- Wednesday
- August 5th, 2026
ನೂತನ ಕೃಷಿ ಕಾನೂನು ಖಂಡಿಸಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಳ್ಳಾರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬ್ಯಾಂಕ್, ಸರ್ಕಾರಿ ಬಸ್ಸು, ಆಟೋರಿಕ್ಷಾ, ಖಾಸಗಿ ವಾಹನಗಳು, ಪೆಟ್ರೋಲ್ ಬಂಕ್ ಎಂದಿನಂತೆ ಸೇವೆ ನೀಡುತ್ತಿದ್ದು ಜನಸಂಚಾರ ಎಂದಿನಂತಿದೆ.
ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ಇದರ ವತಿಯಿಂದ ಹಿಜಾಮ ಶಿಬಿರವು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಡಿ. 6 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಅಲ್ ಅಮೀನ್ ಯೂತ್ ಸೆಂಟರ್ ಇದರ ಗೌರವಾಧ್ಯಕ್ಷರಾದ.ಇಬ್ರಾಹಿಮ್ ಪೈಝಿಯಾವರು ದುವಾಃ ನೆರವೇರಿಸಿದರು. ಉದ್ಘಾಟನೆಯನ್ನು ಕುವ್ವತ್ತುಲ್ ಇಸ್ಲಾಂ ಮದರಸ ಸದರ್ ಮುಹಲ್ಲಿಮ್ ಮುಯ್ಯದ್ದೀನ್ ಲತೀಫಿಯವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಎವೈಸಿ ಇದರ ಅಧ್ಯಕ್ಷರಾದ ಕರೀಮ್...
ಕಾವು ಸಮೀಪದ ಮದ್ಲ ಬಳಿ 33 ಕೆವಿ ವಿದ್ಯುತ್ ಲೈನ್ ನ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಿದ್ಯುತ್ ಕಂಬ ಮುರಿದಿದ್ದು ಇದರಿಂದ ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಲ್ಮಡ್ಕ ಗ್ರಾಮದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವಕ್ಕೆ 7ನೇ ವರ್ಷದ ಸಾಮೂಹಿಕ ತಂಬಿಲ ಮತ್ತು ಶ್ರೀ ಮುಳ್ಳುಗುಳಿಗ ದೈವಕ್ಕೆ ಅಗೇಲು ಸಮ್ಮಾನ ಕಾರ್ಯಕ್ರಮ ಡಿ.06 ರ ಸಂಜೆ ಮೊಕ್ತೇಸರರಾದ ರಾಮಚಂದ್ರ ಎಡಪತ್ಯ ಮತ್ತು ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆಯಿತು. ಸಾಮೂಹಿಕ ತಂಬಿಲ ಹಾಗೂ ಅಗೇಲು ಸೇವೆಯನ್ನು ಕೃಷ್ಣಮಣಿಯಾಣಿ...
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಹೊಸ ತಹಶೀಲ್ದಾರ್ ಆಗಿ ಕು.ಅನಿತಾಲಕ್ಷ್ಮೀ ಅವರನ್ನು ನೇಮಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಸುಳ್ಯ ತಹಶೀಲ್ದಾರ್ ಅನಂತಶಂಕರ್ ರವರು ಕಡಬ ತಹಶೀಲ್ದಾರ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಶಾಖೆಯ ತಹಶೀಲ್ದಾರ್ ಆಗಿರುವ ಕು. ಅನಿತಾಲಕ್ಷ್ಮೀ ಅವರನ್ನು ಸುಳ್ಯ ತಹಶೀಲ್ದಾರ್...
ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ಮತ್ತು ಪಕ್ಷದ ಸಂಪಾಜೆ ವಲಯ ಚುನಾವಣಾ ಸಮಿತಿಯ ಜಂಟಿ ಸಭೆಯು ಸಂಪಾಜೆಯಲ್ಲಿ ವಲಯಾದ್ಯಕ್ಷ ಮಹಮ್ಮದ್ ಕುಂಞಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಪಾಜೆ ವಲಯ ಉಸ್ತುವಾರಿ ಗಳಾದ ಅಶ್ರಫ್ ಟರ್ಲಿ ಮತ್ತು ಫಾರೂಕ್ ಕಾನಕ್ಕೋಡ್ ರವರು ಸಭೆಯ ವಿಷಯಗಳನ್ನು ಮಂಡಿಸಿದರು ಮತ್ತು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಪರಿಚಯವನ್ನು ಮಾಡಿ...
ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿ ನೂತನವಾಗಿ ರಬ್ಬರ್ ಉತ್ಪಾದಕರ ಸಂಘ ರಚನೆಗೊಂಡಿದ್ದು ಇದರ ಉದ್ಘಾಟನೆ ಮತ್ತು ಸೆಮಿನಾರ್ ಕಾರ್ಯಕ್ರಮ ಇಂದು ನಡೆಯಿತು. ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ ದೀಪ ಬೆಳಗಿಸಿ, ಉದ್ಘಾಟಿಸಿದರು. ಮಾವಿನಕಟ್ಟೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಬಾಬು ಗೌಡ ಅಚಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು....
ರೈತ ಕಾರ್ಮಿಕ ದಲಿತ ಒಕ್ಕೂಟವು ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಕರೆ ನೀಡಿರುವ ಡಿ.8 ರಂದು ಕರೆ ನೀಡಿರುವ ಭಾರತ ಬಂದ್ ಗೆ ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರ ಘಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಸಂಚಾಲಕ ಅಶೋಕ್...
ಚೊಕ್ಕಾಡಿ ಪ್ರಾ. ಕೖ.ಪ.ಸ.ಸಂಘ ನಿ. ಕುಕ್ಕುಜಡ್ಕ ಇದರ ವತಿಯಿಂದ ಕುಂಟಾರು ಶ್ರೀ ರವೀಶ ತಂತ್ರಿಯವರಿಗೆ ಗೌರವಾರ್ಪಣೆ ನಡೆಯಿತು.ಸಂಘದ ಉಪಾಧ್ಯಕ್ಷ ಕೇಶವ ಕರ್ಮಾಜೆ, ನಿರ್ದೇಶಕ ಗಣೇಶ್ ಪಿಲಿಕಜೆ, ಸದಸ್ಯರಾದ ಪದ್ಮನಾಭ ಬೊಳ್ಳೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಕುಮಾರ್ ಸಿಬ್ಬಂದಿಗಳಾದ ದುಗ್ಗಪ್ಪ ಗೌಡ ಕುಡುಂಬಿಲ, ಅಚ್ಚುತ ಗೌಡ ದೊಡ್ಡಡ್ಕ, ಪ್ರಸಾದ್ ಕೆರೆಮೂಲೆ, ಹರೀಶ್ ದೊಡ್ಡಡ್ಕ, ನಳಿನಾಕ್ಷಿ ಹಾಗೂ ಇತರರು...
ಕುಕ್ಕುಜಡ್ಕದಲ್ಲಿ ಗಣೇಶ್ ಪಿಲಿಕಜೆ ಮಾಲಕತ್ವ ಶ್ರೀ ಭಗವತಿ ಸೇವಾ ಕೇಂದ್ರ, ಸ್ವೀಟ್ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದ ಇಂದು ನಡೆಯಿತು. ಕುಂಟಾರು ಶ್ರೀ ರವೀಶ ತಂತ್ರಿಯವರಿಂದ ವೈದಿಕ ಕಾರ್ಯಕ್ರಮ ನಡೆಯಿತು. ನಮ್ಮಲ್ಲಿ ಶುಚಿ ರುಚಿಯಾದ ತಿಂಡಿ ತಿನಿಸುಗಳು ಹಾಗೂ ಫ್ರೆಶ್ ಜ್ಯೂಸ್ ಮತ್ತು ಕಬ್ಬಿನ ಹಾಲು ದೊರೆಯುತ್ತದೆ. ಹಾಗೂಎಲ್ಲಾ ರೀತಿಯ ಆನ್ ಲೈನ್...
Loading posts...
All posts loaded
No more posts
