ಕಾವಿನಮೂಲೆ ನಾರಾಯಣ ಭಟ್ ರವರ ತಾಳೆ ತೋಟದಲ್ಲಿ ಕಂಡುಬಂದ ಹೆಬ್ಬಾವು – ಪಂಜ ಅರಣ್ಯ ಸಿಬ್ಬಂದಿಗಳಿಂದ ರಕ್ಷಣೆ

ಬಾಳಿಲ ಗ್ರಾಮದ ಕಾವಿನಮೂಲೆ ನಾರಾಯಣ ಭಟ್ಟರ ತಾಳೆ ತೋಟದಲ್ಲಿ ಹೆಬ್ಬಾವೊಂದು ಕಂಡುಬಂದಿದ್ದು ಅದನ್ನು ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ಸಹಕಾರದೊಂದಿಗೆ ಪಂಜ ಅರಣ್ಯ ಸಿಬ್ಬಂದಿಗಳಾದ ಗಣೇಶ್ ಹಾಗೂ ಬರಮಪ್ಪ ರವರು ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಚೆಂಬು, ಗೂನಡ್ಕದಲ್ಲಿ 6 ನೇ ಬಾರಿಗೆ ಕಂಪನ

ಚೆಂಬು, ಗೂನಡ್ಕ ಭಾಗದಲ್ಲಿ ಮಧ್ಯಾಹ್ನ 1.21ಕ್ಕೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಜತೆಗೆ ಭಾರಿ ಶಬ್ಧ ಕೇಳಿ ಬಂದಿದೆ. ಭೂಮಿ ಕಂಪಿಸಿದ ಅನುಭವ ನೀಡಿದ್ದು ಜನರನ್ನು ಭಯಭೀತರನ್ನಾಗಿಸಿದೆ.
Ad Widget

ಜು.4 ; ಗುತ್ತಿಗಾರು ಗ್ರಾ.ಪಂ.ವ್ಯಾಪ್ತಿಯ ಅಂಗಡಿ ಕೋಣೆಗಳ ಏಲಂ

ಗುತ್ತಿಗಾರು ಗ್ರಾಮ ಪಂಚಾಯತ್‌ನ ಈ ಕೆಳಗಿನ ಕಾಣಿಸಿದ ಬಾಡಿಗೆ ಕಟ್ಟಡಗಳನ್ನು ದಿನಾಂಕ 04 - 07 - 2022 ನೇ ಸೋಮವಾರ ಅಪರಾಹ್ನ ಗಂಟೆ 3.00 ಕ್ಕೆ ಸರಿಯಾಗಿ ಗ್ರಾ.ಪಂ. ಕಛೇರಿಯಲ್ಲಿ ಬಹಿರಂಗವಾಗಿ ಏಲಂ ಮಾಡಲಾಗುವುದು. ಮೆಟ್ಟಿನಡ್ಕ ಬಸ್ಸು ತಂಗುದಾಣ ಅಂಗಡಿ ಕೋಣೆ, ಹಾಲೆಮಜಲು ಬಸ್ಸು ತಂಗುದಾಣ ಅಂಗಡಿ ಕೋಣೆ, ಕಮಿಲ ಬಸ್ಸು ತಂಗುದಾಣ ಅಂಗಡಿ...

ಬೆಂಗಳೂರಿನಲ್ಲಿ ಛಾಯಾ ಸಾಧಕ ಪ್ರಶಸ್ತಿ ಸ್ವೀಕರಿಸಿದ ಸ್ಟುಡಿಯೋ ಗೋಪಾಲ್

ಸುಳ್ಯದಲ್ಲಿ ಹಲವಾರು ವರುಷಗಳಿಂದ ಸ್ಟುಡಿಯೋ ನಡೆಸಿಕೊಂಡು ಬರುತ್ತಿರುವ ಗೋಪಾಲಕೃಷ್ಣ ಕೆ.ಎಸ್ ರವರಿಗೆ ರಾಜ್ಯ ಮಟ್ಟದ ಛಾಯಾ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂ.28 ರಂದು ನಡೆದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಛಾಯಾ ಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಮುರಳಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು...

ಚೆಂಬು : ಸರಣಿ ಭೂಕಂಪದ ಬಳಿಕ ವಿಪರೀತ ಮಳೆಗೆ ಭೂಕುಸಿತ

ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿಯಾಗಿದೆ. ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ಕುಸಿದ ಮಣ್ಣು ಕುಸಿದಿದೆ. ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಶಬ್ಧದೊಂದಿಗೆ ಕುಸಿದ ಮಣ್ಣು ಕುಸಿದಿದೆ. ರಾತ್ರಿಯಿಡೀ‌ ನಿರಂತರ ಮಳೆ ಸುರಿದ‌ ಹಿನ್ನೆಲೆ ಭೂಕುಸಿತ ವಾಗಿರುವ ಸಾಧ್ಯತೆ ಎನ್ನಲಾಗಿದೆ. ಸರಣಿ ಭೂಕಂಪನ ಕೇಂದ್ರ ಸ್ಥಳದಲ್ಲಿ ಭೂಕುಸಿತದಿಂದ ಆಗಿರುವುದರಿಂದ ಸ್ಥಳೀಯರಲ್ಲಿ...

