವರ್ ಆರ್ಮ್ ಕ್ರಿಕೇಟ್ ಪಂದ್ಯಕೂಟವು ಮಹಾತ್ಮಗಾಂಧಿ ಮಲ್ನಾಡ್ ಮೈದಾನ ಕೊಡಿಯಾಲಬೈಲಿನಲ್ಲಿ ನಡೆಯಿತು. ಲೀಗ್ ಹಂತದಲ್ಲಿ ಭಾಗವಹಿಸಿದ 6 ತಂಡಗಳಲ್ಲಿ ಫೈರ್ ಜಟ್ಟಿಪಳ್ಳ ತಂಡವು ಪ್ರಥಮ ಬಹುಮಾನ, ಹಾಗೂ ದ್ವಿತೀಯ ಬಹುಮಾನವನ್ನು ರಾಜ್ ಸೌಂಡ್ಸ್ ಉಬರಡ್ಕ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಶಿವ ಅಂಬ್ಯುಲೆನ್ಸ್...

ಗಾಂಧಿನಗರ ಮಸೀದಿಯ ಕಾಣಿಕೆ ಡಬ್ಬಿ ಕಳ್ಳತನ

ಗಾಂಧಿನಗರ ಮಸೀದಿ ನವೀಕರಣಗೊಳ್ಳುತ್ತಿದ್ದು, ಇದಕ್ಕಾಗಿ ಮಸೀದಿ ಪ್ರವೇಶ ದ್ವಾರದ ಬಳಿ ಕಾಣಿಕೆ ಡಬ್ಬಿ ಇರಿಸಲಾಗಿತ್ತು. ಇವತ್ತು ಸಂಜೆ 5.30 ರವೇಳೆಗೆ ಇದು ಕಾಣೆಯಾಗಿದ್ದು, ಸುಮಾರು 20 ಸಾವಿರದಷ್ಟು ಹಣವಿದ್ದಿರಬಹುದೆಂದು ಅಂದಾಜಿಸಲಾಗಿದೆ. ಮಸೀದಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಸರಿಯಾದ ದಿಶೆಗೆ ಇಲ್ಲದ ಕಾರಣ ಕಳ್ಳತನ ನಡೆದ ಘಟನೆಯ ದೃಶ್ಯಾವಳಿ ಕಂಡುಬರಲಿಲ್ಲ ಎಂದು ತಿಳಿದುಬಂದಿದೆ.

ಕೊಲ್ಲಮೊಗ್ರ ಕೆಪಿಎಲ್ ಪಂದ್ಯಾಟ : ಎಡಬ್ಲ್ಯೂಎಂ ಜೋಕರ್ಸ್ ಪ್ರಥಮ- ಅಮ್ಮ ಕ್ರಿಕೇಟರ್ ದ್ವಿತೀಯ

ಸ್ಕೋರ್ಪಿಯನ್ ಕಿಂಗ್ ಕೊಲ್ಲಮೊಗ್ರ ಇದರ ಆಶ್ರಯದಲ್ಲಿ 8 ತಂಡಗಳ ಲೀಗ್ ಮಾದರಿಯ ಕ್ರಿಕೇಟ್ ಪಂದ್ಯಾಟ ಕೆಪಿಎಲ್ 2020 ಇಂದು ನಡೆಯಿತು. ಬಂಗ್ಲೆಗುಡ್ಡೆ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಎಡಬ್ಲ್ಯೂಎಂ ಜೋಕರ್ಸ್ ಕೊಲ್ಲಮೊಗ್ರ ಹಾಗೂ ದ್ವಿತೀಯ ಸ್ಥಾನವನ್ನು ಅಮ್ಮ ಕ್ರಿಕೇಟರ್ ಕೊಲ್ಲಮೊಗ್ರ ಪಡೆದುಕೊಂಡಿತು. ಬೆಸ್ಟ್ ಬೌಲರ್ ಆಗಿ ನಿಖಿಲ್ ಎನ್, ಬೆಸ್ಟ್ ಬ್ಯಾಟ್ಸ್‌ಮನ್ ಮನು...

ಸುಳ್ಯ ಎಬಿವಿಪಿ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ – ಸಾಮಾಜಿಕ ಸಾಮರಸ್ಯ ದಿನಾಚರಣೆ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ವತಿಯಿಂದ ಡಿ.6 ರಂದು ಅಂಬೇಡ್ಕರ್ ರವರ 64ನೇ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನು ಶ್ರೀ ಚೆನ್ನಕೇಶವ ದೇವಸ್ಥಾನ ಸಭಾಂಗಣ ಸುಳ್ಯ ದಲ್ಲಿ ಮಾಡಲಾಯಿತು . ಈ ಸಂದರ್ಭದಲ್ಲಿ ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕರಾದ ಚಂದ್ರಶೇಖರ್ ಉಪಸ್ಥಿತರಿದ್ದರು. ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಚಂದ್ರಶೇಖರ್ ರವರು ಡಾ.ಬಿ.ಆರ್ ಅಂಬೇಡ್ಕರ್ ರವರ...

