- Saturday
- August 15th, 2026
ತುಳುವರ ಆಚರಣೆ ಎಂದರೆ ಅದು ವೈಜ್ಞಾನಿಕ, ಪ್ರಾಕೃತಿಕ. ಪರಿಸರವನ್ನು ಬಿಟ್ಟು ಮಾಡುವ ತುಳುವರ ಯಾವ ಆಚರಣೆಯು ಬಹುಶಃ ಇಲ್ಲ. ‘ಪತ್ತನಾಜೆಗ್ ಪತ್ತ್ ಪನಿ ಬರ್ಸ’ (ಪತ್ತನಾಜೆಯ ದಿನ ಹತ್ತು ಹನಿಯಾದರೂ ಮಳೆ) ಎಂದು ನನ್ನ ಅಜ್ಜಿ ಬಾಲ್ಯದಲ್ಲಿ ನನಗೆ ಹೇಳುತ್ತಿದ್ದರು. ಇದು ಈಗಲೂ ಕಿವಿಗೆ ಕೇಳುತ್ತದೆ ಮತ್ತು ಇದು ಸತ್ಯವೂ ಹೌದು. ಬೇಸಿಗೆಯ ತಾಪದಿಂದ ಬೇಸತ್ತ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ ಶಾಲೆ ಐನೆಕಿದು, ಎ.ಜೆ ಆಸ್ಪತ್ರೆ & ಸಂಶೋಧನಾ ಕೇಂದ್ರ ಬ್ಲಡ್ ಬ್ಯಾಂಕ್ ಮಂಗಳೂರು, ಕುಕ್ಕೆಶ್ರೀ ಆಟೋ ಚಾಲಕ ಮತ್ತು ಮಾಲಕರ ಸಂಘ (ರಿ.) ಸುಬ್ರಹ್ಮಣ್ಯ, ಬಿ.ಎಂ.ಎಸ್ ಸಂಯೋಜಿತ ಶ್ರೀ ಹರಿ ಆಟೋ ಚಾಲಕ ಮಾಲಕರ ಸಂಘ (ರಿ.) ಹರಿಹರ ಪಲ್ಲತ್ತಡ್ಕ...
ಕೊಲ್ಲಮೊಗ್ರು ಗ್ರಾಮದ ಮೋಹನಾಂಗಿ ದೇವಿದಾಸ್ ಕಜ್ಜೋಡಿ ಅವರ ಮನೆಯಲ್ಲಿ ಮೇ.22 ರಂದು ಶ್ರೀ ಪಾಷಾಣಮೂರ್ತಿ ದೈವಗಳ ನೇಮೋತ್ಸವವು ನಡೆಯಿತು.ಸಂಜೆ ಭಂಡಾರ ತೆಗೆದು ನಾಲ್ಕು ಪಾಷಾಣಮೂರ್ತಿ ದೈವಗಳ ನೇಮೋತ್ಸವ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಯವರು ಮೇ. 26 ರಂದು ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಲಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಆದುದರಿಂದ ಸಾರ್ವಜನಿಕ ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಎಂದು ತಹಶೀಲ್ದಾರ್ ಕು. ಅನಿತಾಲಕ್ಷ್ಮೀ ತಿಳಿಸಿದ್ದಾರೆ.
ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಮೇ.20ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿರಾಟ್ ಫ್ರೆಂಡ್ಸ್(ರಿ.)ಬೆಳ್ಳಾರೆ ಅಧ್ಯಕ್ಷ ಸಚಿನ್ ರೈ ಪೂವಾಜೆ ವಹಿಸಿದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಮನೋಜ್ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿಯಾಗಿ ಧೀರಜ್. ಪಿ, ಕೋಶಾಧಿಕಾರಿಯಾಗಿ ಪ್ರದೀಪ್ ಬೆಳ್ಳಾರೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು.
ಬೆಳ್ಳಾರೆ ಶ್ರೀ ಸುಬ್ರಹ್ಮಣ್ಯೇಶ್ವರ ಮೋಟಾರ್ ವರ್ಕ್ಸ್ ನ ಮಾಲಕರಾದ ಶ್ರೀ ತಿರುಮಲೇಶ್ವರ ಕುಲಾಲ್ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಕೆ.ಸಿ.ಬೇಬಿ ದಂಪತಿಗಳ ಪುತ್ರಿ ಕು|ಹರ್ಷಿತಾ.ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 552 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪುತ್ತೂರು ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ.
2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಲ್ಲಮೊಗ್ರು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಶೇ.75 ಫಲಿತಾಂಶ ದಾಖಲಿಸಿದೆ.32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 24 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 1 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ
ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಕಾವೇರಿ ಕೋಂ ಭರತ್ ಹಾಲೆಮಜಲು ನಾಲ್ಕೂರು ಇವರ ಪುತ್ರಿ ಕು. ಭುವಿತ ಪಿ ಬಿ ಇವರು 576 ಅಂಕ ಗಳಿಸಿರುತ್ತಾರೆ. ಎಲಿಮಲೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಇವರಿಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಆಸಕ್ತಿ ಇದ್ದು, ಪಿಸಿಎಂಸಿ ಯಲ್ಲಿ ಪದವಿ ಮಾಡಬೇಕು ಎಂಬ ಆಸೆ ಇದೆ.
ಪ್ರದೀಪ್ ಟಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15 ಡಿಸ್ಟಿಂಕ್ಷನ್,38 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯೊಂದಿಗೆ 71 ಮಂದಿ ಉತ್ತೀರ್ಣರಾಗಿ ಶೇಕಡಾ 82.6 ಫಲಿತಾಂಶ ದಾಖಲಾಗಿದೆ. ಪ್ರದೀಪ್ ಟಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬಾಳಿಲ ತೋಟ ಮನೆ...
Loading posts...
All posts loaded
No more posts