ರಾಜ್ಯ ಮಟ್ಟದ ಜಂಗಮ ಶೆಟ್ಟಿ ರಂಗ ಪ್ರಶಸ್ತಿಗೆ ರಂಗಕರ್ಮಿ ಜೀವನರಾಂ ಸುಳ್ಯ ಆಯ್ಕೆ

ಕಲಬುರಗಿ ರಂಗ ಸಂಗಮ ಕಲಾವೇದಿಕೆಯು ಕಳೆದ 9 ವರ್ಷಗಳಿಂದ ನೀsಡುತ್ತಾ ಬಂದಿರುವ ಎಸ್.ಬಿ.ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿಗೆ ಹಿರಿಯ ರಂಗಕರ್ಮಿ, ರಂಗಮಾಂತ್ರಿಕ ಜೀವನರಾಂ ಸುಳ್ಯರನ್ನು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ, ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು, ಶಾಂತಾ ಕುಲಕರ್ಣಿ, ಸಾಹಿತಿ ಬಿ.ಎಚ್.ನಿರಗುಡಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್,...

ಕನ್ನಯ್ಯ ಲಾಲ್ ಭೀಕರ ಹತ್ಯೆಯನ್ನು ಖಂಡಿಸಿ ವಿ.ಹೆಚ್.ಪಿ. ಪ್ರತಿಭಟನೆ – ರಾಷ್ಟ್ರಪತಿಗೆ ಮನವಿ

ರಾಜಸ್ಥಾನದ ಉದಯಪುರ ಎಂಬಲ್ಲಿ ನಡೆದ ಟೈಲರ್ ಕನ್ನಯ್ಯ ಲಾಲ್ ರವರ ಭೀಕರ ಹತ್ಯೆಯನ್ನು ಖಂಡಿಸಿ ಸುಳ್ಯ ವಿಶ್ವ ಹಿಂದೂ ಪರಿಷದ್, ಬಜರಂಗದಳ ಪ್ರಖಂಡದ ವತಿಯಿಂದ ಪ್ರತಿಭಟನಾ ಸಭೆಯು ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಜೂ.30 ರಂದು ನಡೆಯಿತು. ಬಳಿಕ ಸೇರಿದ ಸಂಘಟನೆಯ ಕಾರ್ಯಕರ್ತರು ತಹಶಿಲ್ದಾರರ ಮುಖಾಂತರ ಹತ್ಯೆಗೈದ ಕೊಲೆಗಡುಕರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ರಾಷ್ಟ್ರಪತಿಯವರಿಗೆ ಮನವಿಯನ್ನು...

ಸುಬ್ರಹ್ಮಣ್ಯದಿಂದ ಹಿಂತಿರುಗಿದ ರಾಜ್ಯಪಾಲರು – ಸುಳ್ಯ- ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ನಿನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ , ದೇವರ ದರ್ಶನ ಪಡೆದು, ಸರ್ಪ ಸಂಸ್ಕಾರ ಪೂಜೆ ನೆರವೇರಿಸಿ ಇಂದು ಸುಳ್ಯ ಮಾರ್ಗವಾಗಿ ಮಡಿಕೇರಿಗೆ ತೆರಳಿದರು. ಸುಳ್ಯ ನಗರದಲ್ಲಿ ಸುಳ್ಯ ಪೋಲೀಸರು ಬಂದೋಬಸ್ತ್ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

5 ನೇ ಬಾರಿಗೆ ಸದ್ದಿನೊಂದಿಗೆ ಕಂಪಿಸಿದ ಭೂಮಿ

ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗಗಳಲ್ಲಿ ೫ನೇ ಬಾರಿ ಕಂಪನದ ಅನುಭವ ಉಂಟಾಗಿದೆ. ಚೆಂಬು, ಗೂನಡ್ಕ ಹಾಗೂ ಉಬರಡ್ಕದಲ್ಲಿ 10.45 ಕ್ಕೆ ಕಂಪಿಸಿದೆ ಎಂದು ತಿಳಿದು ಬಂದಿದೆ. ಜನರು ಕಂಪನಕ್ಕೆ ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಕಲ್ಮಕಾರು :-l ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮನೆಯ ಮಾಡಿನ ದುರಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ ಜೂ.28 ರಂದು ಕಲ್ಮಕಾರು ಪದ್ನಡ್ಕದ ಕಮಲ ಎಂಬುವವರ ಮನೆಯ ಮಾಡಿನ ದುರಸ್ತಿ ಕಾರ್ಯ ಮಾಡಲಾಯಿತು. ಜೂ.28 ರಿಂದ ಜೂ.30 ರವರೆಗೆ ದುರಸ್ತಿ ಕಾರ್ಯ ನಡೆಸಲಾಯಿತು. ಜೂ.30 ರಂದು ಮನೆಯ ಸ್ವಚ್ಚತೆ ಮಾಡಿ ಮನೆಯವರಿಗೆ ಬಿಟ್ಟು ಕೊಡಲಾಯಿತು.ಈ ಮಾಡಿನ...
Loading posts...

All posts loaded

No more posts

error: Content is protected !!