ಸುಬ್ರಹ್ಮಣ್ಯ : ಡಾ.ಬಿ.ಆರ್ ಅಂಬೇಡ್ಕರ್ ಪುಣ್ಯಸ್ಮರಣೆ – ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 64 ನೇ ಪುಣ್ಯಸ್ಮರಣೆಯ ಅಂಗವಾಗಿ ಇಂದು ಸಾಮಾಜಿಕ ಸಾಮರಸ್ಯ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಎ.ವಿ.ನಾಗೇಶ್ ಆದಿಸುಬ್ರಹ್ಮಣ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟ್ಟ ವಾಲಗದಕೇರಿ ವಹಿಸಿದ್ದರು. ಸುರೇಶ್ ಪರ್ಕಳ ಬೌದ್ಧಿಕ್ ನೀಡಿದರು. ಈ...

ಬೆಳ್ಳಾರೆ : ತಡಗಜೆಯಲ್ಲಿ ಅಳವಡಿಸಿದ್ದ ಚುನಾವಣಾ ಬಹಿಷ್ಕಾರ ಬ್ಯಾನರ್ ತೆರವುಗೊಳಿಸಿದ ಗ್ರಾಮಸ್ಥರು

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಗೆ ಸಂಬಂಧಪಟ್ಟಂತೆ ಅಲ್ಲಿನ ತಡಗಜೆ ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಚುನಾವಣಾ ಬಹಿಷ್ಕಾರದ ಮೊರೆಹೋಗಿದ್ದರು. ವಾರ್ಡಿನಲ್ಲಿ ಸುಮಾರು 25 ವರ್ಷಗಳಿಂದ ಪ್ರಮುಖ ಬೇಡಿಕೆಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳಿದ್ದರೂ ಇಲ್ಲಿನ ಪಂಚಾಯತ್ ಸದಸ್ಯರಿಂದ ಹಿಡಿದು ವಿಧಾನಸಭಾ ಸದಸ್ಯರವರೆಗೆ ಕೇವಲ ಭರವಸೆಯಲ್ಲದೆ ಸೂಕ್ತ ಸ್ಪಂದನೆ...

ಜಯನಗರ ಮೂರನೇ ವಾರ್ಡ್ ದಲಿತರ ಕಾಲೋನಿಗೆ ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ಭೇಟಿ

    ಸುಳ್ಯ ನಗರ ಮೂರನೇ ವಾರ್ಡಿನ ಜಯನಗರ ಪರಿಸರದಲ್ಲಿ ದಲಿತ ಸಮುದಾಯದ ಸುಮಾರು 10ಕ್ಕೂ ಹೆಚ್ಚು ಕುಟುಂಬಗಳು ಚಂಡೆಮೂಲೆ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳು ಎದ್ದು ಕಾಣುವ ಈ ಕಾಲೋನಿಗೆ ಸ್ಥಳೀಯ ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡಂಕೆರಿ ಭೇಟಿ ನೀಡಿ ಅತ್ಯವಶ್ಯಕ ಸಮಸ್ಯೆಗಳ ಪರಿಹಾರ ಕಾರ್ಯಗಳನ್ನು ಒದಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಡಿಸೆಂಬರ್ 6ರಂದು...

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ – ಹೈನುಗಾರರ ಹಿತ ಕಾಪಾಡುವ ಕೆಲಸವಾಗಿದೆ : ಹರೀಶ್ ಕುಮಾರ್

ಕೋವಿಡ್ ಸಂಕಷ್ಟದ ಕಾಲದಲ್ಲಿಯು ಹಾಲು ಉತ್ಪಾದಕರ ಹಿತ ಕಾಯುವ ಕಾರ್ಯ ಕೆಎಂಎಫ್ ಮೂಲಕ ಆಗಿದೆ. ಹೈನುಗಾರರು ಹೈನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ರೂಪಿಸಬೇಕು ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಕಾರಿ ಹರೀಶ್ ಕುಮಾರ್ ಹೇಳಿದರು. ಮುಕ್ಕೂರು ಶಾಲಾ ವಠಾರದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ...
Loading posts...

All posts loaded

No more posts

error: Content is protected !!